ಪಂಚ ರಾಜ್ಯಗಳ ಸೋಲಿನ ಹಿನ್ನೆಲೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ!

Rahul Gandhi

ರಾಹುಲ್ ಗಾಂಧಿ

ರಾಜ್ಯದ ಮೂರೂ ಪಕ್ಷಗಳು ಹಾಲೀ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಿಬಿಟ್ಟಿವೆ, ಬಿಜೆಪಿಯ ವರಿಷ್ಠರು ರಾಜ್ಯಕ್ಕೆ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಈಗ, ರಾಹುಲ್ ಗಾಂಧಿಯೂ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಪಂಚ ರಾಜ್ಯಗಳ ಸೋಲಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಚುನಾವಣಾ ಮೂಡಿಗೆ ಕರೆದೊಯ್ಯಲು ರಾಹುಲ್ ಗಾಂಧಿಯ ಆಗಮನವಾಗುತ್ತಿದೆ ಎಂದು ಹೇಳಲಾಗುತ್ತಿದೆ.

congrss ಪಕ್ಷವು ಮತ್ತೆ ಅಧಿಕಾರಕ್ಕೆ ಬರಬಹುದಾದ ರಾಜ್ಯಗಳಲ್ಲಿ ಒಂದು ಎಂದು ಕರ್ನಾಟಕವನ್ನು ವ್ಯಾಖ್ಯಾನಿಸಲಾಗುತ್ತಿರುವುದರಿಂದ, ಐದು ರಾಜ್ಯಗಳ ಸೋಲಿನ ಪ್ರಭಾವವು ಇಲ್ಲಿ ಎದುರಾಗಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಈಗಲೇ ಆಖಾಡಕ್ಕೆ ಇಳಿದಂತಿದೆ.

ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತ್ತು, ಇದರ ಜೊತೆಗೆ, ದೇಶದ ರಾಜಕೀಯದಲ್ಲಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ನಿರೀಕ್ಷಿಗೂ ಮೀರಿ ಸೋಲನ್ನು ಕಂಡಿತ್ತು ಹಾಗಾಗಿ, ಎಐಸಿಸಿ ಮಟ್ಟದಲ್ಲಿ ಹಲವು ಬದಲಾವಣೆಯಾಗುತ್ತಿದೆ.

ಪಂಚ ರಾಜ್ಯಗಳ ಸೋಲಿಗೆ ಕಾರಣ

01. https://www.inc.in/ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 500 ರೂ.ಗಿಂತ ಕಡಿಮೆಯಿರುತ್ತದೆ, ಉದ್ಯೋಗಗಳು, ಐದು ಲಕ್ಷ ಕುಟುಂಬಗಳಿಗೆ ವಿತ್ತೀಯ ಭತ್ಯೆ, ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು.

ಆದರೂ ಸಹ, ಜನರು ಇದನ್ನು ಪರಿಗಣಿಸಿಲ್ಲ ರಾಷ್ಟ್ರೀಯ ಭದ್ರತೆ, ಸೇನಾ ಕಲ್ಯಾಣ ಹಾಗೂ ಧಾರ್ಮಿಕ ಪ್ರವಾಸೋದ್ಯಮದ ವಿಷಯಗಳ ಮೇಲೆ ಮತ ಚಲಾಯಿಸಿದರು.

02. ಗ್ರ್ಯಾಂಡ್ ಓಲ್ಡ್ ಪಾರ್ಟಿಯು ಪಕ್ಷದೊಳಗಿನ ಆಂತರಿಕ ಕಲಹ ಮತ್ತು ಚುನಾವಣಾ ಭರವಸೆಗಳನ್ನು ನಿರ್ವಹಿಸುವ ವಿಷಯದಲ್ಲಿ ಎಲ್ಲಾ ಸರಿಯಾದ ಪೆಟ್ಟಿಗೆಗಳನ್ನು ಗುರುತಿಸಿದೆ ಎಂದು ತೋರುತ್ತದೆ.

ಆದರೆ ಅದರ ರಾಷ್ಟ್ರೀಯ ಚಿತ್ರಣವು ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆಗಳನ್ನು ದುರ್ಬಲಗೊಳಿಸಿದೆ.

03. ಬಿಜೆಪಿ ಪ್ರಚಾರಕರ ಸ್ಟಾರ್ ಪಟ್ಟಿಯನ್ನು ಹೊಂದಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಮೂರು ದಿನಗಳ ಕಾಲ ರಾಜ್ಯದಲ್ಲಿದ್ದರು.

ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಲವಾರು ರ್ಯಾಲಿಗಳನ್ನು ನಡೆಸಿದರು.

ಆದರೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಹೋಲಿಸಿದರೆ ಕಡಿಮೆ ರ್ಯಾಲಿಗಳನ್ನು ನಡೆಸಿದರು.

04. ಹಿಂದಿನ ಹರೀಶ್ ರಾವತ್ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಕಳೆದ ವರ್ಷ ಚುನಾವಣಾ ರ್ಯಾಲಿಯಲ್ಲಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ, ನಮಾಜ್‌ಗಾಗಿ ಹೆದ್ದಾರಿಗಳನ್ನು ಮುಚ್ಚಲು ಅವಕಾಶ ಮಾಡಿಕೊಟ್ಟಿತು ಮತ್ತು ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯದ ಭರವಸೆ ನೀಡಿತ್ತು.

ಈ ವಿಷಯಗಳ ಮೇಲೆ ಬಿಜೆಪಿ ಮತಗಳನ್ನು ಪಡೆಯಲು ಸಾಧ್ಯವಾಯಿತು ಎಂದು ತೋರುತ್ತದೆ.

05. ಬಿಜೆಪಿಯು ಸೇನೆಯ ಪರವಾಗಿರುವ ಪಕ್ಷ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಬಲ್ಲ ಪಕ್ಷ ಎಂಬ ಚಿತ್ರಣವು ಭಾರತೀಯ ಸೇನೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಕಂಡಿರುವ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಅವಲಂಬಿಸಿರುವ ರಾಜ್ಯದಲ್ಲಿ ಅದರ ಪರವಾಗಿ ಕೆಲಸ ಮಾಡುತ್ತಿದೆ.

MB ಪಾಟೀಲ್ ಪದಗ್ರಹಣ ಕಾರ್ಯಕ್ರಮ

ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನುವ ಮಾತನ್ನು ಹೇಳುತ್ತಿರುವ ಕಾಂಗ್ರೆಸ್ ನಾಯಕರು ನಾವು ಸಿದ್ದ ಎಂದು ಹೇಳಿದ್ದಾರೆ.

ನವೆಂಬರ್ ತಿಂಗಳಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಎಂ.ಬಿ.ಪಾಟೀಲ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ರಾಜ್ಯ ಕಾಂಗ್ರೆಸ್ಸಿಗರು ಇದ್ದರು.

ಆದರೆ, ಆ ವೇಳೆಯಲ್ಲಿ ಬರದಿದ್ದ ರಾಹುಲ್, ಮಾರ್ಚ್ 31ರಂದು ರಾಜ್ಯಕ್ಕೆ ಬರುವ ಕಾರ್ಯಕ್ರಮ ಖಚಿತವಾಗಿದೆ. ಹಾಗೆಯೇ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಮೇಕೆದಾಟು ಪಾದಯಾತ್ರೆಯಿಂದ ಉತ್ಸಾಹ

ಚುನಾವಣೆಗೆ ಪೂರ್ವಭಾವಿಯಂತೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್ ಪದಗ್ರಹಣವನ್ನು ಮಾಡಿದ್ದಾರೆ, ದೆಹಲಿಯಿಂದ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗಮಿಸಿದ್ದರು.

ಎಂ.ಬಿ.ಪಾಟೀಲರಿಗಾಗಿ ಕಾರ್ಯಕ್ರಮಕ್ಕೆ ಬಂದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ, ಮೇಕೆದಾಟು ಪಾದಯಾತ್ರೆಯ ಮೂಲಕ ಕಾರ್ಯಕರ್ತರಿಗೆ ಅವರಲ್ಲಿ ಉತ್ಸಾಹವನ್ನು ತುಂಬುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹುತೇಕ ಯಶಸ್ವಿಯಾಗಿದ್ದರು. ಆದರೆ, ಐದು ರಾಜ್ಯಗಳ ಸೋಲಿನ ನಂತರ ಮುಖಂಡರಲ್ಲಿ ನಿರುತ್ಸಾಹ ಎದುರಾಗಿದೆ.

ರಾಜ್ಯ ಕಾಂಗ್ರೆಸ್ಸಿನಲ್ಲಿ ರಾಜಕೀಯ ಬಣ

ರಾಜ್ಯ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯಕ್ಕೆ ರಾಹುಲ್ ಗಾಂಧಿ ಪರಿಹಾರವನ್ನು ಸೂಚಿಸಬಹುದು, ಏಕೆಂದರೆ ಪಂಜಾಬ್ ನಲ್ಲಾದಂತೆ ಕರ್ನಾಟಕದಲ್ಲಾಗಬಾರದು ಎಂದು ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿರುವಾಗಲೇ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಒಗ್ಗಟ್ಟಿನ ಮಂತ್ರ ಜಪಿಸಲು ಸೂಚಿಸಬಹುದು.

ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಜೊತೆ ಫೈಟ್ ಮಾಡಬೇಕಾಗಿರುವುದರಿಂದ ರಾಜ್ಯ ನಾಯಕರ ಸಲಹೆಯನ್ನೂ ಪಡೆದುಕೊಳ್ಳಬಹುದು.

ರಾಹುಲ್ ಗಾಂಧಿ ಕರ್ನಾಟಕ ಭೇಟಿ

ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಜಕೀಯವನ್ನು ಪ್ರಾರಂಭಿಸಿದೆ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.Rahul Gandhi

ತಮ್ಮ ಸೂಕ್ಷ್ಮ ವಿಚಾರಗಳಾಗಿರುವುದರಿಂದ ಎಚ್ಚರದಿಂದ ಹೆಜ್ಜೆಯನ್ನು ಇಡಬೇಕು ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ತಮ್ಮ ಪಕ್ಷದ ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಬಸವಳೆದಿರುವ ಕಾಂಗ್ರೆಸ್ಸಿಗೆ ಸದ್ಯ ಇರುವ ಮತ್ತೊಂದು ನಿರೀಕ್ಷೆಯ ರಾಜ್ಯವೆಂದರೆ ಅದು ಕೇವಲ ಕರ್ನಾಟಕ. ಹಾಗಾಗಿ, Rahul Gandi’s Visit ಬಹಳ ಮಹತ್ವನ್ನು ಪಡೆದುಕೊಂಡಿದೆ.

ಪ್ರಧಾನಿ ಮೋದಿ & ಅಮಿತ್ ಶಾಹ್ ಮುಂದಿನ ವಾರ ರಾಜ್ಯಕ್ಕೆ ಭೇಟಿ!

https://jcs.skillindiajobs.com/

Social Share

Leave a Reply

Your email address will not be published. Required fields are marked *