ಕುತೂಹಲ ಮೂಡಿಸಿದ ಆರ್​ಸಿಬಿ ಹೊಸ ನಾಯಕ ಯಾರು ಗೊತ್ತೇ!

RCB New Captain 2022

ಆರ್​​ಸಿಬಿ ತಂಡ

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ, ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 ಫೀವರ್ ಹೆಚ್ಚಾಗಿದೆ.

ಭಾನುವಾರವಷ್ಟೆ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದೆ, ಇದರ ಪ್ರಕಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿಯ ಸಮರ ಆಗಲಿದೆ.

65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಪಂದ್ಯಗಳನ್ನು ಆಟ ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಪ್ರಾರಂಭ ಮಾಡಲಿದೆ.rcb new captain 2022

ಆದರೆ, ಆರ್​ಸಿಬಿ ತಂಡದ ನಾಯಕ ಯಾರು ಎಂಬುದು ಇನ್ನೂ ಬಹಿರಂಗ  ಪಡಿಸಿಲ್ಲ, ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆವಿದೆ.

ಆರ್​​ಸಿಬಿ ತಂಡದ ಹೊಸ ನಾಯಕ

ಹೌದು, ಆರ್​​ಸಿಬಿ ತಂಡದ ನೂತನ ಸಾರಥಿಯ ಹೆಸರು ಇವತ್ತು ಘೋಷಣೆ ಆಗಲಿದೆ ಎಂದು ಖಾಸಗಿ ವೆಬ್​ಸೈಟ್​ವೊಂದು ವರದಿ ಮಾಡಿದೆ.

ಈಗಾಗಲೇ ಎಲ್ಲಾ 9 ತಂಡಗಳ ನಾಯಕ ಯಾರು ಎಂಬುದು ತಿಳಿದಿದೆ. ಆದರೆ, ಆರ್​​ಸಿಬಿ ಮಾತ್ರ ಹೆಸರು ಪ್ರಕಟಿಸಲು ದಿನವನ್ನು ಮುಂದೂಡುತ್ತಲೇ ಬರುತ್ತಿದೆ.rcb captain

ಆದರೀಗ ಇದಕ್ಕೆ ಸೂಕ್ತ ಸಮಯ ಬಂದಿದ್ದು ಸೋಮವಾರದಂದು ಆರ್​ಸಿಬಿ ಹೊಸ ನಾಯಕ ಹೆಸರು ಘೋಷಣೆ ಆಗಲಿದೆಯಂತೆ.

ವರದಿಯ ಪ್ರಕಾರ ಶಾಕಿಂಗ್ ಎಂಬಂತೆ ಆರ್​ಸಿಬಿ ತಂಡದ ಹೊಸ ನಾಯಕನಾಗಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ.

ಇವರ ಹೆಸರನ್ನು ಘೋಷಣೆ ಮಾಡಲು ಮಾತ್ರ ಫ್ರಾಂಚೈಸಿ ಬಾಕಿ ಉಳಿದಿದೆ ಎನ್ನಲಾಗುತ್ತದೆ.

ಪ್ರಮುಖವಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್ ಅವರುಗಳ ಹೆಸರು ಮಂಚೂಣಿಯಲ್ಲಿ ಕೇಳಿ ಬಂದಿತ್ತು,  ಕಾರ್ತಿಕ್ ನಾಯಕ ಆಗ್ತಾರೆ ಎಂದು ಯಾರು ಊಹಿಸಿರಲಿಲ್ಲ.rcb new captain

ಯಾಕಂದ್ರೆ ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ಕಾರ್ತಿಕ್ ನಾಯಕನಾಗಿ ಸತತ ಸೋಲಿನ ಅಂಚಿನಲ್ಲಿದ್ದರು, ಆದರೆ ಇದೀಗ ಶಾಕಿಂಗ್ ಎಂಬಂತೆ ಆರ್​ಸಿಬಿ ನೂತನ ನಾಯಕ ದಿನೇಶ್ ಕಾರ್ತಿಕ್ ಆಗಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

ಐಪಿಎಲ್ 2022 ಮೆಗಾ ಹರಾಜಿನಲ್ಲಿ ಕಾರ್ತಿಕ್ ಅವರನ್ನು ಆರ್​​ಸಿಬಿ ಫ್ರಾಂಚೈಸಿ 5.50 ಕೋಟಿ ಕೊಟ್ಟು ಖರೀದಿ ಮಾಡಿದೆ.

ಐಪಿಎಲ್ ಆರಂಭವಾದ 2008 ರಿಂದಲೂ ಕಾರ್ತಿಕ್ ಈ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ, 2008 ರಿಂದ 10ರ ವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಆಟ ಆಡಿದ್ದಾರೆ.RCB New Captain 2022

2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, 2012 ಮತ್ತು 2013 ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದರು, ನಂತರ 2014 ರಲ್ಲಿ ಇವರನ್ನು ಡೆಲ್ಲಿ ಮತ್ತೆ ಖರೀದಿ ಮಾಡಿದೆ.new captain rcb

2015 ರಲ್ಲಿ ಆರ್​ಸಿಬಿ ಪರ ಕೂಡ ಕಣಕ್ಕಿಳಿದಿದ್ದರು, 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ಪರ ಆಟ ಆಡಿದ್ದರು.

2018 ರಲ್ಲಿ ಕೋಲ್ಕತ್ತಾ ಸೇರಿದ್ದ ಇವರು 2021ರ ವರೆಗೆ ತನ್ನಲ್ಲೇ ಉಳಿಸಿಕೊಂಡಿತ್ತು, ಕಳೆದ ಐಪಿಎಲ್ 2021 ರಲ್ಲಿ ಕಾರ್ತಿಕ್ ಆಡಿದ 17 ಪಂದ್ಯಗಳಲ್ಲಿ 223 ರನ್ ಗಳಿಸಿದ್ದಾರೆ.

ಒಟ್ಟಾರೆಯಾಗಿ ಇವರು 213 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 19 ಅರ್ಧಶತಕ ಬಾರಿಸಿ 4046 ರನ್ ಕಲೆ ಹಾಕಿದ್ದಾರೆ.

ದಿನೇಶ್ ಕಾರ್ತಿಕ್​ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅಪಾರ ಅನುಭವವಿದೆ, ಇತ್ತ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್​ವೆಲ್ ಅವರಿಗೂ ನಾಯಕನಾಗುವ ಅರ್ಹತೆ ಇದೆ.who is rcb new captain 2022

ಆದರೆ, ಇವರು ಐಪಿಎಲ್ 2022 ಆರಂಭದ ಕೆಲವು ಪಂದ್ಯಗಳಿಗೆ ಇವರು ಅಲಭ್ಯರಾಗಿದ್ದಾರೆ, ಮ್ಯಾಕ್ಸ್​ವೆಲ್ ಅವರ ವಿವಾಹ ಕಾರ್ಯ ಇರುವ ಕಾರಣ ಇವರು ಏಪ್ರಿಲ್ 6ರ ನಂತರವಷ್ಟೆ ಆರ್​ಸಿಬಿ ತಂಡ ಸೇರಿಕೊಳ್ಳುತ್ತಾರೆ.

ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ನಾಯಕತ್ವದ ಜವಾಬ್ದಾರಿ ದಿನೇಶ್ ಕಾರ್ತಿಕ್ ಅವರಿಗೆ ನೀಡುವುದು ಬಹುತೇಕವಾಗಿ ಖಚಿತವಾಗಿದೆ.

ಆದರೆ, ಅಧಿಕೃತವಾಗಿ ಹೇಳಿಕೆ ಇನ್ನಷ್ಟೆ ಹೊರ ಬೀಳಬೇಕಿದೆ.RCB New Captain 2022

ರಾಜ್ಯ ಬಜೆಟನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಆಧ್ಯತೆ!

https://www.google.com/search?q=way2plot&oq=w&aqs=chrome.1.69i60j69i59l2j69i60l5.1252j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *