ಶ್ರೀಶಾಂತ್ ಮತ್ತೆ ಭರ್ಜರಿ ಕಂಬ್ಯಾಕ್!

s shreeshant comeback

ಎಸ್. ಶ್ರೀಶಾಂತ್

ಐಪಿಎಲ್  ಹರಾಜಿನಲ್ಲಿ ಹರಾಜ್ ಆಗದೆ ಇದ್ದ ಕೇರಳದ ವೇಗಿ ಎಸ್. ಶ್ರೀಶಾಂತ್ ರಣಜಿ ಕ್ರಿಕೆಟ್ನಲ್ಲಿ ಕೇರಳ ಕಡೆ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ.

ಒಂಬತ್ತು ವರ್ಷಗಳ ನಂತರ ರಣಜಿ ಕ್ರಿಕೆಟ್ ಟೂರ್ನಿಗೆ ಮತ್ತೆ ಬಂದ ಶ್ರೀಶಾಂತ್ ಎರಡು ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದ್ದಾರೆ.

ಮೇಘಾಲಯ ವಿರುದ್ಧದ ಎಲೈಟ್ ಗುಂಪಿನ ಆಟದಲ್ಲಿ ಕೇರಳ ಪರ ಕಣಕ್ಕಿಳಿದಿದ್ದ ಶ್ರೀಶಾಂತ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಗಮನಸೆಳೆದಿದ್ದಾರೆ.s shreeshant comeback

ಟಾಸ್ ಗೆದ್ದ ಕೇರಳ ನಾಯಕ ಸಚಿನ್ ಬೇಬಿ ಬೌಲಿಂಗ್ ಪ್ರಥಮವಾಗಿ ಆಯ್ಕೆ ಮಾಡಿಕೊಂಡರು.

ಮೇಘಾಲಯ ತಂಡದ ನಾಯಕ ಪುನೀತ್ ಬಿಶ್ತ್ (93) ಅವರನ್ನು ಹೊರತುಪಡಿಸಿ ಕೇರಳದ ಬೌಲಿಂಗ್ ದಾಳಿಯ ವಿರುದ್ಧ ಮೇಘಾಲಯದ ಯಾರೊಬ್ಬ ಬ್ಯಾಟ್ಸ್ಮನ್ ಕೂಡ ನಿಲ್ಲಲು ಸಾಧ್ಯವಾಗಲಿಲ್ಲ.

ಮೇಘಾಲಯ ಮೊದಲ ದಿನ ಕೇವಲ 148 ರನ್ಗಳಿಗೆ ಆಲೌಟ್ ಆಗಿತ್ತು, ಆರಂಭಿಕರಾದ ಕಿಶನ್ ಲಿಂಡೋ (26) ಮತ್ತು ಚಿರಾಗ್ ಖುರಾನಾ (15) ಎರಡಂಕಿ ಗಳಿಸಿದ ಬೇರೆ  ಬ್ಯಾಟ್ಸ್ಮನ್ಗಳಾಗಿದ್ದಾರೆ.s shreeshant comeback

ಇದಕ್ಕೆ ಉತ್ತರವಾಗಿ ಕೇರಳ ಉತ್ತಮ ಆರಂಭ ಪಡೆದಿದೆ, ಕೇರಳ ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 205 ರನ್ ಗಳಿದೆ.

ಕೇರಳ ಈಗ 57 ರನ್ಗಲ್ಲು  ಸಾಧಿಸಿದೆ, ರೋಹನ್ ಕುನ್ನುಮ್ಮಲ್ (107) ಶತಕ ಬಾರಿಸಿ ಕೇರಳಕ್ಕೆ ಮುನ್ನಡೆ ತಂದುಕೊಟ್ಟರು.

ಈತ 97 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು, ಪಿ ರಾಹುಲ್ ಅಜೇಯ 91 ಮತ್ತು ಜಲಜ್ ಸಕ್ಸೇನಾ ಅಜೇಯವಾಗಿ (4) ಕ್ರೀಸ್ನಲ್ಲಿದ್ದರು.

ಈ ಮೂಲಕ ಕೇರಳ ಮೊದಲ ದಿನವೇ 57 ರನ್ಗಳ ಮುನ್ನಡೆಯನ್ನು ಸಾಧಿಸಿದೆ.

2 ವಿಕೆಟ್ ಪಡೆದ ಶ್ರೀಶಾಂತ್

ಶ್ರೀಶಾಂತ್ 11.4 ಓವರ್ಗಳಲ್ಲಿ ಎರಡು ಮೇಡನ್ ಸೇರಿದಂತೆ ಕೇವಲ 40 ರನ್ ನೀಡಿ ಎರಡು ವಿಕೆಟ್ ಪಡೆದುಕೊಂಡರು.

ಅವರು ಬೌಲಿಂಗ್ನಲ್ಲಿ 3.40 ರ ಉತ್ತಮ ಎಕಾನಮಿ ದರವನ್ನು ಕಾಯ್ದುಕೊಂಡಿದ್ದು, ಮೇಘಾಲಯ ವಿರುದ್ಧ ಶ್ರೀಶಾಂತ್ ಕೊನೆಯ ಎರಡು ವಿಕೆಟ್ ಪಡೆದರು.s shreeshant comeback

ಆರ್ಯನ್ ಬೋರಾ ಅವರ ವಿಕೆಟ್ ಪಡೆದ ನಂತರ ಶ್ರೀಶಾಂತ್ ಮುಂದಿನ ಎಸೆತದಲ್ಲಿ ಚೆಂಗಮ್ ಸಂಗ್ಮಾ ಅವರನ್ನ ಗೋಲ್ಡನ್ ಡಕೌಟ್ ಮಾಡಿದ್ದಾರೆ.

ಬಿಸಿಸಿಐ ವಿರುದ್ಧ ಜಯ

ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡರು ಸಹ ಬಿಸಿಸಿಐ ಶ್ರೀಶಾಂತ್ ಅವರ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿತು.

ವರ್ಷಗಳ ಕಾನೂನು ಹೋರಾಟದ ನಂತರ ಅವರು ಕೊನೆಯದಾಗಿ ಪ್ರಕರಣವನ್ನು ಜಯ ಗಳಿಸಿದರು.

ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ ಶ್ರೀ ಪ್ರಥಮ ದರ್ಜೆ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದರು.

ಅವರನ್ನು ಕೇರಳ ತಂಡಕ್ಕೆ ಸೇರಿಸಲಾಗಿತ್ತು, ಆದರೆ ಕೋವಿಡ್ 19 ನೇ ಮಹಾಮಾರಿಯಿಂದಾಗಿ ರಣಜಿ ಟ್ರೋಫಿಯನ್ನು ಕೈಬಿಟ್ಟ ನಂತರ ಅವರ ವಾಪಸಾತಿ ವಿಳಂಬವಾಯಿತು.s shreeshant comeback

 ಶ್ರೀಶಾಂತ್ ಮೂಲ ಬೆಲೆ

ಭಾರೀ ನಿರೀಕ್ಷೆಯೊಂದಿಗೆ ಐಪಿಎಲ್ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು, ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು.

ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗು ಗುಜರಾತ್ ಟೈಟಾನ್ಸ್ ಐಪಿಎಲ್ಗೆ ಸೇರಿಕೊಂಡಿದ್ದರಿಂದ ತಮಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಶ್ರೀಶಾಂತ್ ಭರವಸೆ ನೀಡಿದರು.

ಎರಡು ದಿನ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಅವರ ಹೆಸರು ಕೂಡ ಪ್ರಸ್ತಾಪ ಬಂದಿಲ್ಲ.

ಹರಾಜುದಾರ ಖರೀದಿಸಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಒದಗಿಸಲು ಸಂಪೂರ್ಣ ಫ್ರಾಂಚೈಸಿಯನ್ನು ಕೇಳಿದರು.

ಇದರ ಪ್ರಕಾರ 10 ತಂಡಗಳು ನೀಡಿರುವ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಸ್ಥಾನ ಪಡೆದಿಲ್ಲ, ಹೀಗಾಗಿ ಅವರ ಹೆಸರು ಹರಾಜಿನಲ್ಲಿ ಬಂದಿಲ್ಲ.

ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ ಪಡೆದ ಖಿಲಾಡಿ!-

https://www.google.com/search?q=way2plot&oq=w&aqs=chrome.1.69i60j69i59j69i57j35i39j69i60l4.4967j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *