ಪಬ್​ಜಿ ಆಟಕ್ಕೆ ಸ್ನೇಹಿತನ ಕೊಲೆ ಮಾಡಿದ ಹಂತಕರು!-pubg Murder

pubg Murder

ಥಾಣೆ

ಪಬ್​ಜಿ ಆಟದ ವಿಷಯಕ್ಕೆ ಜಗಳ ಉಂಟಾಗಿ, 22 ವರ್ಷದ ತಮ್ಮ ಸ್ನೇಹಿತನನ್ನು ಕೊಂದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯ ವರ್ತಕ್ ನಗರದ ಪೊಲೀಸರು ಇಂದು 19 ವರ್ಷದ ಯುವಕನನ್ನು ಬಂಧನ ಮಾಡಿದ್ದಾರೆ.

ಇವರ ಜೊತೆಗೆ ಹಾಗೇ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೀನಾ ಮೂಲದ ಅಪ್ಲಿಕೇಶನ್ ಆಗಿರುವ PUBG ಭಾರತದಲ್ಲಿ 2020ರ ಸೆಪ್ಟೆಂಬರ್​ನಿಂದ ನಿಷೇಧ ಮಡಲಾಗಿತ್ತು.

ಆದರೆ, ಈ ನಾಲ್ವರು ಹುಡುಗರು ನಿಷೇಧಿತ ಪಬ್​ಜಿ ಗೇಮ್​ನ ಯಾವ ಆವೃತ್ತಿಯನ್ನು ಆಡುತ್ತಿದ್ದರು ಎಂಬುದು ಖಚಿತವಾಗಿಲ್ಲ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ವರ್ತಕ್ ನಗರದ ಲಿಟ್ಲ್ ಫ್ಲವರ್ ಸ್ಕೂಲ್ ಬಳಿ ಮೂವರು ತಮ್ಮ ಸ್ನೇಹಿತನನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆಗೈದಿದ್ದಾರೆ.

ಕಳೆದೆರಡು ದಿನಗಳಿಂದ ಪ್ರತಿದಿನ ಶಾಲೆಯ ಬಳಿ ನಾಲ್ವರು ಸ್ನೇಹಿತರು ಮದ್ಯ ಸೇವಿಸುತ್ತಿದ್ದುದನ್ನು ನೋಡಿದ್ದಾಗಿ ಸ್ಥಳೀಯರು ನೋಡಿದ್ದರೆ.

ಅವರೆಲ್ಲರೂ ಒಟ್ಟಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು ಹಾಗೂ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪಬ್​ಜಿ ಆಟದ ಬಳಿಕ ಹುಡುಗಿಯ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಪೊಲೀಸರಿಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ 33 ವರ್ಷದ ರೋಲ್ ಸಲ್ಡಾನ್ಹಾ, ನಾನು ರಸ್ತೆಯಲ್ಲಿ ಹಾದುಹೋಗುವಾಗ ನಾಲ್ವರು ಜಗಳವಾಡುವುದನ್ನು ನಾನು ನೋಡಿದ್ದೇನೆ.

ಅವರಲ್ಲಿ ಇಬ್ಬರು ಶಾಲೆಯಿಂದ ಹೊರಗುಳಿದಿದ್ದರು, ನಾನು ಜಗಳವಾಡುತ್ತಿರುವವರನ್ನು ಕರೆದು ಜಗಳ ನಿಲ್ಲಿಸುವಂತೆ ಹೇಳಿದ್ದೇನೆ.

ಆಮೇಲೆ ಕೊಲೆಯ ವಿಷಯ ತಿಳಿದು ನನಗೆ ಆಘಾತವಾಯಿತು ಎಂದಿದ್ದಾರೆ.

ಈ ಘಟನೆಯ ಬಗ್ಗೆ ವರ್ತಕ್ ನಗರ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸದಾಶಿವ ನಿಕಮ್ ಮಾತನಾಡಿ, ಮೃತನನ್ನು ಸಯೀಲ್ ಜಾಧವ್ ಎಂದು ಗುರುತಿಸಿದ್ದಾರೆ.pubg Murder

ಸೋಮವಾರ ರಾತ್ರಿ 9.30ರಿಂದ 10 ಗಂಟೆಯ ನಡುವೆ ಕೊಲೆಯನ್ನು ಮಾಡಲಾಗಿದೆ.

ಪ್ರಮುಖ ಆರೋಪಿ ಪ್ರಣವ್ ಕೋಲಿ ಸೇರಿದಂತೆ ನಾಲ್ವರು ಸ್ನೇಹಿತರು ಆಗಾಗ್ಗೆ PUBG ಗೇಮ್ ಅನ್ನು ಆಡುತ್ತಿದ್ದರು.

ಹಾಗೆಯೇ ಆಟದ ನಂತರ ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕೊಲೆಯ ಘಟನೆ

ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಪಬ್​ಜಿ ಆಟ ಆಡಿದ್ದು, ಬಳಿಕ ಮದ್ಯವನ್ನು ಸೇವಿಸಿದ್ದಾರೆ.

ಮದ್ಯ ಸೇವಿಸಿದ ನಂತರ ಅವರೆಲ್ಲರೂ ಆಟದ ವಿಷಯದಲ್ಲಿ ಜಗಳವಾಡಿ, ಈ ಸಮಯದಲ್ಲಿ ಇಬ್ಬರು ಅಪ್ರಾಪ್ತ ಹುಡುಗರು ಸೇರಿದಂತೆ 3 ಸ್ನೇಹಿತರು ಜಾಧವ್‌ಗೆ ಚಾಕುವಿನಿಂದ ಎದೆ, ಬೆನ್ನು, ಮೊಣಕಾಲು ಮತ್ತು ತಲೆಗೆ ಚುಚ್ಚಿ ಕೊಲೆ ಮಾಡಿದ್ದಾರೆ.

ಇದರಿಂದಾಗಿ ಸಯೀಲ್ ಜಾಧವ್ ಸ್ಥಳದಲ್ಲೇ ಮರಣ ಹೊಂದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.

ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲೆ ಮಾಡಲಾಗಿದೆ.

ಪಬ್​ಜಿ ಆಟದ ಬಳಿಕ ಹುಡುಗಿಯ ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಪೊಲೀಸರಿಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ 33 ವರ್ಷದ ರೋಲ್ ಸಲ್ಡಾನ್ಹಾ, ನಾನು ರಸ್ತೆಯಲ್ಲಿ ಹಾದುಹೋಗುವಾಗ ನಾಲ್ವರು ಜಗಳವಾಡುವುದನ್ನು ನಾನು ನೋಡಿದ್ದೇನೆ.pubg Murder

ಅವರಲ್ಲಿ ಇಬ್ಬರು ಶಾಲೆಯಿಂದ ಹೊರಗುಳಿದಿದ್ದರು, ನಾನು ಜಗಳವಾಡುತ್ತಿರುವವರನ್ನು ಕರೆದು ಜಗಳ ನಿಲ್ಲಿಸುವಂತೆ ಹೇಳಿದ್ದೇನೆ.

ಆಮೇಲೆ ಕೊಲೆಯ ವಿಷಯ ತಿಳಿದು ನನಗೆ ಆಘಾತವಾಯಿತು ಎಂದಿದ್ದಾರೆ.

ಬೀದರ-ಯಶವಂತಪುರ ರೈಲು ಕಲಬುರಗಿಯಿಂದ ಸಂಚಾರ !

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.1175j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *