ಕೊಹ್ಲಿ ಗಿಫ್ಟ್ ಗೆ ಭಾವುಕರಾದ ಸಚಿನ್ ತೆಂಡೂಲ್ಕರ್!-sachin tendulkar

sachin tendulkar emotional

ಐಸಿಸಿ ಏಕದಿನ ವಿಶ್ವಕಪ್

ಅಂದು 2011 ಐಸಿಸಿ ಏಕದಿನ ವಿಶ್ವಕಪ್ ಭಾರತ ಜಯಗಳಿಸಿದಾಗ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಹೆಗಲು ಮೇಲೆ ಹೊತ್ತು ಮೈದಾನದಲ್ಲಿ ಸುತ್ತು ಹಾಕಿದ್ದನ್ನು ಯಾವೊಬ್ಬ ಕ್ರಿಕೆಟ್ ಅಭಿಮಾನಿ ಮರೆಯಲು ಸಾಧ್ಯವಿಲ್ಲ.

ಅದು ವಿರಾಟ್ ಕೊಹ್ಲಿ ಅವರಿಗೆ ಮೊದಲ ವಿಶ್ವಕಪ್ ಆಗಿದ್ದರೆ, ಸಚಿನ್ ತೆಂಡೂಲ್ಕರ್​ ಅವರಿಗೆ ಕೊನೇ ವಿಶ್ವಕಪ್ ಆಗಿತ್ತು.

ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಯಂಗ್ ಸ್ಟಾರ್ಸ್ ತಮ್ಮ ಆರಾಧ್ಯ ದೈವ ಸಚಿನ್ ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಎತ್ತಿಕೊಂಡು ಸುತ್ತಾಡಿ ಸಂತೋಷ ಪಟ್ಟರು. sachin tendulkar emotional

ಅದೊಂದು ಭಾವನಾತ್ಮಕ ಸಂಧರ್ಭವಾಗಿತ್ತು, “ಸಚಿನ್ ಅವರು 23 ವರ್ಷಗಳ ಕಾಲ ರಾಷ್ಟ್ರದ ಭಾರವನ್ನು ಹೊತ್ತಿದ್ದಾರೆ, ಈಗ ನಾವು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತುವ ಸಮಯ ಬಂದಿದೆ,” ಎಂದು ಹೇಳಿದರು.

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿ 9 ವರ್ಷಗಳು ಕಳೆದು ಹೋಗಿವೆ, ವಿರಾಟ್ ಕೊಹ್ಲಿ ಇಂದು ವಿಶ್ವ ಕ್ರಿಕೆಟ್​ನ ಶ್ರೇಷ್ಠ ಬ್ಯಾಟ್ಸ್​ಮನ್ ಆಗಿ ಹೊರಹೊಮ್ಮಿದ್ದಾರೆ. sachin tendulkar emotional

ಇಂದಿಗೂ ಕೂಡಾ ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಪ್ರೆಶ್ನೆ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ, ಈ ಇಬ್ಬರು ದಿಗ್ಗಜ ಆಟಗಾರರಿಗೆ ಒಬ್ಬರ ಮೇಲೆ ಮತ್ತೊಬ್ಬರ ಅಪಾರವಾದ ಗೌರವ ಇಟ್ಟುಕೊಂಡಿದ್ದಾರೆ.

2013 ರಲ್ಲಿ ಮುಂಬೈನಲ್ಲಿ ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯದ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಇಬ್ಬರ ನಡುವೆ ನಡೆದ ಒಂದು ವಿಚಾರವನ್ನು ಇಂದಿಗೂ ಸಚಿನ್ ನೆನೆಪು ಮಾಡಿಕೊಳ್ಳುತ್ತಾರಂತೆ.

ಘಟನೆ

ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿರುವ ಸಚಿನ್, “ನನಗೆ ಆ ಘಟನೆ ಈಗಲೂ ನೆನಪಿದೆ. ನಾನು ಆಗ ಡ್ರೆಸ್ಸಿಂಗ್ ರೂಮ್​ಗೆ ಹೋಗಿದ್ದೆ ಮತ್ತು ಕಣ್ಣಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು.

ಯಾಕಂದ್ರೆ ಅದು ನನ್ನ ಕೊನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು, ಇನ್ನು ನಾನು ಭಾರತ ತಂಡದ ಆಟಗಾರನಾಗಿ ಮೈದಾನಕ್ಕೆ ಇಳಿಯುವುದಿಲ್ಲ ಎಂಬ ಸತ್ಯ ಅರಿತುಕೊಂಡಿದ್ದೆ.

ಒಂದು ಮೂಲೆಯಲ್ಲಿ ಒಂಟಿಯಾಗಿ ಕೂತು ಟವಲ್ ಅನ್ನು ತಲೆಯ ಮೇಲೆ ಹಾಕಿಕೊಂಡು ಕಣ್ಣೀರು ಹಾಕುತ್ತಿದ್ದೆ. ನಾನು ಆಗ ತುಂಬಾ ಭಾವನಾತ್ಮಕ ಮತ್ತು ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.”

“ಈ ಸಮಯದಲ್ಲಿ ಅಲ್ಲಿಗೆ ವಿರಾಟ್ ಕೊಹ್ಲಿ ಬಂದು, ಕೊಹ್ಲಿಗೆ ಅವರ ತಂದೆ ಕೊಟ್ಟಿದ್ದ ಪವಿತ್ರ ದಾರವನ್ನು ನನಗೆ ನೀಡಿದರು.

ನಾನು ಅದನ್ನು ಸ್ವಲ್ಪ ಸಮಯ ಕೈಯಲ್ಲಿ ಹಿಡುದುಕೊಂಡಿದ್ದೆ. ಆದರೆ, ಅದು ಕೊಹ್ಲಿಗೆ ಅತ್ಯಮೂಲ್ಯವಾಗಿದ್ದು ಎಂಬುದು ನನಗೆ ತಿಳಿದಿತ್ತು. sachin tendulkar emotional

ಹೀಗಾಗಿ ಅವರಿಗೆ ಮತ್ತೆ ಅದನ್ನು ಹಿಂತಿರುಗಿಸಿ ಕೊಟ್ಟೆ. ಇದು ನಿನ್ನ ಹತ್ರ ಇರಬೇಕು.

ಇದು ನಿನಗೆ ಸೇರಿದ್ದು ಬೇರೆ ಯಾರಿಗೂ ಅಲ್ಲ. ಇದನ್ನು ನೀನು ನಿನ್ನ ಕೊನೆಯ ಉಸಿರು ಇರುವವರೆಗೆ ಇಟ್ಟುಕೊಳ್ಳಬೇಕು.

ಹೀಗೆ ನಾನು ಕೊಹ್ಲಿಗೆ ಮರಳಿಕೊಟ್ಟೆ. ಅದು ಆವತ್ತು ನಡೆದ ಅತ್ಯಂತ ಭಾವನಾತ್ಮಕ ಘಟನೆ ಆಗಿತ್ತು,” ಎಂದು ಸಚಿನ್ ಹೇಳಿಕೊಂಡಿದ್ದಾರೆ.

ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ ಪಡೆದ ಖಿಲಾಡಿ!-

https://www.google.com/search?q=way2plot&oq=wa&aqs=chrome.1.69i60j69i59j69i57j35i39j46i67j69i60l3.1537j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *