RRR Boycott
ರೌದ್ರಂ ರಣಂ ರುಧಿರಂ (RRR)
ಭಾರತದ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಚಿತ್ರ ರಿಲೀಸ್‌ಗೆ ಕ್ಷಣಗಣನೆ ಪ್ರಾರಂಭಿಸಿದ್ದು, ಇನ್ನೊಂದು ದಿನ ಕಳೆದರೆ ‘ಆರ್‌ಆರ್‌ಆರ್’ ಚಿತ್ರಮಂದಿರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್ 25ಕ್ಕೆ ‘ಆರ್‌ಆರ್‌ಆರ್’ ಚಿತ್ರವು ರಿಲೀಸ್ ಆಗುತ್ತಿದೆ.RRR Boycott
ಈ ಚಿತ್ರವೂ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಾಗಾಗಿ ಕನ್ನಡದಲ್ಲಿ ಸಿನಿಮಾ ಡಬ್ ಆಗಿ ಬಿಡುಗಡೆ ಆಗುತ್ತಿದೆ. ದೇಶಾದ್ಯಂತ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.RRR
ಕನ್ನಡದಲ್ಲೂ ಕೂಡ ತೆರೆಗೆ ಬರುತ್ತಿದೆ ಎನ್ನುವುದು ಕನ್ನಡಿಗರಿಗೆ ಖುಷಿಯ ವಿಚಾರವಾಗಿತ್ತು, ಕನ್ನಡ ಭಾಷೆಯಲ್ಲೇ ‘RRR’ ಚಿತ್ರವನ್ನು ನೋಡಬಹುದಲ್ಲಾ ಎಂದು ಕನ್ನಡಿಗರು ಸಂತಸಗೊಂಡಿದ್ದರು, ಆದರೆ ಇವಾಗ ಕನ್ನಡಿಗರು ‘ಆರ್‌ಆರ್‌ಆರ್’ ಚಿತ್ರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ತಂಡವು ಪ್ರಸ್ತುತ ಪ್ರಚಾರಕ್ಕಾಗಿ ಪ್ರವಾಸದಲ್ಲಿದೆ, ಬೆಂಗಳೂರು, ಹೈದರಾಬಾದ್, ದುಬೈ, ಬರೋಡಾ, ದೆಹಲಿ, ಜೈಪುರ, ಅಮೃತಸರ ಹಾಗೂ ಕೋಲ್ಕತ್ತಾ ಮತ್ತು ವಾರಣಾಸಿಯಾದ್ಯಂತ ಪ್ರಯಾಣಿಸಲು ಸ್ಟಾರ್‌ಗಳು ಯೋಜಿಸಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಚಿತ್ರವೂ ಇತ್ತೀಚೆಗೆ ಮುಖ್ಯಾಂಶಗಳನ್ನು ಹೊಡೆಯುತ್ತಿದೆ.
ಚಿತ್ರವು 25ನೇ ಮಾರ್ಚ್ 2022 ರಂದು ಥಿಯೇಟರ್‌ಗೆ ಅಪ್ಪಳಿಸಲಿದೆ ಇದೀಗ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗದಿರುವ ಬಗ್ಗೆ ಕರ್ನಾಟಕದ ಅಭಿಮಾನಿಗಳು ಟ್ವಿಟರ್‌ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ, #BoycottRRRinKarnataka ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಹೆಸರಲ್ಲಿ, ಸಿನಿಮಾ ತಂಡ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ, ಹಾಗಾಗಿ ಕರ್ನಾಟಕದಲ್ಲಿ ಬಾಯ್‌ಕಾಟ್ ‘ಆರ್‌ಆರ್‌ಆರ್’ ಎಂದು ಅಭಿಯಾನ ಪ್ರಾರಂಭ ಮಾಡಿದ್ದಾರೆ.Ban RRR
ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ಚಿತ್ರವು ರಿಲೀಸ್ ಬೇಡ ಎಂದು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಅದ್ಯಾಕೆ ಎನ್ನುವುದನ್ನು ಮುಂದೆ ಓದಿ…
ಕರುನಾಡಲ್ಲಿ ‘ಬಾಯ್‌ಕಾಟ್ RRR’!
‘ಆರ್‌ಆರ್‌ಆರ್’ ಚಿತ್ರದ ರಿಲೀಸ್ ಹತ್ತಿರವಾಗುತ್ತಿದೆ, ಇದೇ ಬೆನ್ನಲ್ಲಿ ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ಸಿಕ್ಕಾಪಟ್ಟೆ ಜೋರಾಗಿ ಸದ್ದು ಮಾಡುತ್ತಿದೆ, ಅದಕ್ಕೆ ಕಾರಣ ಚಿತ್ರವು ರಿಲೀಸ್ ಅಲ್ಲ.Karnataka
ಕರ್ನಾಟಕದಲ್ಲಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ ಎನ್ನುವುದು ಹಲವು ಕನ್ನಡ ಪರ ಸಂಘಟನೆಗಳು, ಕನ್ನಡಿಗರು ‘ಆರ್‌ಆರ್‌ಆರ್’ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ‘ಬಾಯ್‌ಕಾಟ್ ಆರ್‌ಆರ್‌ಆರ್’ ಬಹಳ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಕರೆದೊಯ್ದರು ಹಾಗೆಯೇ #BoycottRRRinKarnataka ಪ್ರವೃತ್ತಿಯೊಂದಿಗೆ ಸಿಂಕ್‌ನಲ್ಲಿ ಟ್ವೀಟ್ ಮಾಡಿದ್ದಾರೆ.Jr Ntr
ಚಿತ್ರ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗದೇ ಇರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.Boycott in Karnataka
ಟ್ವಿಟ್ಟರ್‌ಗಳಲ್ಲಿ ಒಬ್ಬರು ಟಿಕೆಟ್ ಬುಕಿಂಗ್ ಸೈಟ್‌ನ ಸ್ಕ್ರೀನ್‌ಗ್ರಾಬ್ ಅನ್ನು ಹಂಚಿಕೊಂಡಿದ್ದು, ಅದು ಪ್ರದರ್ಶನವು ಹಿಂದಿ ಮತ್ತು ತಮಿಳಿನಲ್ಲಿ ಮಾತ್ರ ಲಭ್ಯವಿದೆ ಎಂದು ತೋರಿಸುತ್ತದೆ.boycott
ಆದರೆ ಈ ಸ್ಕ್ರೀನ್‌ಗ್ರಾಬ್ ಜೊತೆಗೆ ಅವರು, “ಕನ್ನಡವನ್ನು ಹೊರತುಪಡಿಸಿ ಉಳಿದೆಲ್ಲ ಭಾಷೆಗಳಲ್ಲಿ ಟಿಕೆಟ್‌ಗಳನ್ನು ಬಿಡುಗಡೆ ಮಾಡುವ ಧೈರ್ಯವಿದ್ದರೆ ನಿಮ್ಮ ಚಲನಚಿತ್ರವನ್ನು ಕರ್ನಾಟಕದಲ್ಲಿ ಪ್ರೋತ್ಸಾಹಿಸಲಾಗುವುದಿಲ್ಲ.#BoycottRRRinKarnataka @ssrajamouli.” ಬರೆದಿದ್ದಾರೆ.Boycott RRR
‘RRR’ ಕನ್ನಡ ಅವತರಣಿಗೆ ರಿಲೀಸ್ ಇಲ್ಲ!
‘RRR’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿದೆ, ಆದರೆ ಈ ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ. ವಿಪರ್ಯಾಸ ಎಂದರೆ ಕನ್ನಡ ಅವತರಣಿಕೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ.Ban
ಅದರಲ್ಲೂ ಕರ್ನಾಟಕದಲ್ಲಿ ಯಾವುದೇ ಶೋಗಳು ಕೂಡ ಇಲ್ಲ, ಕನ್ನಡ ಅವತರಣಿಕೆಯಲ್ಲಿ ‘ಆರ್‌ಆರ್‌ಆರ್’ ಚಿತ್ರದ ಟಿಕೆಟ್ ಬುಕ್ ಮಾಡಲು ಹೋದವರಿಗೆ ಕನ್ನಡದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ.Ram Charan
ಕರ್ನಾಟಕದಲ್ಲಿ ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ನೋಡಬಹುದಾಗಿದೆ, ಆದರೆ ಕನ್ನಡದಲ್ಲಿ ಸಿನಿಮಾ ನೋಡಲು ಅವಕಾಶ ಇಲ್ಲದಂತಾಗಿದೆ.SS Rajamouli
ಪ್ಯಾನ್ ಇಂಡಿಯಾ ಹೆಸರಲ್ಲಿ ‘RRR’ ಮೋಸ!
ಇದೇ ಕಾರಣಕ್ಕೆ ಕನ್ನಡಿಗರು ‘ಆರ್‌ಆರ್‌ಆರ್’ ಚಿತ್ರದ ವಿರುದ್ಧ ಗರಂ ಆಗಿದ್ದು, ಪ್ಯಾನ್ ಇಂಡಿಯಾ ಹೆಸರಲ್ಲಿ ಕನ್ನಡಿಗರಿಗೆ ಮಾತ್ರ ಚಿತ್ರತಂಡ ಮಹಾ ಮೋಸ ಮಾಡುತ್ತಿದೆ ಎಂದು ಗುಡುಗುತ್ತಿದ್ದಾರೆ.
ಹಾಗಾಗಿ ಕರ್ನಾಟಕದಲ್ಲಿ ‘ಬಾಯ್‌ಕಾಟ್ ಆರ್‌ಆರ್‌ಆರ್’ ಅಭಿಯಾನ ಶುರುವಾಗಿದೆ, ಸಾಕಷ್ಟು ಕನ್ನಡಿಗರು ಇದಕ್ಕೆ ಬೆಂಬಲ ನೀಡಿ, ಚಿತ್ರತಂಡದ ನಡೆಯನ್ನು ಖಂಡಿಸುತ್ತಿದ್ದಾರೆ.
ಇವಾಗಲಾದರೂ ಸಿನಿಮಾ ತಂಡ ಎಚ್ಚೆತ್ತುಕೊಂಡು, ಕನ್ನಡ ಅವತರಣಿಕೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡುತ್ತಾ ನೋಡಬೇಕು.