
Puneeth Rajakumar Birthday
ಬೆಂಗಳೂರು
ಸ್ಯಾಂಡಲ್‌ವುಡ್‌ನಲ್ಲಿ ಹೈವೋಲ್ಟೇಜ್ ಆಗಿದ್ದ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್, ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ನಟರಾಗಿದ್ದು.puneeth rajakumar
ಪ್ರತಿಯೊಬ್ಬರಿಗೂ ಪ್ರೀತಿಯಿಂದ ಅಪ್ಪು ಅಂತ ಕರೆಯಿಸಿಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನೋತ್ಸವ ಇವತ್ತು..!
ಮಾ.17 ರಂದು ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟಹಬ್ಬದ ಸಂಭ್ರಮದ ಕರುನಾಡಿನಲ್ಲಿ ಮುಗಿಲು ಮುಟ್ಟಿದೆ.
ಇಡೀ ಕರುನಾಡಿನ ಗ್ರಾಮ ಗ್ರಾಮಗಳಲ್ಲಿಯೂ ಅಪ್ಪು ಅಭಿಮಾನಿಗಳು, ಯುವಕರು ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದ್ದಾರೆ.
ಪುನೀತ್ ಹುಟ್ಟುಹಬ್ಬ ಕೇವಲ ಅವರ ಮನೆ ಅಥವಾ ಸಮಾಧಿಗೆ ಸೀಮಿತ ಆಗಿಲ್ಲ,ಇಡೀ ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಯುವಕರು ಸಂಭ್ರಮದಿಂದ, ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.birthday
ಗ್ರಾಮ, ಪಟ್ಟಣ, ವೃತ್ತ ಹೀಗೆ ಎಲ್ಲೆಂದರಲ್ಲಿ ಪುನೀತ್ ಅವರ ಪೋಸ್ಟರ್, ಕಟೌಟ್ ಹಾಕಿ, ಹಾರ ಹಾಕುವುದರ ಮೂಲಕ ಮಧ್ಯರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ಮೂಲಕ ಪುನೀತ್ ಕೇವಲ ನಟನಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರುವ ಅಭಿಮಾನ ಎಂಬುವುದು ನಿರೂಪಿಸಿದ್ದಾರೆ.
ಅಭಿಮಾನಿಗಳ ನೆಚ್ಚಿನ ಪುನೀತ್ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 47ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು, ಆದರೆ ದುರಾದೃಷ್ಟವಶಾತ್ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇಲ್ಲ.rajakumar
ದೈಹಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಎಂದೆಂದಿಗೂ ಅಮರ.
ಅದಕ್ಕೆ ಸಾಕ್ಷಿ ಇಂದು ಪುನೀತ್ ಜನ್ಮದಿನವನ್ನು ಹಾಗೂ ಅವರ ‘ಜೇಮ್ಸ್’ ಚಿತ್ರವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.
ಪ್ರತಿ ವರ್ಷ ಅಪ್ಪು ಅವರ ಹುಟ್ಟುಹಬ್ಬ ಬಂತೂ ಅಂದರೆ, ಅವರ ಸದಾಶಿವನಗರದ ನಿವಾಸದ ಮುಂದೆ ದೊಡ್ಡ ಜಾತ್ರೆಯೇ ನಡೆಯುತ್ತಿತ್ತು.
ಪುನೀತ್ ರಾಜ್‌ಕುಮಾರ್‌ಗೆ ಶುಭ ಕೋರಲು ನೂರಾರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸುತ್ತಿದ್ದರು.
ಅಪ್ಪುಗಾಗಿ ಫ್ಯಾನ್ಸ್ ತರಹೇವಾರಿ ಕೇಕ್‌ಗಳನ್ನ ತರುತ್ತಿದ್ದು, ತಮ್ಮ ಜನ್ಮದಿನವನ್ನು ಅಭಿಮಾನಿಗಳಿಗಾಗಿಯೇ ಪುನೀತ್ ರಾಜ್‌ಕುಮಾರ್ ಮೀಸಲಿಡುತ್ತಿದ್ದರು.
ಆದರೀಗ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲ, ಆದರೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಶಾಶ್ವತವಾಗಿ ಉಳಿದಿದ್ದಾರೆ.
ಇಂದು ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಅಭಿಮಾನಿಗಳ ಸಾಗರವೇ ಬರುತ್ತಿದೆ.Puneeth Rajakumar Birthday
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದು, ತಾರೆಯರು ಹಾಗೂ ರಾಜಕಾರಣಿಗಳು ಟ್ವಿಟ್ಟರ್ ಮೂಲಕ ಪುನೀತ್ ರಾಜ್‌ಕುಮಾರ್ ಸ್ಮರಣೆ ಮಾಡುತ್ತಿದ್ದಾರೆ.puneeth
Whatsapp ಸ್ಟೇಟಸ್‌ಗಳಲ್ಲಿ ಪುನೀತ್
ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಾಗೂ ಇದೇ ದಿನ ಬಿಡುಗಡೆ ಆಗಿರುವ ‘ಜೇಮ್ಸ್’ ಚಿತ್ರ ಮೊಬೈಲ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ.
ತಮ್ಮ ನೆಚ್ಚಿನ ಅಭಿಮಾನದ ನಾಯಕನಿಗೆ ಪ್ರತಿಯೊಬ್ಬರೂ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಅಪ್ಪುವಿನ ನಗುಮುಖದ ಫೋಟೋಗಳು, ರಾಜನಂತಹ ಕಳೆ ಇರುವ ಭಾವಚಿತ್ರಗಳು, ಕನ್ನಡ ಧ್ವಜದೊಂದಿಗೆ ಜೋಡಿಸಲಾದಂತಹ ಚಿತ್ರಗಳು ಹರಿದಾಡುತ್ತಿವೆ.
‘ನೀನೆ ರಾಜಕಕುಮಾರ’ ಎಂಬಂತಹ ಗೀತೆ ಸಂಯೋಜನೆ ಮಾಡಲಾದ ಭಾವಚಿತ್ರಗಳು ಹೀಗೆ ಅವರ ಅಭಿಮಾನಕ್ಕೆ ತೋಚಿದಂತಹ ಚಿತ್ರಗಳನ್ನು ತಮ್ಮ ಸ್ಟೇಟಸ್ ಮಾಡಿಕೊಂಡು ಶುಭಾಶಯ ಹಾಗೂ ನಮನ ಸಲ್ಲಿಸುತ್ತಿದ್ದಾರೆ.
ಇದರ ಜೊತೆಯಲ್ಲಿ ‘ಜೇಮ್ಸ್’ ಚಿತ್ರ ಸಹ ಬಿಡುಗಡೆ ಆಗಿದ್ದು, ಮೊದಲ ಶೋ ನೀಡಿದ ಚಿತ್ರ, ಟಿಕೆಟ್‌ಗಳ ಸ್ಕ್ರೀನ್ ಶಾಟ್, ಅಪ್ಪು ಸಮಾಧಿಯಲ್ಲಿ ನಿಂತಿರುವ ಚಿತ್ರ.puneeth rajakumr’s
ನಟ ಅಪ್ಪುವಿಗೆ ಹಾಲಿನ ಅಭಿಷೇಕ ಮಾಡುತ್ತಿರುವಂತಹ ದೃಶ್ಯಗಳು ಹೀಗೆ ನಾನಾ ರೀತಿಯ ಫೋಟೊಗಳನ್ನು ಹಾಕಿ ಸಂಭ್ರಮ ಮಾಡುತ್ತಿದ್ದಾರೆ.
ಪುನೀತ್ ಟ್ವಿಟರ್‌ನಲ್ಲಿ ಟ್ರೆಂಡ್
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಹ #PuneethRajKumar, #CelebratePuneethRajkumar, #James ಹೀಗೆ ಹಲವು ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.
ನಿನ್ನೆ ಬುಧವಾರದಿಂದಲೇ ಈ ಹ್ಯಾಷ್‌ಟ್ಯಾಗ್‌ನಡಿ ಜನ ಟ್ವೀಟ್ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.james movie
ಬಸವರಾಜ್ ಬೊಮ್ಮಾಯಿ

‘’ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ. movie
ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿಯ ಪೂರ್ವಕ ನಮನಗಳು, ಅತೀ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ನಮಗೆ ಪದಗಳೇ ಸಾಲದು’’
ಎಚ್.ಡಿ.ಕುಮಾರಸ್ವಾಮಿ

‘’ಕನ್ನಡ ಚಿತ್ರರಂಗದ ಅಸ್ತಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಮರೆಯಲಾಗದ ಆ ತಾರೆಗೆ ನನ್ನ ಕಡೆಯಿಂದ ಭಾವಪೂರ್ಣ ನಮನಗಳು.Puneeth Rajakumar Birthday
ಕನ್ನಡಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಆಗಿರುವ ಅವರು ನಮ್ಮ ಪಾಲಿಗೆ ಸದಾ ಅಮರರಾಗಿದ್ದಾರೆ.’’
ಸಿದ್ದರಾಮಯ್ಯ

ನಟ ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ ಸರಳ, ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ್ದ ಅವರ ಪ್ರತಿಭಾಶಾಲಿ ವ್ಯಕ್ತಿತ್ವ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ.
ಇಂದು ಅವರ ಹುಟ್ಟುಹಬ್ಬದ ದಿನ ಅಪ್ಪುವನ್ನು ಪ್ರೀತಿ ಮತ್ತು ದು:ಖದಿಂದ ಸ್ಮರಿಸುತ್ತೇನೆ.james
ಬಿ.ಎಸ್.ಯಡಿಯೂರಪ್ಪ

‘’ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿದ್ದಾರೆ.
ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನ ಪೂರ್ವಕ ನಮಿಸುತ್ತೇನೆ.’’kannada
ನಿಖಿಲ್ ಕುಮಾರ್

‘’ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್. ಇಂದು ಬಿಡುಗಡೆ ಆಗುತ್ತಿರುವ ಜೇಮ್ಸ್ ಚಿತ್ರ ಭಾರತ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ನಿರ್ಮಿಸಲಿ’’
ಜೇಮ್ಸ್ ಸಿನಿಮಾದ ಪೋಸ್ಟರ್‌ಗಳು ಟ್ವಿಟರ್‌ನಲ್ಲಿ ತುಂಬಾ ರಾರಾಜಿಸುತ್ತಿವೆ, ತೆಲುಗು ನಟ ಚಿರಂಜೀವಿ ಸಹಿತ ಹಲವು ಗಣ್ಯರು ಅಪ್ಪು ಕುರಿತು ಆಡಿರುವ ಮಾತುಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ.film
ಇಂದು ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ ಸುಮಾರು 20 ಸಾವಿರಕ್ಕೂ ಅಧಿಕ ಜನರು ಟ್ವೀಟ್‌ಗಳನ್ನು ಮಾಡಿದ್ದಾರೆ.