
srivalli song
ಅಲ್ಲೂ ಅರ್ಜುನ್
ಅಲ್ಲೂ ಅರ್ಜುನ್ ಅವರು ಭಾರತೀಯ ತೆಲುಗು ಚಿತ್ರರಂಗದ ಹಾಗೂ ತೆಲುಗು ಭಾಷೆಯಲ್ಲಿಯೇ ಅತ್ಯಂತ ಬಹು ಬೇಡಿಕೆಯ ನಟ.
ಮೊಟ್ಟ ಮೊದಲು ಗಂಗೋತ್ರಿ ಚಿತ್ರದ ಮೂಲಕ ತನ್ನ ಸಿನಿ ಪಯಣವನ್ನು ಪ್ರಾರಂಭ ಮಾಡಿದರು.
ಇವರು ಪ್ರಸ್ತುತವಾಗಿ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.srivalli song
ಮುಖ್ಯವಾಗಿ ನೃತ್ಯಕ್ಕೆ ಹೆಚ್ಚು ಹೆಸರು ವಾಸಿಯಾಗಿದ್ದರೆ, ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಹಾಗೂ ಐದು ನಂದಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪುಷ್ಪ: ದಿ ರೈಸ್ – ಭಾಗ 01
ಭಾರತೀಯ ತೆಲುಗು ಭಾಷೆಯ ಚಿತ್ರರಂಗದ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದೆ,ಸುಕುಮಾರ್ ಅವರು ಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅಡಿಯಲ್ಲಿ ನಟ ಅಲ್ಲು ಅರ್ಜುನ್ ಪುಷ್ಪರಾಜ್ ಮತ್ತು ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ.srivalli song
ಫಹಾದ್ ಫಾಸಿಲ್ (ಮೊಟ್ಟ ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ) ಜಗದೀಶ್ ಪ್ರತಾಪ್ ಬಂಡಾರಿ, ಸುನಿಲ್, ರಾವ್ ರಮೇಶ್, ಧನಂಜಯ, ಅನಸೂಯಾ ಭಾರದ್ವಾಜ್, ಅಜಯ್ ಮತ್ತು ಅಜಯ್ ಘೋಷ್ ಪೋಷಕ ಪಾತ್ರಗಳನ್ನು ಮಾಡಿದ್ದಾರೆ.
ಚಿತ್ರದ ಎರಡು ಭಾಗಗಳಲ್ಲಿ ಆಂಧ್ರಪ್ರದೇಶ ರಾಜ್ಯದ ಶೇಷಾಚಲಂ ಬೆಟ್ಟಗಳಲ್ಲಿ ಬೆಳೆಯುವ ಅಪರೂಪದ ಮರವಾದ ಕೆಂಪು ಚಂದನದ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ಕೂಲಿಗಳ ಬೆಳವಣಿಗೆ ಚಿತ್ರಿಸುತ್ತದೆ.
ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರು ಚಿತ್ರದ ಸ್ಕೋರ್ ಹಾಗು ಸಂಗೀತ ಸಂಯೋಜನೆ ಮಾಡೀದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಭಾಷೆಗಳಲ್ಲಿ ತನ್ನ ಹಾಡಿನ ಮೂಲಕ ಮೋಡಿಯನ್ನು ಮಾಡುತ್ತಿರುವ ಹಿನ್ನೆಲೆ ಗಾಯಕ ಸಿದ ಸ್ರಿರಾಮ್.
ಸಿದ ಸ್ರಿರಾಮ್ ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಹಾಡು ಬಹಳ ಮೆಚ್ಚುಗೆ ಮತ್ತು ಸಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ಚಿತ್ರದಲ್ಲಿ ಅಲ್ಲೂ ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಶ್ರೀವಲ್ಲಿ ಹಾಡಿನಲ್ಲಿ ತನ್ನ ಚಪ್ಪಲಿಯನ್ನು ಎಳೆದುಕೊಂಡು ಹೋಗುವಂತಹ ನೃತ್ಯ ಸನ್ನಿವೇಶ ಮಾಡುತ್ತಾರೆ.srivalli song
ಆ ಹಾಡಿನ ಒಂದು ಸನ್ನಿವೇಶವನ್ನು ತೆಗೆದುಕೊಂಡು ಪ್ರಪಂಚಾದ್ಯಂತ ಕೆಲವು ಜನರು ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತಿದ್ದಾರೆ.
ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಮಿರೋಸ್ಲಾವ್ ಕುಬಾ ಬ್ರೋಜೆಕ್ ಹಾಗೂ ಕಾರ್ತಿಕಾ ಶ್ರೀನಿವಾಸ್-ರೂಬೆನ್ ನಿರ್ವಹಿಸಿದ್ದಾರೆ.
ಪುಷ್ಪ ದಿ ರೈಸ್ 17 ಡಿಸೆಂಬರ್ 2021 ರಂದು ತೆಲುಗು ಭಾಷೆಯ ಜೊತೆಗೆ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಬಿಡುಗಡೆಯಾಗಿದೆ.
ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ 365 ಕೋಟಿ ಗಳಿಕೆ ಮಾಡಿದೆ, ಹಾಗೆಯೇ 2021 ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ, ಮತ್ತು ತೆಲುಗು ಭಾಷೆಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ.
ಇದರ ಎರಡನೇ ಭಾಗವು ಪುಷ್ಪ 2: ದಿ ರೂಲ್ ಏಪ್ರಿಲ್ 2022 ರಲ್ಲಿ ಚಿತ್ರವೂ ಬರುವ ಸಾಧ್ಯತೆ ಇದೆ.
ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser