1 ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಹೊಸ ಸ್ಮಾರ್ಟ್ ಫೋನ್!

Poco M4 Pro 4G Mobile

Poco M4 Pro 4G

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಿ ಭಾರೀ ಸದ್ದು ಮಾಡುವ ಪೋಕೋ ಸಂಸ್ಥೆ ಇದೀಗ ಹೊಸ ಫೋನೊಂದನ್ನು ಬಿಡುಗಡೆ ಮಾಡಿದೆ.

ಮೊನ್ನೆಯಷ್ಟೆ ಪೋಕೋ ದೇಶದಲ್ಲಿ ತನ್ನ ಹೊಸ ಪೋಕೋ ಎಮ್​4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸೇಲ್ ಪ್ರಾರಂಭಿಸಿತು.

ದೇಶದಲ್ಲಿ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆ ಕೇಳಿಬರುತ್ತಿದ್ದು, ಕಡಿಮೆ ಬೆಲೆಯ ಈ 5G ಫೋನ್ ಭರ್ಜರಿ ಮಾರಾಟ ಆಗುತ್ತಿದೆ.

ಈ ಕಂಪನಿಯು ಪೋಕೋ ಸಂಸ್ಥೆ ಇದೇ ಹೆಸರಿನ 4G ಸಾಮರ್ಥ್ಯದ ಪೋಕೋ M4 ಪ್ರೊ 4G  ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಇದರ ಬೆಲೆ ಕೂಡ ಅತ್ಯಂತ ಕಡಿಮೆ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಒಳಗೊಂಡಿದೆ. ಹಾಗಾದ್ರೆ ಇದರ ವಿಶೇಷತೆಯಲ್ಲಿ ಏನೇನಿದೆ?, ಬೆಲೆ ಎಷ್ಟು ನಿಗದಿ ಮಾಡಲಾಗಿದೆ? ಎಂಬ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ. Poco M4 Pro 4G Mobile

ಪೋಕೋ M4 ವಿಶೇಷತೆ

ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಈ ಡಿಸ್‌ಪ್ಲೇ 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್​ನಿಂದ ಕೂಡಿದ್ದು, ಇದು ಮೀಡಿಯಾ ಟೆಕ್ ಹೀಲಿಯೊ G96 CPU ಪ್ರೊಸೆಸರ್‌ ಹೊಂದಿದೆ.

ಇದು ಆಂಡ್ರಾಯ್ಡ್‌ 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯ ಮಾಡುತ್ತದೆ, ಅಲ್ಲದೆ ಮುಂದಿನ ಕೆಲವು ವಾರಗಳಲ್ಲಿ MIUI 13 ಅನ್ನು ಸ್ವೀಕರಿಸುವ ಭರವಸೆ ಇದೆ.

ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಣೆ ಮಾಡಲಾಗಿದೆ.

ಈ ಸ್ಮಾರ್ಟ್‌ಫೋನ್‌ ತ್ರಿಪಲ್ ಕ್ಯಾಮೆರಾ ಸೆಟಪ್‌ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ.

ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಹೊಂದಿದೆ, 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್​ನ ಮೂರನೇ ಕ್ಯಾಮೆರಾ ಕೂಡ ಇದೆ.

ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಲವವಾದಿಸಿದ್ದಾರೆ, ಇದು f/2.45 ಲೆನ್ಸ್‌ ಅನ್ನು ಪಡೆದಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಪ್ರೊ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

ಕಂಪನಿ ಹೇಳಿರುವ ಪ್ರಕಾರ ಈ ಸ್ಮಾರ್ಟ್​ಫೋನ್ 61 ನಿಮಿಷಗಳಲ್ಲಿ 0 ರಿಂದ 100 ವರೆಗೆ ಫುಲ್ ಚಾರ್ಜ್ ಆಗುತ್ತಂತೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ. Poco M4 Pro 4G Mobile

ಇದಲ್ಲದೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕೂಡಾ ಒಳಗೊಂಡಿದೆ.

ಪೋಕೋ M4 ಬೆಲೆ ಎಷ್ಟು

ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮೂರು ಮಾದರಿಯಲ್ಲಿ ಖರೀದಿಗೆ ಅವಕಾಶವನ್ನು ಮಾಡಿಕೊಟ್ಟಿದೆ.

ಇದರ 6GB RAM ಮತ್ತು 64GB RAM ಸ್ಟೊರೇಜ್ ಮಾದರಿಗೆ ಕೇವಲ 14,999 ರೂ. ನಿಗದಿ ಮಾಡಿದೆ.

ಇದರಂತೆ  6GB RAM ಮತ್ತು 128GB ರೂಪಾಂತರಕ್ಕೆ 16,499 –  8GB RAM ಮತ್ತು 128GB ರೂಪಾಂತರಕ್ಕೆ 17,999 ರೂ. ಬೆಲೆ ಹೊಂದಿದೆ.

ಈ ಸ್ಮಾರ್ಟ್‌ಫೋನ್‌ ಲೇಸರ್ ಬ್ಲಾಕ್, ಲೇಸರ್ ಬ್ಲೂ ಮತ್ತು ಹೊಸ ಪೊಕೊ ಹಳದಿ ಬಣ್ಣದ ಆಯ್ಕೆಗಳಲ್ಲಿ ನಿಮಗೆ ಲಭ್ಯಯಾಗಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಾರ್ಚ್ 7 ರಿಂದ ಎಲ್ಲರು ಖರೀದಿ ಮಾಡಬಹುದು.

ಶಿವರಾತ್ರಿ ಹಬ್ಬಕ್ಕೆ ಈ ರಾಶಿಯವರಿಗೆ ಮಾತ್ರ ಅದೃಷ್ಟ ಒಲಿಯುತ್ತದೆ!

https://www.google.com/search?q=way2plot&oq=w&aqs=chrome.1.69i60j69i59l3j69i60l4.1101j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *