ಸಂತೋಷದಲ್ಲಿ ಜಡೇಜಾ ಮಾಡಿದ್ದೇನು ಗೊತ್ತಾ!

Ravindra Jadeja Pushpa Style

ರವೀಂದ್ರ ಜಡೇಜಾ

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 62 ರನ್ ಗಳ ಜಯ ಸಾಧಿಸಿತು.

ತನ್ನ ಈ ಭರ್ಜರಿ ಗೆಲುವಿನ ಓಟವನ್ನು ಮುಂದುವರೆಸಲು ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅವರು ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ.

ಕೊನೆಯ ಹಂತದಲ್ಲಿ ಶ್ರೇಯಸ್ ಅಯ್ಯರ್ ಮೈಚಳಿ ಬಿಟ್ಟು ಆಡಿ ತಂಡದ ಮೊತ್ತವನ್ನು 200ರ ಅಂಚಿಗೆ ತಂದುಕೊಟ್ಟು ಎದುರಾಳಿಗೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದರು.

ಈ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಶ್ರೀಲಂಕಾ ಭಾರತೀಯ ಬೌಲಿಂಗ್ ದಾಳಿಗೆ ಆಶ್ಚರ್ಯವಾಗಿದೆ, ಈ ಪಂದ್ಯದ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಸಾಕಷ್ಟು ಸಮಯದ ಬಳಿಕ ತಂಡಕ್ಕೆ ಕಾಮ್ ಬ್ಯಾಕ್ ಮಾಡಿದರು.

ಬ್ಯಾಟಿಂಗ್ನಲ್ಲಿ 4 ಎಸೆತಗಳಲ್ಲಿ ಅಜೇಯ 3 ರನ್ ಗಳಿಸಿದರು, ಬೌಲಿಂಗ್ನಲ್ಲಿ 4 ಓವರ್ ಮಾಡಿ 28 ರನ್ ನೀಡಿ 1 ಪ್ರಮುಖ ವಿಕೆಟ್ ತೆಗೆದುಕೊಂಡರು.

ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ದಿನೇಶ್ ಚಂದಿಮಲ್ 10 ರನ್ ಗಳಿಸಿದ್ದಾಗ ಜಡೇಜಾ ಸ್ಪಿನ್ ಜಾದು ಅರಿಯದೆ ಇಶಾನ್ ಕಿಶನ್ರಿಂದ ಸ್ಟ್ಯಾಂಪ್ ಔಟ್ ಗೆ ಬಲಿಯಾದರು.Ravindra Jadeja Pushpa Style

ಹೀಗೆ ಜಡೇಜಾ ತಂಡಕ್ಕೆ ಸೇರಿದ ಮೊದಲ ಪಂದ್ಯದಲ್ಲಿ ವಿಕೆಟ್ ಕಿತ್ತಿದರು.

ಜಡೇಜಾ ಸಂಭ್ರಮ

ವಿಕೆಟ್ ಪಡೆದಾಗ ಇವರು ವಿಶೇಷವಾಗಿ ಸಂತೋಷಪಟ್ಟರು, ಪುಷ್ಪ ಚಿತ್ರದಲ್ಲಿ ತಗ್ಗೆದೆ ಲೇ ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್ ಮಾಡುವ ಆ್ಯಕ್ಷನ್ ರೀತಿಯಲ್ಲೇ ಜಡೇಜಾ ಕೂಡ ಸಂಭ್ರಮಿಸಿ ಮಿಂಚಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಖತ್ ವೈರಲ್ ಆಗುತ್ತಿದೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ದಿ ರೈಸ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.

ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಡೈಲಾಗ್, ಹಾಡುಗಳು ಸಾಕಷ್ಟು ಜನಪ್ರಿಯತೆ ಆಗಿವೆ.

ಇದು ಕ್ರಿಕೆಟ್ ಜಗತ್ತಿನಲ್ಲೂ ಕಾಲಿಟ್ಟು ಸದ್ದು ಮಾಡುತ್ತಿದೆ, ಈ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು.

ಅಲ್ಲು ಅರ್ಜುನ್ ಈ ಹಾಡಿನಲ್ಲಿ ಮಾಡಿದ ಸ್ಟೆಪ್ ಅನ್ನು ಅವರು ಕೂಡಾ ಮಾಡಿದ್ದರು, ಈ ಹಿಂದೆ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲೂ ಪುಷ್ಪ ಟ್ರೆಂಡ್ ಆಗಿತ್ತು.

ಜಡೇಜಾ ಅವರು ಅಲ್ಲು ಅರ್ಜುನ್ ರೀತಿಯೇ ಗಡ್ಡಧಾರಿಯಾಗಿ ಈ ಹಿಂದೆ ವಿಡಿಯೋ ಮಾಡಿ ಹವಾ ಸೃಷ್ಟಿ ಮಾಡಿದ್ದರು.

ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಇಶಾನ್ ಕಿಶನ್ (89 ರನ್) ಹಾಗೂ ಶ್ರೇಯಸ್ ಅಯ್ಯರ್ (57*) ಆಟ ಆಡಿದರು.Ravindra Jadeja Pushpa Style

ಇವರ ಸ್ಫೋಟಕ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 199 ರನ್ ಪ್ರೇರೇಪಿಸಿತು.

ಬದಲಾಗಿ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವ ಲಕ್ಷಣವನ್ನು ಯಾವುದೇ ಹಂತದಲ್ಲೂ ತೋರದ ಶ್ರೀಲಂಕಾ 6 ವಿಕೆಟ್‌ಗೆ 137 ಕಲೆಹಾಕಲಷ್ಟೇ ಶಕ್ತವಾಯಿತು.

ಪರಿಣಾಮ ಟೀಮ್ ಇಂಡಿಯಾ  62 ರನ್‌ಗಳ ಗೆಲುವು ದಾಖಲೆ ಮಾಡಿತು, ಜೊತೆಗೆ ಭಾರತ ಟಿ20 ಕ್ರಿಕೆಟ್‌ನಲ್ಲಿ ಸತತ 10 ಪಂದ್ಯ ಗೆಲ್ಲುವ ಮೂಲಕ ಹೊಸ ದಾಖಲೆ ಕೂಡ ಬರೆಯಿತು.

ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್, ಖತರ್ನಾಕ್ ಗ್ಯಾಂಗ್ ನ ವಿವರ ಇಲ್ಲಿದೆ ನೋಡಿ.-v ravichandran kidnap

https://www.google.com/search?q=way2plot&oq=w&aqs=chrome.1.69i60j69i59j46i39j69i57j69i60l4.802j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *