ಪ್ರಭಾಸ ಬೇಡಿಕೆಯಿಟ್ಟ ಮಲಯಾಳಂ ನಟಿ ಯಾರು!

Prabhas Demanded Malayalam heroine

ನಟ ಪ್ರಭಾಸ್

ಪ್ಯಾನ್ ಇಂಡಿಯಾ ಸೂಪರ್‌ ಪ್ರಭಾಸ್ ಕೈ ತುಂಬಾ ಸಿನಿಮಾಗಳಿವೆ, ರಾಧೆಶ್ಯಾಮ್, ಸಲಾರ್, ಆದಿಪುರುಷ್ ಸೇರಿದಂತೆ ಪ್ರಾಜೆಕ್ಟ್ ಕೆ ಜೊತೆ ಸ್ಪಿರಿಟ್ ತುಂಬಾ ಚಿತ್ರಗಳಿವೆ.

ಇವುಗಳ ಜೊತೆಗೆ ಕೆಲವು ಸಿನಿಮಾಗಳಿಗೆ ಮಾತುಕತೆ ಕೂಡ ನಡೆಯುತ್ತಿದೆ, ಇನ್ನು ಕೆಲವು ಅನೌನ್ಸ್ ಮಾಡುವುದು ಬಾಕಿ ಉಳಿದಿವೆ ಅಷ್ಟೇ.

ಈ ಗ್ಯಾಪ್‌ನಲ್ಲಿಯೇ ಮತ್ತೊಂದು ಸಿನಿಮಾ ಕೂಡ ಸೆಟ್ಟೇರಲಿದೆ, ಅದಕ್ಕೆ ಬೇಕಾಗಿರುವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಪ್ರಭಾಸ್ ಮಲಯಾಳಂ ನಟಿಯ ಹಿಂದೆ ಬಿದ್ದಿದ್ದಾರಂತೆ.radhe shyam prabhasprabhas marriage

ಒಂದು ಸಿನಿಮಾಗೆ ನಾಯಕಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಅನ್ನುವುದು ನಿರ್ದೇಶಕನ ನಿರ್ಧಾರ ಆಗಿರುತ್ತದೆ.

ಕೆಲವೊಮ್ಮೆ ಇಡೀ ತಂಡ ಕೂಡ ನಾಯಕಿಯ ಆಯ್ಕೆ ಮಾಡುವುದೂ ಇದೆ, ಸೂಪರ್‌ಸ್ಟಾರ್ ಸಿನಿಮಾಗಳಾಗಿದ್ದರೆ, ಅವರೂ ತಮಗೆ ಸೂಟ್ ಆಗುವ ನಾಯಕಿಯನ್ನು ಆಯ್ಕೆ ಮಾಡುವಂತೆ ಸಲಹೆಯನ್ನು ನೀಡುವ ಸಾಧ್ಯತೆಗಳಿವೆ.

ಈಗ ಪ್ರಭಾಸ್ ತಮ್ಮ ಮುಂದಿನ ಸಿನಿಮಾಗೆ ಮಲಯಾಳಂ ನಾಯಕಿಯನ್ನು ಆಯ್ಕೆ ಮಾಡುವಂತೆ ಸಲಹೆಯನ್ನು ನೀಡಿದ್ದಾರಂತೆ.

ಪ್ರಭಾಸ ಇಷ್ಟಪಟ್ಟ ನಾಯಕಿ

ಪ್ರಭಾಸ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ, ಈ ಸಿನಿಮಾಗೆ ಮಲಯಾಳಂ ನಟಿ ಮಾಳವಿಕ ಮೋಹನನ್ ನಾಯಕಿಯಾಗುವುದು ಪ್ರಭಾಸ್ ಆಸೆಯಂತೆ.Prabhas Demanded Malayalam heroine

ನಿರ್ದೇಶಕರಿಗೂ ಮಾಳವಿಕ ಮೋಹನನ್‌ರನ್ನು ಕೇಳಿ ನೋಡುವಂತೆ ಪ್ರಭಾಸ್ ಹೇಳಿದ್ದಾರೆ ಅನ್ನುವುದು ಲೇಟೆಸ್ಟ್ ಗಾಸಿಪ್ ಆಗಿದೆ.

ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಮಾಳವಿಕ ಮೋಹನನ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ, ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಳವಿಕಾ ಆಕ್ಟೀವ್ ಕೂಡಾ ಆಗಿದ್ದಾರೆ.

ಈ ಕಾರಣಕ್ಕೆ ಪ್ರಭಾಸ್ ಮಲಯಾಳಂ ನಟಿಯನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

‘ರಾಜಾ ಡಿಲಕ್ಸ್’

ಫ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹೊಸ ಸಿನಿಮಾ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿದ್ದಾರೆ.prabhas movies

ಈ ಚಿತ್ರಕ್ಕೆ ‘ರಾಜಾ ಡಿಲಕ್ಸ್’ ಎಂದು ಹೆಸರಿಡಲಾಗಿದೆ, ಮಾರುತಿ ಎಂಬವವರು ಈ ಸಿನಿಮಾವನ್ನು ನಿರ್ದೇಶನವನ್ನು ಮಾಡುತ್ತಿದ್ದಾರೆ.

ಪ್ರಭಾಸ್ ಹಾಗೂ ಮಾರುತಿ ಕಾಂಬಿನೇಷನ್‌ ಸಿನಿಮಾಗೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ ಎನ್ನುತ್ತಾರೆ.

ಪ್ರಭಾಸ್ ಒತ್ತಾಸೆ ಮೇರೆಗೆ ಮಾಳವಿಕಾ ಮೋಹನನ್‌ರನ್ನು ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳೂ ಕೂಡ ಇವೆ ಎಂದು ತಿಳಿದಿದೆ.

ಮಾಳವಿಕ ಮೋಹನನ್

ಇವರು ಮಲಯಾಳಂ ಚಿತ್ರರಂಗದ ಹಿರಿಯರ ಕ್ಯಾಮರಾಮ್ಯಾನ್ ಕೆ ಯು ಮೋಹನನ್ ಅವರ ಪುತ್ರಿ.

ಮಾಳವಿಕ 28 ವರ್ಷದ ಈ ನಟಿ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ.

2013ರಲ್ಲಿ ಮಲಯಾಳಂ ಸಿನಿಮಾ ‘ಪಟ್ಟಂ ಪೋಲೆ’ಯಲ್ಲಿ ನಟನೆ ಮಾಡಿದ್ದರು, ರಜನಿಕಾಂತ್ ನಟನೆಯ ‘ಪೆಟ್ಟಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯವಾದರು.

ದಳಪತಿ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾದಲ್ಲೂ ಕೂಡಾ ನಟಿಸಿದ್ದರು, ಇತ್ತೀಚೆಗೆ ಧನುಷ್ ಅಭಿನಯದ ‘ಮಾರಾನ್’ ಚಿತ್ರದಲ್ಲೂ ನಟನೆ ಮಾಡಿದ್ದಾರೆ.Prabhas Demanded Malayalam heroine

ರಾಧೆ ಶ್ಯಾಮ್ ಬಿಡುಗಡೆ

ಪ್ರಭಾಸ್ ಅಭಿನಯದ ‘ರಾಧೆಶ್ಯಾಮ್’ ಸಿನಿಮಾ ಇದೇ ಮಾರ್ಚ್ 11 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

70ರ ದಶಕದ ಕಥೆಯನ್ನು ಆಧರಿಸಿದ ಈ ಚಿತ್ರವೂ ತೆರೆಮೇಲೆ ತರಲಾಗಿದೆ, ಹಸ್ತ ನೋಡಿ ಭವಿಷ್ಯವನ್ನು ಹೇಳುವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.prabhas hairstyles

ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ.

ರಾಧಿಕಾ ಪಂಡಿತ್ “ಸ್ಯಾಂಡಲ್​ವುಡ್ ಸಿಂಡ್ರೆಲ್ಲಾ”ಗೆ ಜನ್ಮದಿನದ ಸಂಭ್ರಮ!

https://www.google.com/search?q=skillindiajobs.com&oq=&sourceid=chrome&ie=UTF-8

Social Share

Leave a Reply

Your email address will not be published. Required fields are marked *