
prabhas project k
ಸಿನಿಮಾ
ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ದೊಡ್ಡ ಹೆಸರು, ಈಗಲೂ ಸಾಲುಸಾಲು ಚಿತ್ರಗಳಲ್ಲಿ ನಟನೆ ಮಾಡುತ್ತಾ ಸಕ್ರಿಯರಾಗಿದ್ದಾರೆ.
ಈ ಕಡೆ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದ ನಂತರ ಬಾಲಿವುಡ್ ಸೇರಿದಂತೆ ಎಲ್ಲೆಡೆ ಅಭಿಮಾನಿ ಬಳಗ ಹೆಚ್ಚಿದೆ.
ಇವರಿಬ್ಬರು ದಿಗ್ಗಜರು ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ತಿಳಿದಾಗಿನಿಂದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಚಿತ್ರಕ್ಕೆ ‘ಪ್ರಾಜೆಕ್ಟ್ ಕೆ’ ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದ್ದು, ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಕೂಡ ಇದರಲ್ಲಿ ಬಣ್ಣಹಚ್ಚುತ್ತಿದ್ದಾರೆ, ಮೊದಲ ಹಂತದ ಚಿತ್ರೀಕರಣವನ್ನು ಕಳೆದ ಡಿಸೆಂಬರ್ ಹೈದರಾಬಾದ್ನಲ್ಲಿ ನಡೆದಿತ್ತು.prabhas project k
ಇದೀಗ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣ ಮಾಡುವುದಕ್ಕೆ ಚಾಲನೆ ನೀಡಿದೆ, ವಿಶೇಷವೆಂದರೆ ಈ ಹಂತದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಪಾತ್ರಗಳು ಜತೆಯಾಗಿ ಕಾಣಿಸಿಕೊಳ್ಳುವ ಭಾಗಗಳನ್ನು ಚಿತ್ರೀಕರಿಸಲಾಗುತ್ತಿದೆ.
ಶುಕ್ರವಾರ (ಫೆ.18) ಪ್ರಭಾಸ್ ಹಾಗೂ ಅಮಿತಾಭ್ ಮೊದಲ ಬಾರಿಗೆ ಶೂಟಿಂಗ್ ಸೆಟ್ನಲ್ಲಿ ಭಾಗಿಯಾಗಿದ್ದರು.
ಈ ಸಮಯದ ಅನುಭವವನ್ನು ಇಬ್ಬರು ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಪ್ರಭಾಸ್ ಜತೆ ಮೊದಲ ದಿನದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದು, ಪ್ರಭಾಸ್ಗೆ ಶಹಬ್ಬಾಸ್ಗಿರಿ ನೀಡಿದ್ದು.
‘ಮೊದಲ ದಿನ, ಮೊದಲ ಶಾಟ್.. ಬಾಹುಬಲಿ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ.
ಪ್ರತಿಭೆ, ನಮ್ರತೆಯ ವ್ಯಕ್ತಿತ್ವದ ಜತೆಗೆ ಕೆಲಸ ಮಾಡುವುದು ದೊಡ್ಡ ಗೌರವ ಹಾಗು ಕಲಿಯಲು ಉತ್ತಮ ಅವಕಾಶ’ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.
ಅಮಿತಾಭ್ ಜತೆ ತೆರೆ ಹಂಚಿಕೊಂಡಿರುವುದರ ಬಗ್ಗೆ ಪ್ರಭಾಸ್ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಅಮಿತಾಭ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಕನಸು ನನಸಾಯಿತು’ ಎಂದು ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಅವರು ಅಮಿತಾಭ್ ನಟನೆಯ 1975ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ‘ದೀವಾರ್’ನ ಫೋಟೋ ಹಂಚಿಕೊಂಡಿದ್ದಾರೆ.
‘ಪ್ರಾಜೆಕ್ಟ್ ಕೆ’ ಕಳೆದ ವರ್ಷ ಅನೌನ್ಸ್ ಆಗಿದ್ದ ಚಿತ್ರ, ಸೈನ್ಸ್ ಫಿಕ್ಷನ್ ಮಾದರಿಯ ಚಿತ್ರ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲೇ ದೊಡ್ಡ ಬಜೆಟ್ನಲ್ಲಿ ತಯಾರಾಗಲಿರುವ ಚಿತ್ರ.
ಪ್ರಾಜೆಕ್ಟ್ ಕೆ ಒಂದು ವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಇದನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪ್ರಾಜೆಕ್ಟ್ ಕೆ ಎರಡನೇ ಶೆಡ್ಯೂಲ್ ಫೆಬ್ರವರಿ ಎರಡನೇ ವಾರದಲ್ಲಿ ಪ್ರಾರಂಭವಾಗಲಿದ್ದು.
ರಾಧೆ ಶ್ಯಾಮ್ ನಟ ಈ ವೈಜ್ಞಾನಿಕ ಥ್ರಿಲ್ಲರ್ ಸೆಟ್‌ಗೆ ಬಂದಿದ್ದಾರೆ, ಎಂದು ವರದಿಯಾಗಿದೆ.
ಆದ್ದರಿಂದ ಈ ಚಿತ್ರದ ಕುರಿತು ನಿರೀಕ್ಷೆ ಹುಟ್ಟಿಸಿದೆ, ಆದರೆ ಚಿತ್ರತಂಡ ಇದುವರೆಗೆ ಚಿತ್ರದ ಕುರಿತು ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ.
ಚಿತ್ರ ಬಿಡುಗಡೆ
ಚಿತ್ರತಂಡ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಪ್ಲಾನ್ ಹಾಕಿಕೊಂಡಿದೆ, ಕಾರಣ 2023ರ ಬೇಸಿಗೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.prabhas project k
ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಏಪ್ರಿಲ್ ಅಥವಾ ಮೇ ನಲ್ಲಿ ‘ಪ್ರಾಜೆಕ್ಟ್ ಕೆ’ ಬಿಬಿಡುಗಡೆಯಾಗಲಿದೆ.