
priyamani remuneration
ಪ್ರಿಯಾಮಣಿ
ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರು ಉತ್ತಮ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭಾವಂತ ನಟಿಗೆ ಬಹುಭಾಷೆಯಲ್ಲಿ ತುಂಬಾ ಬೇಡಿಕೆ ಇದೆ, ಅನೇಕ ಸಿನಿಮಾ ಹಾಗೂ ವೆಬ್ ಸಿರೀಸ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯಿಂದ ಪ್ರಿಯಾಮಣಿ ಅವರಿಗೆ ಸಿಕ್ಕ ಜಯವು ದೊಡ್ಡದು, ಇದರ ಎರಡನೇ ಸೀಸನ್ನಲ್ಲೂ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ಸಿಕ್ಕಿತ್ತು.
ಇತ್ತೀಚೆಗೆ ತೆರೆಕಂಡ ಅವರು ನಟಿಸಿದ ‘ಭಾಮಾ ಕಲಾಪಂ’ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ, ಇದರ ಸಲುವಾಗಿ ಪ್ರಿಯಾಮಣಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ.priyamani remuneration
ಅದಕ್ಕೆ ಅನುಸಾರವಾಗಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂಬ ವರದಿ ತಿಳಿದು ಬಂದಿದೆ.
ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ ಡಬಲ್ ಆಗಿದೆ ಎನ್ನುತ್ತಾರೆ, ಮದುವೆ ಆದ ನಂತರವೂ ಅನೇಕ ನಟಿಯರು ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ.
ಆ ನಟಿಯರ ಪಟ್ಟಿಯಲ್ಲಿ ಇವಾಗ ಪ್ರಿಯಾಮಣಿ ಕೂಡ ಸೇರಿದ್ದಾರೆ.priyamani remuneration
ಕೆಲವು ಮಾಧ್ಯಮಗಳ ಪ್ರಕಾರ
ಪ್ರಿಯಾಮಣಿ ಅವರು ಈ ಮೊದಲು ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು, ಆದರೆ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮತ್ತು ‘ಭಾಮಾ ಕಲಾಪಂ’ ಸಿನಿಮಾ ಹಿಟ್ ಆದ ನಂತರ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
ಪ್ರಸ್ತುತ ಅವರು ಒಂದು ದಿನಕ್ಕೆ ಬರೋಬ್ಬರಿ 3 ರಿಂದ 4 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ ತಿಳಿಸಿದ್ದಾರೆ,ಅಂದರೆ ಅವರ ಸಂಬಳ ಡಬಲ್ಗಿಂತಲೂ ಹೆಚ್ಚಾಗಿದೆ ಎಂದು ತಿಳಿದಿದೆ.
ಪ್ರಿಯಾಮಣಿ ಪ್ರತಿಭಾವಂತ ನಟಿ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ನಲ್ಲಿ ಅವರು ನಿಭಾಯಿಸಿದ ಸುಚಿ ಎಂಬ ಪಾತ್ರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಯಿತು.
ಯಾವುದೇ ಪಾತ್ರ ನೀಡಿದರು ಅವರು ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ, ಆ ಕಾರಣಕ್ಕಾಗಿ ಅವರ ಕಾಲ್ಶೀಟ್ ಪಡೆಯಲು ನಿರ್ಮಾಪಕರು ಮುಗಿ ಬೀಳುತ್ತಾರೆ.priyamani remuneration
ಸಿನಿಮಾ, ವೆಬ್ ಸಿರೀಸ್ಗಳ ಆಯ್ಕೆಯಲ್ಲಿ ಪ್ರಿಯಾಮಣಿ ತುಂಬ ಕಾಳಜಿ ವಹಿಸುತ್ತಿದ್ದಾರೆ, ಸದ್ಯ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್ ಗಳಿದ್ದು, ಅಜಯ್ ದೇವಗನ್ ನಟನೆಯ ‘ಮೈದಾನ್’, ರಾಣಾ ದಗ್ಗುಬಾಟಿ ಅಭಿನಯದ ‘ವಿರಾಟ ಪರ್ವಂ’ ಚಿತ್ರದಲ್ಲಿ ಅವರು ನಟಿಸಿದ್ದಾರೆ.
ಆ ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗುತ್ತಿವೆ, ಶಾರುಖ್ ಖಾನ್ ಹಾಗೂ ಅಟ್ಲಿ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲೂ ಪ್ರಿಯಾಮಣಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾಹಿತಿ.
ಬಹು ಭಾಷಾ ನಟಿಯರು ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಅನೇಕ ನಟಿಯರು ಮದುವೆ ಆದ ನಂತರವೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.