
promise-day
ವ್ಯಾಲೆಂಟೈನ್ಸ್ ವೀಕ್ 2022
ಯಾವುದೇ ಸಂಬಂಧದಲ್ಲಿರಲಿ ನಾನು ನಿನ್ನೊಂದಿಗಿರುವೆ ಎನ್ನುವ ಒಂದು ಮಾತು ಆನೆಯಷ್ಟು ಶಕ್ತಿ ನೀಡುತ್ತದೆ, ಅದೇ ರೀತಿ ಪ್ರತೀ ಪ್ರೇಮಿ ಮಾಡುವ ಒಂದು ಪ್ರಾಮಿಸ್ ಹೊಸದೊಂದು ದೈರ್ಯವನ್ನು ಮೂಡಿಸುತ್ತದೆ.
ಇಂದು ವ್ಯಾಲೆಂಟೈನ್ಸ್ ವೀಕ್ನ ನಾಲ್ಕನೇ ದಿನ ಪ್ರಾಮಿಸ್ ಡೇ ಆಗಿರುತ್ತದೆ, ಸದಾ ಜೊತೆಯಾಗಿ ಇರುವೆನೆಂದು ವಾಗ್ದಾನ ನೀಡುವ ದಿನ.
ಪ್ರತಿಯೊಬ್ಬ ಪ್ರೇಮಿ ತನ್ನಿಷ್ಟದ ಹುಡುಗ / ಹುಡುಗಿಗೆ ಜೀವನದಲ್ಲಿ ಎದುರಾಗುವ ಕಷ್ಟ, ಸುಖ, ನೋವು, ದುಃಖ ಎಲ್ಲವನ್ನೂ ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದು ಪ್ರಾಮಿಸ್ ಮಾಡುವ ಈ ದಿನ ಪ್ರೇಮಿಗಳ ಪಾಲಿನ ಮತ್ತೊಂದು ಅಮೂಲ್ಯ ದಿನ.
feb 11 promise day
ಪ್ರೀತಿಯ ಮೂಲ ನಂಬಿಕೆ (Trust), ಯಾವುದೇ ಸಂಬಂಧದಲ್ಲಿರಲಿ ನಾನು ನಿನ್ನೊಂದಿಗಿರುವೆ ಎನ್ನುವ ಒಂದು ಮಾತು ಆನೆಯಷ್ಟು ಶಕ್ತಿಯನ್ನು ನೀಡುತ್ತದೆ.
ಅದೇ ರೀತಿ ಪ್ರತೀ ಪ್ರೇಮಿ ಮಾಡುವ ಒಂದು ಪ್ರಾಮಿಸ್ ಹೊಸದೊಂದು ದೈರ್ಯವನ್ನು ಮೂಡಿಸುತ್ತದೆ.
ಪ್ರತೀ ವರ್ಷ ವ್ಯಾಲೆಂಟೈನ್ಸ್ ವೀಕ್ನ ನಾಲ್ಕನೇ ದಿನ ಫೆ.11ರಂದು ಪ್ರಾಮಿಸ್ ಡೇ ಆಚರಿಸಲಾಗುತ್ತದೆ.
ಪ್ರೀತಿಸುವ ಭರವಸೆ, ಸದಾ ಜೊತೆಯಾಗಿರುವೆನೆಂಬ ಭರವಸೆ, ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ ಎನ್ನುವ ಭರವಸೆ ಈ ಪ್ರಾಮಿಸ್ ಡೇ ಅನ್ನು ಇನ್ನಷ್ಟು ಸುಂದರಗೊಳಿಸುತ್ತದೆ.
ಬದುಕೆಂಬ ದೋಣಿಯಲ್ಲಿ ನಂಬಿಕೆ ಎನ್ನುವುದು ಹುಟ್ಟು, ದೋಣಿಯಲ್ಲಿ ಕುಳಿತ ಇಬ್ಬರೂ ಹುಟ್ಟನ್ನು ಸರಿಯಾಗಿ ಹಾಕಿದರೆ ಮಾತ್ರ ದೋಣಿ ಸರಿಯಾದ ಗುರಿ ತಲುಪಲು ಸಾಧ್ಯವಾಗುತ್ತದೆ.
ಅದೆ ರೀತಿ ಜೀವನವೂ ಒಬ್ಬರ ಮೇಲೋಬ್ಬರು ನಂಬಿಕೆ ಇಟ್ಟುಕೊಳ್ಳಬೇಕು, ಹೊಂದಿಕೊಂಡು ಬದುಕಿದರೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರಾಮಿಸ್ ಡೇ ಮಹತ್ವ
ಒಂದು ಪ್ರಾಮಿಸ್, ಪ್ರೇಮಿಯ ಮಾತಿಗೆ ತಪ್ಪುವುದಿಲ್ಲ ಎನ್ನುವ ಒಂದು ನಂಬಿಕೆ ಜೀವನದ ಪಯಣವನ್ನು ಇನ್ನಷ್ಟು ಉತ್ಕೃಷ್ಟಗೊಳಿಸುತ್ತದೆ.
ಖುಷಿಯಲ್ಲೂ, ನೋವಲ್ಲೂ ಎಂತಹದೇ ಸಂದರ್ಭ ಬಂದರೂ ಕೈಬಿಡುವುದಿಲ್ಲ ಎನ್ನುವ ಭರವಸೆ ಈ ಪ್ರಾಮಿಸ್ ಡೇ ತಿಳಿಸುತ್ತದೆ.
ಇದೊಂದು ಕಾರಣಕ್ಕೆ ಪ್ರೇಮಿಗಳ ವಾರದಲ್ಲಿ ಪ್ರಾಮಿಸ್ ಡೇ ಗೆ ಅಷ್ಟೊಂದು ಮಹತ್ವವಿದೆ.promise day quotes
ಪ್ರೀತಿಯ ಸಂಗಾತಿಯ ಜೊತೆ ಬಂಧವನ್ನು ಗಟ್ಟಿಯಾಗಿಸಲು, ಬದುಕಿನ ಭರವಸೆಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಆಚರಿಸುವ ಈ ಪ್ರಾಮಿಸ್ ಡೇ ಆಗಿದೆ.
ಪ್ರತೀ ಪ್ರೇಮಿಯ ಮುಖದಲ್ಲಿ ಒಂದಷ್ಟು ಮುಗುಳ್ನಗೆಯನ್ನು ಮೂಡಿಸುವುದರಲ್ಲಿ ಅನುಮಾನವೇ ಇಲ್ಲ ಹೀಗಾಗಿ ನಿಮ್ಮ ಪ್ರೇಮಿಗೆ ಇಂದು ಮಾತು ನೀಡಿ, ಸದಾ ನಿನ್ನೊಂದಿಗಿರುವೆನೆಂದು.
ನಿಮ್ಮ ಸಂಗಾತಿಗೆ ಮಾತು ನೀಡಿ ಬದುಕಿನ ಏರಿಳಿತಗಳಲ್ಲಿ ಹೆಗಲಾಗುವೆನೆಂದು, ನಿಮ್ಮ ಪ್ರೇಮಿಗೆ ಮಾತು ನೀಡಿ ಸದಾ ಪ್ರೀತಿಸುವ, ಕಾಳಜಿವಹಿಸುವ ನಿನ್ನ ಸಂಗಾತಿಯಾಗಿ ಸದಾ ಇರುವನೆಂದು.best promise day status
ಯಾವುದೇ ಸಂಬಂಧದ ಬಗ್ಗೆ ಮಾತನಾಡಿದರು ಮತ್ತು ‘ಭರವಸೆ’ ಎಂಬ ಪದವು ಅತ್ಯಂತ ಮಹತ್ವದ್ದಾಗಿದೆ.
ನಿಮ್ಮ ಇಡೀ ಜೀವನವನ್ನು ಯಾರೊಂದಿಗಾದರೂ ಕಳೆಯಲು ನಿಮ್ಮ ಸಂಗಾತಿಗೆ ಭರವಸೆಯ ಪ್ರೀತಿ, ಕಾಳಜಿ ಮತ್ತು ಬೆಂಬಲವಿಲ್ಲದೆ ಹೋಗಲು ಸಾಧ್ಯವೇ ಇಲ್ಲ.
ಪ್ರೇಮಿಗಳ ವಾರದ ಐದನೇ ದಿನವನ್ನು ಪ್ರಾಮಿಸ್ ಡೇ ಎಂದು ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ದಂಪತಿಗಳು ಜೀವನಕ್ಕಾಗಿ ತಮ್ಮ ಪಾಲುದಾರರೊಂದಿಗೆ ಇರುವುದಾಗಿ ಭರವಸೆಯನ್ನು ನೀಡುತ್ತಾರೆ.
ಪ್ರಾಮಿಸ್ ಡೇ ಅನ್ನು ಅತ್ಯಂತ ಪ್ರೀತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ, ದಂಪತಿಗಳು ಒಬ್ಬರಿಗೊಬ್ಬರು ಇರಲು ಮತ್ತು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಭರವಸೆ ನೀಡುತ್ತಾರೆ.best promise day wishes
ಅವರು ಮುರಿಯಲಾಗದ ಪ್ರತಿಜ್ಞೆಗಳನ್ನು ಮಾಡುತ್ತಾರೆ ಹಾಗು ತಮ್ಮ ಹೃದಯವನ್ನು ಪರಸ್ಪರ ಅವರಿಗಾಗಿ ಮೀಸಲಿಡುತ್ತಾರೆ.
ಆದರೆ ಶಾಶ್ವತವಾಗಿ ನಿಷ್ಠೆ, ನಂಬಿಕೆ ಮತ್ತು ಬೆಂಬಲವನ್ನು ಖಾತರಿಪಡಿಸುತ್ತಾರೆ, ಈ ದಿನವು ಪ್ರೇಮಿಗಳಿಗೆ ಅವರ ಒಗ್ಗಟ್ಟನ್ನು ನೆನಪಿಸುತ್ತದೆ ಮತ್ತು ಮುಂದಿನ ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುತ್ತದೆ.