
rj rachana death
ಬೆಂಗಳೂರು
‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ಖ್ಯಾತಿಯ ರೇಡಿಯೋ ಜಾಕಿ ರಚನಾ ಮೃತ ಪಟ್ಟಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು, ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ರಚನಾ ಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ರೇಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದರು.
ತಮ್ಮ ಮಾತು, ಧ್ವನಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು, ಜೆಪಿ ನಗರದ ಪ್ಲಾಟ್ನಲ್ಲಿ ರಚನಾಗೆ ಎದೆ ನೋವು ಬಂದಿತ್ತು.
ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ಮೃತ ಪಟ್ಟಿದ್ದು ಕಳೆದ ಮೂರು ವರ್ಷಗಳಿಂದ ರಚನಾ ಅವರು ಅರ್ಜೆ ಕೆಲಸ ಬಿಟ್ಟಿದ್ದರು.rj rachana death
ರಚನಾ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದು, ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತ್ತಿರುವುದಾಗಿ ಸ್ನೇಹಿತರು ಮಾಹಿತಿ ನೀಡಿದ್ದಾರೆ.
ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಸ್ನೇಹಿತರು ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಮಾತಿನ ಮಲ್ಲಿ ಎಂದೇ ಕರೆಸಿಕೊಳ್ಳುವ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನಸುಗಳನ್ನು ಗೆದ್ದಿದ್ದರು.
ರಚನಾ ನಿಧನ
ಕನ್ನಡ ಮಾಧ್ಯಮದ ಪ್ರಕಾರ ಬೆಂಗಳೂರಿನ ಜನಪ್ರಿಯ ಆರ್‌ಜೆ ರಚನಾ ಹೃದಯಾಘಾತದಿಂದ ಮಂಗಳವಾರ ನಿಧನರಾದರು.
ಜೆಪಿ ನಗರದಲ್ಲಿರುವ ತನ್ನ ಫ್ಲಾಟ್‌ನಲ್ಲಿ ರಚನಾ ಎದೆನೋವು ಎಂದು ನೋವು ಅನುಭವಿಸವಾಗ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಅವರು ಮೃತ ಪಟ್ಟಿದ್ದಾರೆ.rj rachana death
RJ ರಚನಾ ಜನಪ್ರಿಯ ರೇಡಿಯೋ ಜಾಕಿ ಆಗಿದ್ದು, ಕಳೆದ ದಶಕದಲ್ಲಿ ಬೆಂಗಳೂರು ಜನರ ಮನೆಮಾತಾಗಿದ್ದರು.
ತನ್ನ ವಿಶಿಷ್ಟ ಹಾಸ್ಯ ಪ್ರಜ್ಞೆಯೊಂದಿಗೆ ತನ್ನ ವಾಕ್ಚಾತುರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಬಳಿಕ ರೆಡಿಯೋ ಜಾಕಿ ವೃತ್ತಿಗೆ ವಿದಾಯ ಕೋರಿದ್ದ ಅವರು ಮನೆಯಲ್ಲೇ ಇದ್ದರು ಎಂದು ಹೇಳಲಾಗುತ್ತದೆ.
ಆದರೆ ಫಿಟ್ ಆಂಡ್ ಫೈನ್ ಆಗಿದ್ದ ರಚನಾ ಹೃದಯಾಘಾತಕ್ಕೆ ಬಲಿಯಾಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.
ರಚನಾ ಧ್ವನಿ ಮತ್ತು ಮಾತಿನ ಮೋಡಿಗೆ ಒಳಗಾದವರು ಅದೆಷ್ಟೋ ಜನರು. ಅದಕ್ಕಾಗಿಯೇ ರೆಡಿಯೋ ಮಿರ್ಚಿ ಕೇಳುತ್ತಿದ್ದವರು ಅನೇಕರಿದ್ದಾರೆ.
ಸದಾ ನಗು ನಗುತ್ತಲೇ ಸಂತೋಷದಲ್ಲಿ ಇರುತ್ತಿದ್ದ ರಚನಾಗೆ ಸಾಕಷ್ಟು ಸ್ನೇಹಿತರೂ ಇದ್ದರು.
ಆರ್‌ಜೆ ರಚನಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು, ತಮ್ಮ ಮಾತಿನ ಮೂಲಕ ಅವರು ಕೇಳುಗರನ್ನು ಸಂತೋಷ ಪಡಿಸುತ್ತಿದ್ದರು.rj rachana death
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದಲ್ಲೂ ಆರ್ಜೆಯಾಗಿ ಕಾಣಿಸಿಕೊಂಡಿದ್ದ ರಚನಾ ತಮ್ಮ ಸಂಭಾಷಣೆಯ ಮೂಲಕ ಗಮನ ಸೆಳೆದಿದ್ದರು.
ಚಿತ್ರದಲ್ಲಿ ಅವರ ಪಾತ್ರಕ್ಕೂ ದೊಡ್ಡ ಪ್ರಾಮುಖ್ಯತೆ ಇತ್ತು. ಅದನ್ನು ಸಮರ್ಥವಾಗಿ ಅವರು ನಿಭಾಯಿಸಿ, ಮೆಚ್ಚುಗೆ ಪಡೆದಿದ್ದರು.
ಹೀಗೆ ಆರ್ಜೆಯಾಗಿ ಗುರುತಿಸಿಕೊಂಡಿದ್ದ ರಚನಾ ಅವರು ಕಳೆದ ಮೂರು ವರ್ಷಗಳಿಂದ ಕೆಲಸವನ್ನು ಬಿಟ್ಟಿದ್ದರು.
“ನನ್ನ ಸಿನಿಮಾಗಳನ್ನು ನಾನೇ ನೋಡಿಲ್ಲ”ಶಾಕಿಂಗ್ ಹೇಳಿಕೆ ಕೊಟ್ಟ ಶಾರುಖ್!