ಯುವ ಆಟಗಾರನನ್ನು ಹೆಸರಿಸಿದ ಪಾರ್ಥಿವ್ ಪಟೇಲ್!

Parthiv Patel

ಪಾರ್ಥಿವ್ ಅಜಯ್ ಪಟೇಲ್-Parthiv Patel

ಪಾರ್ಥಿವ್ ಅಜಯ್ ಪಟೇಲ್ ಅವರು ಮಾಜಿ ಭಾರತೀಯ ವೃತ್ತಿಪರ ಕ್ರಿಕೆಟಿಗ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮತ್ತು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಅವರು ಎಡಗೈ ಬ್ಯಾಟ್ಸ್‌ಮನ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್‌ಗಾಗಿ ಆಡಿದ್ದರು.

9 ನೇ ವಯಸ್ಸಿನಲ್ಲಿ ಬೆರಳನ್ನು ಕಳೆದುಕೊಂಡ ಅವರು ಆರಂಭದಲ್ಲಿ ವಿಕೆಟ್ ಕೀಪ್ ಮಾಡಲು ಕಷ್ಟವಾಗಿದ್ದರು, ಆದರೆ ಸಾಕಷ್ಟು ಅಭ್ಯಾಸದ ನಂತರ ಅವರು ಅದನ್ನು ಬಳಸಿಕೊಂಡರು.

ಪಾರ್ಥಿವ್ 2002 ರಲ್ಲಿ ಭಾರತ ತಂಡದಲ್ಲಿ ಆಡಿದಾಗ, ಅವರು ಟೆಸ್ಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ವಿಕೆಟ್-ಕೀಪರ್ ಎನಿಸಿಕೊಂಡರು.

ಎಂಎಸ್ ಧೋನಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮುವುದರೊಂದಿಗೆ, ಪಾರ್ಥಿವ್ ಪಟೇಲ್ ಅವರ – ಈ ಹಿಂದೆ ಭಾರತದ ಅತ್ಯಂತ ಭರವಸೆಯ ವಿಕೆಟ್-ಕೀಪರ್ ಮರೆಯಾಯಿತು.

Parthiv Patel

ಡಿಸೆಂಬರ್ 2020 ರಲ್ಲಿ, ಪಟೇಲ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅವರ ನಿವೃತ್ತಿಯ ನಂತರ, ಪಟೇಲ್ ಅವರು ಟ್ಯಾಲೆಂಟ್ ಸ್ಕೌಟ್ ಆಗಿ ಮುಂಬೈ ಇಂಡಿಯನ್ಸ್‌ಗೆ ಸೇರಿದರು.

ಐಪಿಎಲ್ 2022ರ ಆವೃತ್ತಿಯಲ್ಲಿ ಸಾಕಷ್ಟು ಆಟಗಾರರಿಂದ ಅದ್ಭುತವಾದ ಪ್ರದರ್ಶನಗಳು ಬರುತ್ತಿದ್ದು, ಅದರಲ್ಲೂ ಕೆಲ ಆಟಗಾರರು ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಟೂರ್ನಿಗೆ ಮೆರುಗಿ ನೀಡಿದ್ದಾರೆ.

ಜೋಸ್ ಬಟ್ಲರ್ ಬ್ಯಾಟಿಂಗ್‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತವಾದ ಫಾರ್ಮ್ ಪ್ರದರ್ಶಿಸುತ್ತಿದ್ದರೆ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಾಹಲ್ ಪೂರ್ತಿ ಮೇಲುಗೈ ಸಾಧಿಸಿದ್ದಾರೆ.

ಈ ಅನುಭವಿಗಳಲ್ಲದೆ ಹಲವು ಯುವ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಉಮ್ರಾನ್ ಮಲಿಕ್, ಆಯುಷ್ ಬದೋನಿ, ತಿಲಕ್ ವರ್ಮ ಮೊದಲಾದ ಆಟಗಾರರಿಂದ ಅದ್ಭುತವಾದ ಪ್ರದರ್ಶನಗಳು ಬರುತ್ತಿದೆ.

ಆಯುಷ್ ಬದೋನಿ

ಸಂದರ್ಭದಲ್ಲಿ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ತಮ್ಮ ಮನ ಗೆದ್ದ ಯುವ ಆಟಗಾರನ ಬಗ್ಗೆ ವಿಶೇಷವಾದ ಮಾತುಗಳನ್ನು ಹೇಳಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಬ್ಯಾಟರ್ ಆಯುಷ್ ಬದೋನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ಬದೋನಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಮೊದಲ ಪಂದ್ಯದಲ್ಲಿಯೇ ಗುಜರಾತ್ ಟೈಟನ್ಸ್ ವಿರುದ್ಧ 54 ರನ್‌ಗಳ ಪ್ರದರ್ಶನ ನೀಡಿ ಪರಿಣಾಮಕಾರಿ ಆಟವನ್ನಾಡಿದ ಆಯುಷ್ ಬದೋನಿ ಚೊಚ್ಚಲ ಪಂದ್ಯದಲ್ಲಿಯೇ ಮನಗೆದ್ದಿದ್ದಾರೆ.

“ಆಯುಷ್ ಬದೋನಿ ಆಟ ನನಗೆ ಅಚ್ಚರಿಯುಂಟು ಮಾಡಿದ್ದು, ನಾವು ಸಾಕಷ್ಟು ಪಂದ್ಯಗಳಲ್ಲಿ ಸಾಕಷ್ಟು ಅಚ್ಚರಿಯ ಪ್ರದರ್ಶನಗಳನ್ನು ಕಂಡಿದ್ದೇವೆ.

Ayush Badoni

ಅದರಲ್ಲಿ ಅದ್ಭುತವಾಗಿ ಸಿಕ್ಸರ್ ಅಟ್ಟುವ ರೀತಿ, ಪಂದ್ಯವನ್ನು ಮುಗಿಸುವ ಶೈಲಿ, ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸುವ ಬಗೆಯಿಂದಾಗಿ ನನಗೆ ಅಚ್ಚರಿಯ ಆಟಗಾರನಾಗಿ ಆಯುಷ್ ಬದೋನಿಯನ್ನು ಆಯ್ಕೆ ಮಾಡಲು ಬಯಸುತ್ತೇನೆ” ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಯುವ ಆಟಗಾರ ಆಯುಷ್ ಬದೋನಿ ಮಧ್ಯಮ ಕ್ರಮಾಂಕದಲ್ಲಿ ನೀಡಿದ ಪ್ರದರ್ಶನ ಉತ್ತಮವಾಗಿತ್ತು, ಆಡಿರುವ 7 ಪಂದ್ಯಗಳಲ್ಲಿ ಆಯುಷ್ ಬದೋನಿ ಒಟ್ಟು 134 ರನ್‌ಗಳಿಸಿದ್ದು ಇದರಲ್ಲಿ ಎರಡು ಪಂದ್ಯಗಳಲ್ಲಿ ಅಜೇಯವಾಗಿ ಉಳಿದುಕೊಂಡಿದ್ದಾರೆ.

26.80ರ ಸರಾಸರಿಯಲ್ಲಿ 139.58ರ ಸ್ಟ್ರೈಕ್‌ರೇಟ್‌ನಲ್ಲಿ ಆಯುಷ್ ಬದಲಾನಿ ಬ್ಯಾಟ್ ಬಿಸಿದ್ದು, 20 ಲಕ್ಷ ಮೂಲ ಬೆಲೆಗೆ ಆಯುಷ್ ಬದೋನಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿತ್ತು.

ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ ಕೊನೆಯ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದೆ.

ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್‌ಗೇರುವ ಸ್ಪರ್ಧೆಯಿಂದ ಅಧಿಕೃತವಾಗಿ ಹೊರ ಬೀಳುವಂತಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬದೋನಿ ಕೇವಲ 14 ರನ್‌ಗಳನ್ನು ಮಾತ್ರವೇ ಗಳಿಸಲು ಪ್ರಯತ್ನಿಸಿದರೂ, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಟೂರ್ನಿಯ ಎರಡನೇ ಶತಕಗಳಿಸಿದರು.

ಈ ಪ್ರದರ್ಶನದ ಕಾರಣದಿಂದಾಗಿ ಲಕ್ನೋ ತಂಡ 169 ರನ್‌ಗಳ ಗುರಿಯನ್ನು ಮುಂಬೈ ತಂಡಕ್ಕೆ ನೀಡಿತ್ತು. ಈ ಮೊತ್ತವನ್ನು ರಕ್ಷಣೆ ಮಾಡುವಲ್ಲಿ ಲಕ್ನೋ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಏಳನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ!- World Cup

https://jcs.skillindiajobs.com/

Social Share

Leave a Reply

Your email address will not be published. Required fields are marked *