SBI Customar
ಎಸ್ಬಿಐ ಬ್ಯಾಂಕ್
ಎಸಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಕ್ಯೂರ್ ಕೋಡ್ ಬಗ್ಗೆ ಮುಂದೆ ತೊಂದರೆ ಬರದಂತೆ ಒಂದು ಮಾಹಿತಿಯನ್ನು ತಿಳಿಸಿದೆ.
ಡಿಜಿಟಲೀಕರಣ ಮತ್ತು ನೆಟ್ ಬ್ಯಾಂಕಿಂಗ್ನಿಂದ ಜನರು ಅನುಕೂಲಕರವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಹಾಯ ಮಾಡುತ್ತಿದೆ.
ಆದರೂ ಆನ್ಲೈನ್ ಬ್ಯಾಂಕಿಂಗ್ನ ಹೆಚ್ಚುತ್ತಿರುವ ಬಳಕೆಯು ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧದ ಪ್ರಕರಣಗಳು ಉಲ್ಬಣಗೊಳಿಸಿದೆ.
ಇತ್ತೀಚಿನ ದಿನಗಳಲ್ಲಿ ವಂಚಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರನ್ನು ವಂಚಿಸಲು ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ.
ಈ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಜೊತೆಗೆ ಎಲ್ಲ ಜನರು ಬಹಳ ಜಾಗರೂಕತೆಯಿಂದ ಇರಬೇಕಾಗಿದೆ.
ಸಾಮಾನ್ಯ ಜನರು ಡಿಜಿಟಲೀಕರಣದ ಜೊತೆಗೆ ಅಭಿವೃದ್ಧಿ ಕೂಡ ಅವಶ್ಯಕತೆಯಾಗಿದೆ.
ಈ ವಂಚನೆಯು ಸಾಮಾನ್ಯವಾಗಿ ಬಳಸುವ ಕ್ಯೂಆರ್ ಕೋಡ್ಗೆ ಸಂಬಂಧ ಪಟ್ಟಿದೆ.
ಯಾವುದೇ ವ್ಯಕ್ತಿಯಿಂದ ಕ್ಯೂಆರ್ ಕೋಡ್ ಪಡೆದರೆ ಅವರು ಅದನ್ನು ತಪ್ಪಾಗಿ ಸ್ಕ್ಯಾನ್ ಮಾಡಬಾರದು ಎಂದು ತನ್ನ ಗ್ರಾಹಕರಿಗೆ ಎಚ್ಚರ ವಹಿಸಿದೆ.SBI Customar
ಕ್ಯೂಆರ್ ಕೋಡ್ ಕಳುಹಿಸುವವರ ಬಗ್ಗೆ ವಿವರಗಳನ್ನು ತಿಳಿಯದೆ ನೀವು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಿಂದ ಹಣವನ್ನು ಕಳೆದುಕೊಳ್ಳಬಹುದು ಎಂದು ಟ್ವಿಟರ್ ಮೂಲಕ ಗ್ರಾಹಕರನ್ನು ಬ್ಯಾಂಕ್ ಎಚ್ಚರಿಸಿದೆ.
ಹಣವನ್ನು ಸ್ವೀಕರಿಸಲು ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಅವಶ್ಯಕತೆವಿಲ್ಲ.
ನೀವು ಪ್ರತಿ ಬಾರಿ ಯುಪಿಐ ಪಾವತಿಗಳನ್ನು ಮಾಡುವಾಗ ಸುರಕ್ಷತಾ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕ್ಯೂಆರ್ ಕೋಡ್ ವಂಚನೆ
ಕ್ಯೂಆರ್ ಕೋಡ್ ಅನ್ನು ಯಾವಾಗಲೂ ಪಾವತಿ ಮಾಡಲು ಬಳಸಲಾಗುತ್ತದೆ ವಿನಾ ಪಾವತಿಗಳನ್ನು ತೆಗೆದುಕೊಳ್ಳಲು ಅಲ್ಲ ಎಂದು ಎಸ್ಬಿಐ ತಿಳಿಸಿದೆ.SBI Customar
ಅಂತಹ ಸಮಯದಲ್ಲಿ ಪಾವತಿಯನ್ನು ಸ್ವೀಕರಿಸುವ ಹೆಸರಿನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮಗೆ ಸಂದೇಶ ಅಥವಾ ಮೇಲ್ ಬಂದರೆ ಅಪ್ಪಿತಪ್ಪಿಯೂ ಸ್ಕ್ಯಾನ್ ಮಾಡಬೇಡಿ.
ಇದು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ನಿಮಗೆ ಹಣ ಸಿಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಆದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂದೆ ತೆಗೆದುಕೊಂಡಿರುವ ಸಂದೇಶ ಬರುತ್ತದೆ.
ಕ್ಯೂಆರ್ ಕೋಡ್ ವಂಚನೆ ತಪ್ಪಿಸುವುದು ಹೇಗೆ ?
ನೀವು ಕ್ಯೂಆರ್ ಕೋಡ್ ವಂಚನೆಯನ್ನು ತಪ್ಪಿಸಲು ಕೆಲವು ಸುರಕ್ಷತಾ ಸಲಹೆಗಳನ್ನು ಬ್ಯಾಂಕ್ ನೀಡಿದೆ.
ಒಂದೇ ಒಂದು ತಪ್ಪು ಮಾಡಿದರೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.
ಯಾವುದೇ ಪಾವತಿ ಮಾಡುವ ಮೊದಲು ಯಾವಾಗಲೂ ಯುಪಿಐ ಐಡಿಯನ್ನು ಪರಿಶೀಲನೆ ಮಾಡಿ.
ಯುಪಿಐ ಐಡಿಯನ್ನು ಹೊರತು ಹಣವನ್ನು ಕಳುಹಿಸುವ ಮೊದಲು ಯಾವಾಗಲೂ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನು ಪರಿಶೀಲಿಸಿ.
ನಿಮ್ಮ ಯುಪಿಐ ಪಿನ್(ಪಾಸ್ವರ್ಡ್) ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಯುಪಿಐ ಪಿನ್ ಅನ್ನು ತಪ್ಪಾಗಿಯೂ ಗೊಂದಲ ಮಾಡಬೇಡಿ.SBI Customar
ಹಣ ವರ್ಗಾವಣೆಗಾಗಿ ಸ್ಕ್ಯಾನರ್ ಅನ್ನು ಸರಿಯಾಗಿ ಬಳಕೆ ಮಾಡಿ.
ಯಾವುದೇ ಸಮಯದಲ್ಲಿ ಅಧಿಕೃತ ಅಲ್ಲದ ಮೂಲಗಳಿಂದ ಪರಿಹಾರಗಳನ್ನು ಹುಡುಕಬೇಡಿ. ಪಾವತಿ ಅಥವಾ ತಾಂತ್ರಿಕ ಸಮಸ್ಯೆಗಳಿಂದ ಎಸ್ಬಿಐ ಅಪ್ಲಿಕೇಷನ್ನ ಸಹಾಯ ವಿಭಾಗವನ್ನು ಬಳಸಿ.
ಯಾವುದೇ ವ್ಯತ್ಯಾಸ ಇದ್ದಲ್ಲಿ ಎಸ್ಬಿಐ ತೊಂದರೆಗಳನ್ನು ಪರಿಹಾರ ಪೋರ್ಟಲ್ https://crcf.sbi.co.in/ccf/ ಮೂಲಕ ಪರಿಹಾರವನ್ನು ಪಡೆದುಕೊಳ್ಳಿ.