
Saudi Arabia Law
ಸೌದಿ ಅರೇಬಿಯಾ
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆಯು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುವುದರ ಜೊತೆಗೆ, ಇದು ಇದು ನಮ್ಮ ದಿನನಿತ್ಯದ ಭಾಗವಾಗಿದೆ.
ಚಾಟ್, ವಿಡಿಯೋ ಕಾಲ್, ವಾಯ್ಸ್ ಕಾಲ್ಗಳ ಜಗತ್ತಿನಲ್ಲಿ ಎಮೋಜಿಗಳನ್ನು ವಾಟ್ಸಪ್ಪ್ ನಲ್ಲಿ ಯಥೇಚ್ಛವಾಗಿ ಬಳಕೆ ಮಾಡುತ್ತೇವೆ.
ಎಷ್ಟೇ ನಾವು ಆಧುನಿಕವಾಗಿ, ತಾಂತ್ರಿಕ ಕ್ಷೇತ್ರದಲ್ಲಿ ಬೆಳವಣಿಗೆಯಾದರು ಅದರ ಬಳಕೆಯು ನಮ್ಮ ಹಿಡಿತದಲ್ಲಿ ಇರಬೇಕು.
ಸೌದಿ ಅರೇಬಿಯಾದಲ್ಲಿ ಇಂಥದ್ದೊಂದು ಕಾನೂನು ನಿಯಮ ಜಾರಿಯಾಗಿದೆ, ವಾಟ್ಸಾಪ್ ಸಂದೇಶ ಕಳುಹಿಸುವಾಗ ರೆಡ್ ಹಾರ್ಟ್ ಎಮೋಜಿಗಳನ್ನು ಬಳಸುವಂತಿಲ್ಲ.Saudi Arabia Law
ಒಂದು ವೇಳೆ ಬಳಸಿದರೆ ಅವರಿಗೆ ಈ ಸಂಬಂಧಪಟ್ಟ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದೆ.
ಭಾವನೆಗಳನ್ನು ವಿವರಿಸಲು ಎಮೋಜಿಗಳನ್ನಿಟ್ಟು ಮೆಸೇಜ್ಗಳನ್ನು ಬಳಸುವುದು, ಕೆಲವರಂತೂ ಖುಷಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಹಾರ್ಟ್ ಎಮೋಜಿಗಳನ್ನು ತುಂಬಾ ಕಳುಹಿಸುತ್ತಾರೆ.
ಇನ್ನೂ ಕೆಲವರಿಗೆ ವಾಟ್ಸಪ್ಪ್ ನಲ್ಲಿ ಎಮೋಜಿಗಳಿಲ್ಲದೆ ಮೆಸೇಜ್ ಕಳುಹಿಸುವುದೆಂದರೆ ಅಲರ್ಜಿ ಎನ್ನುವಂತಿರುತ್ತದೆ.
ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಪಂಚಾದ್ಯಂತ ಜನರು ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ.
ಜನರು ಒಂದು ಹೊತ್ತಿನ ಊಟ ಮರೆತರು ಈ ಸಾಮಾಜಿಕ ಜಾಲತಾಣಗಳ ಉಪಯೋಗ ಮಾಡುವುದು ಮಾತ್ರ ಬಿಡುವುದಿಲ್ಲ.
ಹೀಗಿದ್ದಾಗ ಯಾವುದಾದರೂ ಒಂದು ಎಮೋಜಿಯನ್ನು ನಿಷೇಧ ಮಾಡಿಬಿಟ್ಟರೆ? ಹೌದು, ಸೌದಿ ಅರೇಬಿಯಾದಲ್ಲಿ ಇಂಥದ್ದೊಂದು ಕಾನೂನು ನಿಯಮ ಜಾರಿಯಾಗಿದೆ.
ವಾಟ್ಸಾಪ್ ಸಂದೇಶ ಕಳುಹಿಸುವಾಗ ರೆಡ್ ಹಾರ್ಟ್ ಎಮೋಜಿಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಮಾಹಿತಿ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.
ಹಾಗಾಗಿ ಸೌದಿ ಅರೇಬಿಯಾ ಒಂದು ಕಾನೂನು ವ್ಯವಸ್ಥೆ ಜಾರಿಗೆ ತಂದಿದೆ ಅದನ್ನು ನೋಡಿ ಜನರು ಆಶ್ಚರ್ಯ ಪಟ್ಟಿದ್ದಾರೆ.
ವಾಟ್ಸಪ್ಪ್ ಕಾನೂನು
ನಿಮ್ಮ ವಾಟ್ಸಾಪ್ನಲ್ಲಿ ಕೆಂಪು ಬಣ್ಣದ ಹಾರ್ಟ್ ಎಮೋಜಿ ಕಳುಹಿಸುವುದು ಕಿರುಕುಳ ಕೊಟ್ಟ ಹಾಗಂತೆ.
ಒಂದು ವೇಳೆ ಮೆಸೇಜ್ನಲ್ಲಿ ರೆಡ್ ಹಾರ್ಟ್ ಎಮೋಜಿ ಕಳುಹಿಸಿರುವುದು ಮಾಹಿತಿ ತಿಳಿದು ಬಂದರೆ 5 ವರ್ಷ ಜೈಲು ಮತ್ತು 26 ಸಾವಿರ ಡಾಲರ್ ದಂಡ ವಿಧಿಸಲಾಗುವುದು.
ಸೈಬರ್ ಕ್ರೈಮ್ ತಜ್ಞರೊಬ್ಬರು ಈ ಹೇಳಿಕೆ ಕೊಟ್ಟಿದ್ದಾರೆ, ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಬಹಳ ಸುದ್ದಿಯಾಗಿದೆ.
ಸೌದಿ ಅರೇಬಿಯಾ ದೇಶದ ಕಾನೂನಿ ಪ್ರಕಾರ ರೆಡ್ ಹಾರ್ಟ್ಗಳನ್ನು ಕಳುಹಿಸುವುದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ.
ಹೀಗಾಗಿ ವಾಟ್ಸಪ್ಪ್ ಆನ್ಲೈನ್ನಲ್ಲಿ ಚಾಟ್ ಮಾಡುವ ಸಮಯದಲ್ಲಿ ಈ ರೀತಿ ರೆಡ್ ಹಾರ್ಟ್ಗಳನ್ನು ಕಳುಹಿಸುವುದು ಕಿರುಕುಳಕ್ಕೆ ಸಮಾನವಾಗಿದೆ.Saudi Arabia Law
ಕಾನೂನಿನ ಅಡಿಯಲ್ಲ ಅಂತಹ ಪ್ರಕರಣಗಳು ಸಾಬೀತಾದರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಷನ್ನ ಸದಸ್ಯ ಅಲ್ ಮೊತಾಜ್ ಕುಟ್ಬಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಅಲ್ಲದೆ ಅದೇ ರೀತಿಯ ತಪ್ಪು ಪುನಾರಾವರ್ತನೆಯಾದರೆ ದಂಡದ ಮೊತ್ತ ದುಪ್ಪಟ್ಟಾಗುವುದು ಜತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.