
Salman Khan Marriage
ಸಲ್ಮಾನ್ ಖಾನ್
ಸದ್ಯಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಎಂದರೆ ಸಲ್ಮಾನ್ ಖಾನ್ ಮದುವೆ ಸುದ್ದಿ.
ಬಾಲಿವುಡ್‌ನ ಅಂಗಳದಲ್ಲಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂತಲೇ ಸಲ್ಮಾನ್ ಖಾನ್ ಅವರನ್ನು ಕರೆಯಲಾಗುತ್ತದೆ.
ಹಾಗಾಗಿ ಸಲ್ಲು ಜೊತೆಗೆ ಯಾರ ಹೆಸರು ಕೇಳಿ ಬಂದರೂ ಕೂಡ, ಎಲ್ಲರ ಚಿತ್ತ ಸಲ್ಲು ಲವ್ ಕಹಾನಿಯ ಕಡೆ ಸಾಗುತ್ತದೆ.
ನಟ ಸಲ್ಮಾನ್ ಖಾನ್ ಮದುವೆಯ ವಿಷಯದಲ್ಲಿ ಇಲ್ಲಿ ತನಕ ಹಲವು ನಟಿಯರ ಹೆಸರು ಕೇಳಿ ಬಂದಿದೆ.
ಆದರೆ ಅದೆಲ್ಲವೂ ಕೇವಲ ಗಾಸಿಪ್ ಆಗಿ ಉಳಿದು ಬಿಟ್ಟಿದ್ದು, ಈಗ ಸಲ್ಮಾನ್ ಖಾನ್ ಅವರ ಲವ್ ಅಥವಾ, ಗರ್ಲ್ ಫ್ರೆಂಡ್ ಬಗ್ಗೆ ಅಲ್ಲ, ಬದಲಿಗೆ ಸಲ್ಮಾನ್ ಖಾನ್ ಮದುವೆ ಬಗ್ಗೆ ಗುಸು, ಗುಸು ಮಾತು ಹರಡಿದೆ.
ಹೌದು ನಟ ಸಲ್ಮಾನ್ ಖಾನ್‌ಗೆ ಮದುವೆ ಆಗಿದೆಯಂತೆ, ಬಾಲಿವುಡ್‌ನ ಹೆಸರಾಂತ ನಟಿಯ ಜೊತೆಗೆ ಸಲ್ಲು ರಹಸ್ಯವಾಗಿ ಮದುವೆ ಆಗಿದ್ದಾರಂತೆ.
ಇದು ಕೇವಲ ಗಾಳಿ ಸುದ್ದಿ ಅಲ್ಲ, ಅದರ ಬದಲಿಗೆ ಆ ನಟಿಯ ಜೊತೆಗೆ ಸಲ್ಮಾನ್ ಖಾನ್ ಫೋಟೋ ಕೂಡ ರಿವೀಲ್ ಆಗಿದೆ.
ಆ ನಟಿ ಯಾರು, ಸಲ್ಮಾನ್ ಖಾನ್ ರಹಸ್ಯವಾಗಿ ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಮುಂದೆ ಇನ್ನಷ್ಟು ಓದಿ….
ಸಲ್ಮಾನ್ ಖಾನ್ ಜೊತೆ ಸೋನಾಕ್ಷಿ ಸಿನ್ಹ
ನಟ ಸಲ್ಮಾನ್ ಖಾನ್ ಮದುವೆ ಸುದ್ದಿ ಇದ್ದಕ್ಕಿದ್ದ ಹಾಗೆ ತುಂಬಾ ಸದ್ದು ಮಾಡುತ್ತಿದೆ, ಅದರಲ್ಲೂ ಸಲ್ಮಾನ್ ಖಾನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.Salman Khan Marriage
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಜೊತೆಗೆ ಸಲ್ಲು ಮದುವೆ ಆಗಿದ್ದಾರಂತೆ, ಇದಕ್ಕೆ ಪೂರಕವಾಗಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಮದುವೆ ಕಾಸ್ಟ್ಯೂಂನಲ್ಲಿ ಇರುವ ಫೋಟೊ ಬಿಟ್ಟಿದ್ದಾರೆ.
ಈ ಫೋಟೋದಲ್ಲಿ ಸಲ್ಮಾನ್ ಖಾನ್ ಸೋನಾಕ್ಷಿಗೆ ಉಂಗುರವನ್ನು ತೊಡಿಸುತ್ತಿದ್ದಾರೆ.
ಮದುವೆ ಮಂಟಪದಲ್ಲಿ ಸೋನಾಕ್ಷಿ, ಸಲ್ಮಾನ್! ಈ ಫೋಟೋ ನೋಡಿದ ತಕ್ಷಣ ಇದು ಮದವೆ ಫೋಟೋ ರೀತಿಯಲ್ಲಿಯೇ ಇದೆ.
ಇಬ್ಬರೂ ಮದುವೆ ಮಂಟಪದಲ್ಲಿ ನಿಂತು ಮದುಮಕ್ಕಳಂತೆ ಮಿಂಚಿದ್ದಾರೆ, ಸೋನಾಕ್ಷಿ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರೆ, ಸಲ್ಮಾನ್ ಖಾನ್ ಸೂಟ್ ಧರಿಸಿ, ಉಂಗುರ ಹಾಕುತ್ತಿದ್ದಾರೆ.Salman Khan Marriage
ನಟಿ ಸೋನಾಕ್ಷಿ ನಾಚುತ್ತಾ, ನಗುತ್ತಾ ಪೋಸ್ ಕೊಟ್ಟಿದ್ದಾರೆ, ಈ ಫೋಟೋ ವೈರಲ್ ಆದ ಬಳಿಕ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ.
ಅದ್ಯಾವಾಗ ಸಲ್ಲು, ಸೋನಾಕ್ಷಿ ಮದುವೆ ಆಯ್ತು ಅಂತ ಶಾಕ್ ಆಗಿದ್ದಾರೆ. ಆದರೆ ಈ ಫೊಟೋದ ಅಸಲಿ ಕಥೆಯೇ ಬೇರೆಯೇ ಇದೆ.
ಸಲ್ಮಾನ್ ಖಾನ್ ನಕಲಿ ಮದುವೆ ಫೋಟೊ!

ಸಲ್ಮಾನ್ ಖಾನ್, ಸೋನಾಕ್ಷಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಖಂಡಿತವಾಗಿಯೂ ನಿಜವಲ್ಲ.
ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅವರ ಮದುವೆ ಫೋಟೋ ಸುಳ್ಳು .
ಬೇರೆ ಯಾರದ್ದೋ ಮದುವೆ ಫೋಟೊಗೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ ಅವರ ಫೊಟೋವನ್ನು ಜೋಡಣೆ ಮಾಡಲಾಗಿದೆ.
ಫೋಟೋ ಶಾಪ್ ಮೂಲಕ ಫೊಟೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ, ಆದರೆ ಈ ಪೋಟೋ ನೋಡಿದರೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ನಿಜವಾಗಲೂ ಮದುವೆ ಆಗಿದ್ದಾರೆ ಅಂತ ಅನಿಸುತ್ತದೆ.
ಮತ್ತೇ ಸುಳ್ಳಾಯ್ತು ಸಲ್ಲು ಮದುವೆ ಸುದ್ದಿ! ನಟ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ ಇಬ್ಬರು ಕೂಡ ಉತ್ತಮ ಸ್ನೇಹದ ಬಾಂಧವ್ಯ ಹೊಂದಿದ್ದಾರೆ.
ಸೋನಾಕ್ಷಿ ಸಲ್ಮಾನ್ ಖಾನ್ ಚಿತ್ರದ ಮೂಲಕವೇ ಬೆಳ್ಳಿ ಪರದೆಗೆ ಪರಿಚಯವಾಗಿದ್ದರೆ.
ದಬಾಂಗ್ ಸಿನಿಮಾದ ಮೂಲಕ ಸೋನಾಕ್ಷಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ದಬಾಂಗ್ ಸರಣಿ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಜೋಡಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ.
ಈ ಬಾರಿಯೂ ಸಲ್ಮಾನ್ ಖಾನ್ ಮದುವೆ ಸುದ್ದಿ ಸುಳ್ಳಾಗಿದೆ. ಆದರೆ ಅದ್ಯಾವಾಗ ಸಲ್ಮಾನ್ ಖಾನ್‌ಗೆ ಮದುವೆ ಭಾಗ್ಯ ಬರುತ್ತದೆಯೋ ಅಂತ ಕಾದು ನೋಡ್ಬೇಕು.