ರಾಧಿಕಾ ಪಂಡಿತ್ “ಸ್ಯಾಂಡಲ್​ವುಡ್ ಸಿಂಡ್ರೆಲ್ಲಾ”ಗೆ ಜನ್ಮದಿನದ ಸಂಭ್ರಮ!

Radhika Pandit Birthday 2022

ರಾಧಿಕಾ ಪಂಡಿತ್ ಜನ್ಮದಿನ

ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಈ ಹೆಸರು ಚಿರಪರಿಚಿತವಾಗಿದೆ, ಯಾಕಂದ್ರೆ ತಮ್ಮ ನಟನಾ ಕೌಶಲ್ಯದಿಂದ ಕನ್ನಡಿಗರ ಮನಗೆದ್ದ ನಟಿ ರಾಧಿಕಾ ಪಂಡಿತ್ ದೊಡ್ಡ ದೊಡ್ಡ ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು.

ಅದರಲ್ಲೂ ರಾಧಿಕಾ ಪಂಡಿತ್ ಅವರ ಸಿನಿಮಾಗಳು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರುತ್ತಿದ್ದು ವಿಶೇಷವಾಗಿದೆ, ಹೀಗೆ ಕನ್ನಡ ಚಿತ್ರರಂಗದ ಮಿನುಗು ತಾರೆ ರಾಧಿಕಾ ಪಂಡಿತ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಹತ್ತಾರು ಹಿಟ್‌ ಸಿನಿಮಾಗಳನ್ನು ಕನ್ನಡಿಗರ ಮುಂದೆ ಇಟ್ಟಿದ್ದ ರಾಧಿಕಾ ಪಂಡಿತ್‌ ಅವರು ಮದುವೆಯಾದ ನಂತರ ಕೆಲವು ವರ್ಷಗಳಿಂದ ನಟನೆಗೆ ಮರಳಲಿಲ್ಲ.radhika pandit birthday

ಆದರೆ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಮೂಲಕ ರಾಧಿಕಾ ಪಂಡಿತ್ ಕಂಬ್ಯಾಕ್​ ಮಾಡಿ‌ದ್ದರೂ ಮತ್ತೆ ಯಾವುದೇ ಸಿನಿಮಾ ಮಾಡಲು ಒಪ್ಪಿಕೊಳ್ಳಲಿಲ್ಲ

ಧಾರಾವಾಹಿಗಳು ಹಾಗೂ ಸ್ಟಾರ್ ನಟರ ಜೊತೆ ಸಿನಿಮಾದಲ್ಲಿ ನಟಿಸಿರುವ, ‘ಸ್ಯಾಂಡಲ್‌ವುಡ್ ಸಿಂಡ್ರೆಲಾ’ ನಟಿ ರಾಧಿಕಾ ಪಂಡಿತ್ ಅವರು ಇಂದು ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದಾರೆ.

ಒಂದೆರಡು ವರ್ಷಗಳಿಂದ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡಿಕೊಂಡಿಲ್ಲ.

ಬರ್ತ್‌ಡೇ ಸಂಭ್ರಮದಲ್ಲಿರುವ ರಾಧಿಕಾ ಪಂಡಿತ್‌ಗೆ ಅಭಿಮಾನಿಗಳು ಸೇರಿ ಸ್ಯಾಂಡಲ್‌ವುಡ್‌ನ ಗಣ್ಯರು ಇವತ್ತು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

2017ರಿಂದ ನಟನೆಯಿಂದ ದೂರವಿರುವ ರಾಧಿಕಾ ಪಂಡಿತ್‌ ಯಾವಾಗ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂಬುವುದು ಕಾದು ನೋಡಬೇಕಿದೆ.Radhika Pandit Birthday 2022

ತಮ್ಮ ಮಕ್ಕಳಾದ ಆಯ್ರಾ, ಯಥರ್ವ್ ಜೊತೆಗೆ ರಾಧಿಕಾ ಪಂಡಿತ್ ಸಮಯ ಕಳೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಮಕ್ಕಳು ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಪುನೀತ್​ ಅಗಲಿಕೆಯ ನೋವು ಯಾರಿಂದಲೂ ಮರೆಯಲು ಸಾಧ್ಯವಿಲ್ಲ, ಇದೇ ಕಾರಣಕ್ಕೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ರಾಧಿಕಾ ಪಂಡಿತ್​ ನಿರ್ಧಾರ ಮಾಡಿದ್ದಾರೆ.radhika birth day

ಈ ವರ್ಷ ಯಾರು ಹುಟ್ಟು ಹಬ್ಬ ಆಚರಿಸಲು ಬರಬೇಡಿ ಎಂದು ಅಭಿಮಾನಿಗಳಿಗೆ ರಾಧಿಕಾ ಪಂಡಿತ್​ ಮನವಿಯನ್ನು ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಆಸೆ

ಸ್ಯಾಂಡಲ್ ವುಡ್ ಪ್ರಿನ್ಸೆಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದೆ, 38ನೇ ವಸಂತಕ್ಕೆ ಕಾಲಿಡುತ್ತಿರುವ ಸಡಗರದಲ್ಲಿದ್ದಾರೆ ನಟಿ ರಾಧಿಕಾ ಪಂಡಿತ್​.

ತಮ್ಮ ಮುದ್ದಾದ ನಗು, ಹಿತಮಿತವಾದ ಮಾತು, ಝೀರೋ ಕಾಂಟ್ರವರ್ಸಿ ಹೊಂದಿರುವ ನಟಿ ಅಂದ್ರೆ ಅದು ಕೇವಲ ರಾಧಿಕಾ ಪಂಡಿತ್​.

ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರುಲು ರಾಧಿಕಾ ಪಂಡಿತ್​ ನಿರ್ಧರಿಸಿದ್ದಾರೆ, ಅಪ್ಪು ನಿಧನದಿಂದ ಈ ಬಾರಿ ಯಾವ ತಾರೆಯರೂ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.radhika pandit fans

ಪುನೀತ್​ ರಾಜ್​ಕುಮಾರ್​ ಹಾಗೂ ರಾಧಿಕಾ ಪಂಡಿತ್​ ನಡುವೆ ಒಳ್ಳೆಯ ಸ್ನೇಹ ಸಂಬಂಧವಿತ್ತು, ಅಲ್ಲದೇ ಇವರು ನಟಿಸಿದ ದೊಡ್ಮನೆ ಹುಡುಗ ಸಿನಿಮಾದಲ್ಲಿ ಇವರ ಕೆಮೆಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು.

2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬೆಳ್ಳಿ ತೆರೆ ಲೋಕಕ್ಕೆ ಕಾಲಿಟ್ಟ ನಟಿ ರಾಧಿಕಾ ಪಂಡಿತ್​.

ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸನ್ನು ಕಂಡುಕೊಳ್ಳುವ ಮೂಲಕ ಆ ನಂತರ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಅಂದ್ಹಾಗೆ, ಪುಟಾಣಿ ಮಕ್ಕಳ ಆರೈಕೆಯಲ್ಲೇ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಯಾವ ಚಿತ್ರವನ್ನೂ ಮಾಡಲು ಒಪ್ಪಿಕೊಂಡಿಲ್ಲ.

‘ಆದಿಲಕ್ಷ್ಮಿ ಪುರಾಣ’ ಚಿತ್ರದ ನಂತರ ಯಾವುದೇ ಚಿತ್ರಕ್ಕೆ ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ರಾಧಿಕಾ ಪಂಡಿತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಬಯಕೆಯಾಗಿದೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಬರುತ್ತಲೇ ಇವೆ. ಆದರೆ ರಾಧಿಕಾ ಪಂಡಿತ್ ಈ ಬಗ್ಗೆ ಇನ್ನೂ ನಿರ್ಧಾರವನ್ನು ತೆಗೆದುಕೊಂಡಂತಿಲ್ಲ.Radhika Pandit Birthday 2022

ಧ್ರುವ ಸರ್ಜಾ, ಪುನೀತ್​ ರಾಜ್​ಕುಮಾರ್, ಶಿವರಾಜ್​ ಕುಮಾರ್​​ ಸೇರಿ ಅನೇಕ ಸ್ಟಾರ್ ನಟರ ಜತೆ ರಾಧಿಕಾ ತೆರೆಯನ್ನು ಹಂಚಿಕೊಂಡಿದ್ದಾರೆ.

ಇದೀಗ ಮತ್ತೆ ಇವರು ಬಣ್ಣ ಹಚ್ಚಬೇಕು ಎಂದು ಅಭಿಮಾನಿಗಳು ಒತ್ತಾಯವನ್ನು ಮಾಡುತ್ತಿದ್ದಾರೆ.radhika pandit birth day

ಹೀಗೆ ನಟಿ ರಾಧಿಕಾ ಪಂಡಿತ್ ಅವರ ಗೈರು ಹಾಜರು ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ಹೀಗಾಗಿ ರಾಧಿಕಾ ಅವರು ಯಾವಾಗ ಸಿನಿಮಾಗೆ ಮರಳುತ್ತಾರಾ ಅಂತಾ ಅವರ ಅಭಿಮಾನಿಗಳು ತುಂಬಾ ಕಾಯುತ್ತಿದ್ದಾರೆ.

ರಾಧಿಕಾ ಪಂಡಿತ್‌ ಬರ್ತ್‌ ಡೇ ಸಂಭ್ರಮದಲ್ಲೇ ಅಭಿಮಾನಿಗಳು ಈ ಬೇಡಿಕೆಯನ್ನು ಇಟ್ಟಿದ್ದು, ಮತ್ತೆ ಚಿತ್ರರಂಗಕ್ಕೆ ಮರಳುವಂತೆ ನಟಿಗೆ ಮನವಿ ಮಾಡುತ್ತಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌

ರಾಕಿಂಗ್‌ ಸ್ಟಾರ್‌ ಯಶ್‌ ಪತ್ನಿ ರಾಧಿಕಾ ಅವರು 2008ರಲ್ಲಿ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಹೆಜ್ಜೆಯನ್ನು ಹಾಕಿದವರು.yash

ಬಳಿಕ ಯಶ್‌ ಅವರನ್ನು ಮದುವೆಯಾದ ರಾಧಿಕಾ ಪಂಡಿತ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಹಾಗಾಗಿ ಮಕ್ಕಳ ಆರೈಕೆಯಲ್ಲೇ ನಟಿ ಬ್ಯುಸಿಯಾಗಿದ್ದಾರೆ.Radhika Pandit Birthday 2022

ಈ ಸಮಯದಲ್ಲಿ ಚಿತ್ರರಂಗಕ್ಕೆ ಮರಳುತ್ತಾರಾ ಅನ್ನೋ ಅನುಮಾನ ಕೂಡ ಅವರ ಅಭಿಮಾನಿ ಬಳಗವನ್ನು ಕಾಡುತ್ತಿದೆ.

ಒಟ್ಟಾರೆ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಛಾಪು ಮೂಡಿಸಿದ್ದ ರಾಧಿಕಾ ಪಂಡಿತ್‌ ಅವರು ಮರಳಿ ಮತ್ತೆ ಚಿತ್ರರಂಗಕ್ಕೆ ಹೆಜ್ಜೆ ಇಟ್ಟರೆ ಅಭಿಮಾನಿಗಳಿಗೆ ಖುಷಿಯೋ ಖುಷಿ.yash radhika birth day

ಧಿಡೀರ್ ಅಡುಗೆ ಎಣ್ಣೆ ಬೆಲೆ ಏರಿಕೆ ಮುಗಿಬಿದ್ದ ಜನ!

https://www.google.com/search?q=skillindiajobs.com&oq=sk&aqs=chrome.0.35i39j69i57j35i39j0i20i263i512j0i433i512l2j46i131i199i433i465i512j69i60.1253j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *