
Shakuntalam Poster
ಸಮಂತಾ
ನಟಿ ಸಮಂತಾ ಅವರು ತುಂಬಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಆ ಪೈಕಿ ತೆಲುಗಿನ ‘ಶಾಕುಂತಲಂ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಹುಟ್ಟಿಸಿದೆ.
ಪೌರಾಣಿಕ ಕಥೆ ಇರುವ ಈ ಚಿತ್ರವನ್ನು ಸಮಂತಾ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳ ವಲಯದಲ್ಲಿ ಬಹಳಷ್ಟು ಹೈಪ್ ಸೃಷ್ಟಿ ಆಗಿತ್ತು.
ಈಗ ಈ ಸಿನಿಮಾದಿಂದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ, ಶಕುಂತಲೆಯಾಗಿ ಸಮಂತಾ ಅವರು ಪೋಸ್ ಮಾಡಿದ್ದಾರೆ.
ಶ್ವೇತವರ್ಣದ ಸೀರೆಯಲ್ಲಿ, ಪರಿಸರದ ಮಧ್ಯೆ ಕುಳಿತುಕೊಂಡು ಅವರು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಈ ಪೋಸ್ಟರ್ ಹಂಚಿಕೊಂಡಿದ್ದು, ‘ಶಾಕುಂತಲಂ’ ಚಿತ್ರದ ಬಗ್ಗೆ ಅವರಿಗೂ ವಿಶೇಷವಾದ ನಿರೀಕ್ಷೆ ಇದೆ.Shakuntalam Poster
ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟರ್ ಅನ್ನು ಲಕ್ಷಾಂತರ ಜನರು ಲೈಕ್ ಮಾಡಿದ್ದಾರೆ.
ಈ ಮೂಲಕ ಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಎಂಥದ್ದು ಎಂಬುದು ತಿಳಿದಿದೆ, ‘ಶಾಕುಂತಲಂ’ ಫಸ್ಟ್ಲುಕ್ ಪೋಸ್ಟರ್ ಕಂಡು ನಟ-ನಟಿಯರು ಕೂಡ ವಾವ್ ಎನ್ನುತ್ತಿದ್ದಾರೆ.
ಕಮೆಂಟ್ಗಳ ಮೂಲಕ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ, ಇದು ಚಿತ್ರತಂಡಕ್ಕೆ ಸಂತೋಷದ ವಿಚಾರವಾಗಿದೆ.
ಯಾವ ಪಾತ್ರ ಕೊಟ್ಟರೂ ತುಂಬಾ ಅಚ್ಚು ಕಟ್ಟಾಗಿ ನಟಿಸುವ ಪ್ರತಿಭಾವಂತೆ ಸಮಂತಾ, ಅವರನ್ನು ಶಕುಂತಲೆ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾದಿದ್ದಾರೆ.
ಈಗ ಬಿಡುಗಡೆ ಆಗಿರುವ ಫಸ್ಟ್ಲುಕ್ನಿಂದಾಗಿ ಫ್ಯಾನ್ಸ್ ನಿರೀಕ್ಷೆ ಬಹಳಷ್ಟು ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಮಂತಾ ಅವರ ಜನಪ್ರಿಯತೆ ಹೆಚ್ಚಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಅವರು ಸಖತ್ ಬೋಲ್ಡ್ ಪಾತ್ರ ಮಾಡಿದರು, ತದನಂತರ ‘ಪುಷ್ಪ’ ಚಿತ್ರದಲ್ಲಿ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಸಾಂಗಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.
ಈಗ ಶಕುಂತಲೆಯಾಗಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ, ಈ ಚಿತ್ರದ ಫಸ್ಟ್ಲುಕ್ ಜನಪ್ರಿಯ ಆಗುತ್ತಿದೆ.
ಮೇನಕೆ ಹಾಗು ವಿಶ್ವಾಮಿತ್ರರ ಮಗಳು ಶಕುಂತಲೆ, ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಬೆಳದ ಆಕೆಗೆ ಪ್ರಕೃತಿ ಮತ್ತು ಪ್ರಾಣಿಗಳೆಂದರೆ ತುಂಬ ಇಷ್ಟ.Shakuntalam Poster
ಅದನ್ನು ಬಿಂಬಿಸುವ ರೀತಿಯಲ್ಲೇ ‘ಶಾಕುಂತಲಂ’ ಚಿತ್ರದ ಫಸ್ಟ್ಲುಕ್ ಮೂಡಿ ಬಂದಿದೆ, ಈ ಪಾತ್ರ ಆಯ್ಕೆ ಮಾಡಿದ್ದು ಎಂಬುವುದರ ಬಗ್ಗೆ ಹಿಂದೆ ಹೇಳಿದ್ದಾರೆ.
‘ನಾನು ಯಾವಾಗಲೂ ಡಿಫರೆಂಟ್ ಕ್ಯಾರೆಕ್ಟರ್ ಮಾಡಲು ಇಷ್ಟಪಡುತ್ತೇನೆ, ‘ಶಾಕುಂತಲಂ’ ಸಿನಿಮಾದ ಪ್ರತಿ ಫ್ರೇಮ್ ಕೂಡ ಪೇಂಟಿಂಗ್ ರೀತಿಯಲ್ಲಿ ಇದೆ.
ಶಕುಂತಲೆಯ ಪಾತ್ರದಲ್ಲಿ ಹಿಂದೆಂದಿಗಿಂತಲೂ ನಾನು ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಒತ್ತಡ ನನ್ನ ಮೇಲಿತ್ತು.
ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳೆಂದರೆ ನನಗೆ ತುಂಬಾ ಇಷ್ಟ, ಇದು ನನ್ನ ಕನಸಿನ ಪಾತ್ರ.
ಕೆಲವು ದೃಶ್ಯಗಳನ್ನು ನೋಡಿದರೆ ಅದು ನಾನೇ ಎಂಬುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಅಷ್ಟು ಚೆನ್ನಾಗಿ ಚಿತ್ರ ತಂಡ ಕೆಲಸ ಮಾಡಿದೆ.Shakuntalam Poster
ಚಿತ್ರ ತಂಡದ ಬಗ್ಗೆ
ಮೇಕಪ್, ಕಾಸ್ಟ್ಯೂಮ್, ಪ್ರೊಡಕ್ಷನ್ ಡಿಸೈನ್, ಲೈಟಿಂಗ್ ಹೀಗೆ ಎಲ್ಲವೂ ಬಹಳಷ್ಟು ಚೆನ್ನಾಗಿದೆ’ ಎಂದು ಸಮಂತಾ ಹೇಳಿದ್ದಾರೆ.
ಖ್ಯಾತ ನಿರ್ದೇಶಕರಾದ ಗುಣಶೇಖರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ನೀಲಿಮಾ ಗುಣ ಅವರ ನಿರ್ಮಾಣದಲ್ಲಿ ‘ಶಾಕುಂತಲಂ’ ಮೂಡಿಬರುತ್ತಿದೆ.
ಕನ್ನಡ, ಹಿಂದಿ, ಮಲಯಾಳಂ ಹಾಗು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದ್ದು, ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಕೂಡ ನಟಿಸಿರುವುದು ತುಂಬಾ ವಿಶೇಷವಾಗಿದೆ.