ಐಪಿಎಲ್ ನಲ್ಲಿ 26 ವಿದೇಶಿ ಆಟಗಾರರು ಗೈರು!

Players Missing In Ipl

ಐಪಿಎಲ್ 2022

IPL 2022ರ ಆಟ ಆಡುವ ದಿನಗಳು ಈಗ ಹತ್ತಿರವಾಗಿವೆ, ಲೀಗ್ ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಹೆಚ್ಚಾಗುತ್ತಿದೆ.

ಈ ಬಾರಿ ಎರಡು ಹೊಸ ತಂಡಗಳು ಹೆಚ್ಚಿರುವುದರಿಂದ ರೋಚಕತೆ ಇನ್ನಷ್ಟು ಹೆಚ್ಚುತ್ತಿದೆ, ಇದಲ್ಲದೇ ಹಲವು ತಂಡಗಳ ಜೆರ್ಸಿಯ ಬಣ್ಣವೂ ಬದಲಾಗಲಿದೆ.

ಆದರೆ ಇದೆಲ್ಲದರ ನಡುವೆ ದೊಡ್ಡ ಸುದ್ದಿ ಏನೆಂದರೆ ಈ ಲೀಗ್​ನ ಆರಂಭದ ಕೆಲವು ಪಂದ್ಯಗಳಿಂದ 26 ಆಟಗಾರರು ದೂರ ಉಳಿಯುತ್ತಿದ್ದಾರೆ.

ಆದರೆ ದೊಡ್ಡ ನಷ್ಟ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್  ತಂಡಗಳಿಗೆ ಆಗಲಿದೆ.ipl

ಐಪಿಎಲ್ 2022 ರಿಂದ ದೂರ ಉಳಿಯಲಿರುವ 26 ಆಟಗಾರರು ಅದರ ಈವೆಂಟ್‌ನ ಮೊದಲ ವಾರದಲ್ಲಿ ಮಾತ್ರ ಆಟ ಆಡುವುದಿಲ್ಲ. ಅಂದರೆ, ಎರಡನೇ ವಾರದಿಂದ ಅವರು ಲೀಗ್‌ಗೆ ಲೀಗ್ ಗೆ ಬಂದು ಆಟ ಆಡುವ ಎಲ್ಲಾ ಸಾಧ್ಯತೆಗಳಿವೆ.

ಅಂದರೆ ಮೊದಲ ವಾರದಲ್ಲಿ ಮಾತ್ರ ಫ್ರಾಂಚೈಸಿಗಳು ಆ 26 ಆಟಗಾರರ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಕೆಲವರ ಅಂತರಾಷ್ಟ್ರೀಯ ಬದ್ಧತೆ, ಕೆಲವರಿಗೆ ವೈಯಕ್ತಿಕ ಕಾರಣಗಳು ಮತ್ತು ಹಲವರಿಗೆ ಇಂಜುರಿಗಳಾಗಿರುವುದರಿಂದ ಈ ಆಟಗಾರರು ಮೊದಲ ವಾರ ಆಟ ಆಡುತ್ತಿಲ್ಲ.Players Missing In Ipl

ದೆಹಲಿ ಹಾಗೂ ಲಕ್ನೋ ತಲಾ 05 ಜನ ಗೈರು

IPL 2022 ರ ಮೊದಲ ವಾರದಲ್ಲಿ ಆಡದಿರುವ 26 ಆಟಗಾರರ ಪಟ್ಟಿಯನ್ನು ನೋಡುವುದಾದರೆ, ಅವರಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಫ್ರಾಂಚೈಸಿಯವರಾಗಿದ್ದಾರೆ.

ಈ ಎರಡೂ ತಂಡಗಳ ತಲಾ 05 ಆಟಗಾರರು IPL 2022ರ ಮೊದಲ ವಾರದ ಪಂದ್ಯಗಳಿಗೆ ಗೈರು ಹಾಜರಾಗಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಎನ್ರಿಖ್ ನಾರ್ಖಿಯಾ (ಗಾಯ), ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್‌ಗಿಡಿ ಅವರ ಹೆಸರುಗಳು ಗೈರಾಗಲಿದ್ದಾರೆ.

 ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೈಲ್ ಮೈಯರ್ಸ್, ಮಾರ್ಕ್ ವುಡ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಆಟವನ್ನು ಲಕ್ನೋ ಸೂಪರ್ ಜೈಂಟ್ಸ್‌ ಮಿಸ್ ಮಾಡಿಕೊಳ್ಳುತ್ತದೆ.ipl match

ಇವರುಗಳಲ್ಲಿ ಮಾರ್ಕ್ ವುಡ್ ಕೂಡ ಗಾಯದ ಸಮಸ್ಯೆಯಿಂದ ಲೀಗ್‌ನಿಂದ ಹಿಂದೆ ಹೋಗಿದ್ದಾರೆ.

ಈ ಆಟಗಾರರು ಸಹ ಗೈರು?

ಇವರಲ್ಲದೆ, ಜಾನಿ ಬೈರ್‌ಸ್ಟೋವ್, ಕಗಿಸೊ ರಬಾಡ ಮತ್ತು ನಾಥನ್ ಎಲ್ಲಿಸ್ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಮೊದಲ ವಾರ ಆಟ ಆಡುತ್ತಿಲ್ಲ.

ಆರ್‌ಸಿಬಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್, ಜೋಸ್ ಹ್ಯಾಜಲ್‌ವುಡ್ ಮತ್ತು ಬೆಹ್ರೆನ್‌ಡಾರ್ಫ್, ಸನ್‌ರೈಸರ್ಸ್ ಹೈದರಾಬಾದ್‌ನಿಂದ ಏಡನ್ ಮಾರ್ಕ್ರಾಮ್, ಸ್ಯಾನ್ ಅಬಾಟ್ ಮತ್ತು ಮಾರ್ಕೊ ಯಾನ್ಸನ್ ಗೈರು.ipl live

ರಾಜಸ್ಥಾನ ರಾಯಲ್ಸ್‌ನಿಂದ ರಾಸಿ ವಾನ್ ಡೆರ್ ಡುಸ್ಸೆ, ಕೆಕೆಆರ್‌ನಿಂದ ಆರನ್ ಫಿಂಚ್ ಮತ್ತು ಪ್ಯಾಟ್ ಕಮ್ಮಿನ್ಸ್ ಗೈರು.

ಸಿಎಸ್‌ಕೆಯಿಂದ ಡ್ವೇನ್ ಪ್ರಿಟೋರಿಯಸ್ ಹೊರತುಪಡಿಸಿ, ಮುಂಬೈ ಇಂಡಿಯನ್ಸ್‌ನ ಜೋಫ್ರಾ ಆರ್ಚರ್ ಮೊದಲ ವಾರದ ಪಂದ್ಯಗಳಿಗೆ ಗೈರು ಹಾಜರಾಗಲಿದ್ದಾರೆ.

ಅವರಲ್ಲಿ ಹೆಚ್ಚಿನವರು ಐಪಿಎಲ್ 2022 ಪ್ರಾರಂಭವಾದಾಗ ತಮ್ಮ ತಂಡಗಳಿಗಾಗಿ ಟೆಸ್ಟ್ ಸರಣಿಯನ್ನು ಆಡುವ ಆಟಗಾರರಾಗಿದ್ದಾರೆ, ಟೆಸ್ಟ್ ಸರಣಿಯು ಏಪ್ರಿಲ್ ಮೊದಲ ಮತ್ತು ಎರಡನೇ ವಾರದಲ್ಲಿ ಅಂತ್ಯವಾಗುತ್ತದೆ.

ತದನಂತರ ಅವರು ತಮ್ಮ ಐಪಿಎಲ್ ಫ್ರಾಂಚೈಸಿಗಳನ್ನು ಸೇರಲು ಸಾಧ್ಯವಾಗುತ್ತದೆ, ಆದಾಗ್ಯೂ, ಕೆಲವು ಆಟಗಾರರಿಗೆ ದೇಹಕ್ಕೆ ಗಾಯಗಳಾಗಿವೆ ಇದರಿಂದಾಗಿ ಅವರು ಲೀಗ್‌ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕೆ ತಕ್ಕಂತೆ ಎಲ್ಲಾ ತಂಡಗಳು ಸಿದ್ದತೆಯನ್ನು ನಡೆಸಿಕೊಂಡಿವೆ.

ಆದರೆ ಅದಕ್ಕೂ ಮುನ್ನ ಕೆಲವು ತಂಡಗಳು ಆಟಗಾರರ ಗಾಯದಿಂದ ತತ್ತರಿಸಿವೆ, ಗಾಯದ ಸಮಸ್ಯೆಯಿಂದಾಗಿ ಹಲವು ಪ್ರಮುಖ ಆಟಗಾರರು ಟೂರ್ನಿಯಿಂದ ಹಿಂದೆ ಸರಿದುಕೊಂಡಿದ್ದಾರೆ.ipl 2022

ಇದು ತಂಡದ ಯೋಜನೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ, ಇಂತಹ ಸಮಯದಲ್ಲಿ ಟೂರ್ನಿಯಿಂದ ಹೊರಹೋಗುವ ಆಟಗಾರನಿಗೆ ಸಮಾನವಾದ ಇನ್ನೊಬ್ಬ ಆಟಗಾರನನ್ನು ಹುಡುಕುವುದಾದರೂ ಹೇಗೆ? ಇದು ಎಲ್ಲಾ ಫ್ರಾಂಚೈಸಿಗಳು ಎದುರಿಸುತ್ತಿರುವ ಮುಖ್ಯ ತೊಂದರೆಯಾಗಿದೆ.

ವಿಶೇಷವಾಗಿ ಇಂಗ್ಲೆಂಡ್ ಕ್ರಿಕೆಟಿಗರಿಂದ ಐಪಿಎಲ್ ಫ್ರಾಂಚೈಸಿಗಳಿಗೆ ಭಾರಿ ಹೊಡೆತ ಬಿದ್ದಿದೆ, ಜೇಸನ್ ರಾಯ್ ನಂತರ ಈಗ ಅಲೆಕ್ಸ್ ಹೇಲ್ಸ್ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

ಹೆಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರವಾಗಿ ಆಡಬೇಕಿತ್ತು, ಜೇಸನ್ ರಾಯ್ ಅವರನ್ನು ಗುಜರಾತ್ ಟೈಟನ್ಸ್ ಖರೀದಿ ಮಾಡಿತ್ತು.

ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಜೋಫ್ರಾ ಆರ್ಚರ್ ಅವರಂತೆ ಗಾಯಗೊಂಡಿದ್ದು ಈ ಐಪಿಎಲ್​ನಲ್ಲಿ ಆಡುವುದು ಅನುಮಾನ.

ಹೇಲ್ಸ್ ಹಾಗೂ ರಾಯ್ ಅವರಂತೆ, ವುಡ್ ಗಾಯದ ಕಾರಣ ನೀಡಿ IPL ನಿಂದ ಹಿಂದೆ ಸರಿಯಬಹುದು, ಇವರನ್ನು ಲಕ್ನೋ ಸೂಪರ್ ಜೈಂಟ್ಸ್ 7.5 ಕೋಟಿಗೆ ಖರೀದಿ ಮಾಡಿದೆ.

ವುಡ್ ನಿರ್ಧಾರದ ಮೇಲೆ ಲಕ್ನೋ ತನ್ನ ಯೋಜನೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ, ಅಲ್ಲದೆ ವುಡ್ ಅಲಭ್ಯತೆ ತಂಡದ ಮೇಲೆ ಗಾಡ ಪರಿಣಾಮ ಬೀರಬಹುದಾಗಿದೆ.

ಆಂಗ್ಲ ಕ್ರಿಕೆಟಿಗರ ಈ ವರ್ತನೆ ಈ ಮೊದಲೆನಲ್ಲ ಕಳೆದ ವರ್ಷವೂ ಹಲವು ಆಂಗ್ಲ ಕ್ರಿಕೆಟಿಗರು ವಿವಿಧ ಕಾರಣಗಳನ್ನೂ ನೀಡಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.

ಆಟದಿಂದ ಹಿಂಜರಿಯಲು ಕಾರಣಗಳು

ಆಟಗಾರರನ್ನು ಕೋಟಿ ಕೋಟಿ ನೀಡುವ ಮೂಲಕ ಖರೀದಿಸಿದ ಫ್ರಾಂಚೈಸಿಯೂ ಅವರ ಸಾಮಥ್ರ್ಯಕ್ಕೆ ತಕ್ಕಂತೆ ಕೆಲವು ಯೋಜನೆಗಳನ್ನು ಮಾಡುತ್ತದೆ.ipl 2022 news

ಆದರೆ ಕೆಲವೊಮ್ಮ ತುರ್ತು ಅಥವಾ ಇಂಜುರಿಯಿಂದ ಆಟಗಾರರು ಐಪಿಎಲ್​ನಿಂದ ಹಿಂದೆ ಸರಿದರೆ ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು, ಆದರೆ ಕೆಲವು ಸಂದರ್ಭಗಳಲ್ಲಿ ಇದನ್ನೇ ಕಾರಣವಾಗಿಟ್ಟುಕೊಳ್ಳುವ ಆಂಗ್ಲ ಕ್ರಿಕೆಟಿಗನ್ನು ಭವಿಷ್ಯದಲ್ಲಿ ಖರೀದಿಸುವ ಮೊದಲು ಫ್ರಾಂಚೈಸಿಗಳು ಖಂಡಿತವಾಗಿಯೂ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಮಾಹಿತಿ.

ಫ್ರಾಂಚೈಸಿಗಳ ಗೊಂದಲ

ಆಂಗ್ಲ ಆಟಗಾರರು ಮತ್ತೆ ಐಪಿಎಲ್​ಗೆ ವಾಪಸ ಮಾಡುವುದು ದೊಡ್ಡ ವಿಚಾರವೆನ್ನಲ್ಲ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ದುಡ್ಡು ಸಂಪಾದನೆ ಮಾಡುವ ಅವಕಾಶವಿರುವಾಗ ಯಾವ ಆಟಗಾರನು ಈ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ.ipl 2022 team

ಆದರೆ ಫ್ರಾಂಚೈಸಿಗಳು ಅವರ ನಡವಳಿಕೆಯಿಂದ ಅತೃಪ್ತರಾಗಿದ್ದು, ಈಗಾಗಲೇ ಐಪಿಎಲ್​ನಿಂದ ಹಿಂದೆ ಸರಿದಿರುವ ರಾಯ್ ಮತ್ತು ಹೇಲ್ಸ್ ಬಯೋಬಬಲ್ ಕಾರಣವನ್ನು ನೀಡುತ್ತಿದ್ದಾರೆ.

ಈಗ ಐಪಿಎಲ್ ತೊರೆಯುತ್ತಿರುವ ಇವರಿಗೆ ಹರಾಜಿಗೂ ಮೊದಲು ನಿಯಮಗಳು ತಿಳಿದಿರಲಿಲ್ಲವೇ? ಎಂದು ಫ್ರಾಂಚೈಸಿಗಳು ಹಾಗೂ ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಮತ್ತೆ ಆರ್​ಸಿಬಿಗೆ ‘ಕಾಮ್ ಬ್ಯಾಕ್’ ಮಾಡಿದ ಎಬಿ ಡಿವಿಲಿಯರ್ಸ್!

https://www.google.com/search?q=skillindiajobs.com&oq=ski&aqs=chrome.1.69i57j69i59j35i39j0i67l2j46i67j0i20i263i433i512j69i60.1953j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *