“ನನ್ನ ಸಿನಿಮಾಗಳನ್ನು ನಾನೇ ನೋಡಿಲ್ಲ”ಶಾಕಿಂಗ್ ಹೇಳಿಕೆ ಕೊಟ್ಟ ಶಾರುಖ್!

Shahruk Khan Interview

ಶಾರುಖ್ ಖಾನ್

ತಾವು ನಟಿಸಿದ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಭಿಮಾನಿಗಳ ಜತೆ ಮೊದಲ ದಿನ, ಮೊದಲ ಶೋ ನೋಡೋಕೆ ನಟ/ನಟಿಯರು ಕಾಯುತ್ತಾರೆ.

ಸ್ಯಾಂಡಲ್ವುಡ್ ಸೇರಿ ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ, ಬಾಲಿವುಡ್ನಲ್ಲೂ ಕೂಡ ಇದೇ ರೀತಿ ಮಾಡಲಾಗುತ್ತದೆ.

ಆದರೆ, ಕೆಲ ಸ್ಟಾರ್ ನಟರಿಗೆ ಇದು ಇಷ್ಟವಾಗುವುದಿಲ್ಲ, ಅವರು ಥಿಯೇಟರ್ಗೆ ಎಂಟ್ರಿ ಕೊಟ್ಟರೂ ಸಿನಿಮಾ ನೋಡಲು ಇಷ್ಟಪಡುವುದಿಲ್ಲ.

ಇನ್ನು ಕೆಲವು ಸ್ಟಾರ್ ಸೆಲೆಬ್ರೆಟಿಗಳು ತಮ್ಮ ಮೂವಿಗಳನ್ನು ಹೆಚ್ಚು ನೋಡುವುದಿಲ್ಲ.

ಬಹಳಷ್ಟು ನಟ ನಟಿಯರು ತಮ್ಮ ಸಿನಿಮಾ ಬಿಡುಗಡೆಯಾದ ತಕ್ಷಣ ಜನರ ಅಥವಾ ಅಭಿಮಾನಿಗಳ ಜೊತೆ ಚಿತ್ರ ನೋಡಲು ಬಯಸುತ್ತಾರೆ.

ಸೆಲೆಬ್ರಿಟಿಗಳು ಬಂದರೆ ಅಲ್ಲಿ ನೂಕುನುಗ್ಗಲು ಉಂಟಾಗುತ್ತದೆ, ಈ ಕಾರಣಕ್ಕೆ ಕೆಲ ಸೆಲೆಬ್ರಿಟಿಗಳು ಮೊದಲ ದಿನ ತಮ್ಮ ನಟನೆಯ ಸಿನಿಮಾ ನೋಡುವುದಿಲ್ಲ.

ಆದರೆ ತಾವು ನಟಿಸಿದ ಸಿನಿಮಾವನ್ನು ನೋಡದೇ ಇರುವವರ ಸಂಖ್ಯೆ ಕಡಿಮೆ, ಅಚ್ಚರಿ ಎಂದರೆ ಶಾರುಖ್ ಖಾನ್ ಅವರು ತಾವು ನಟಿಸಿದ ಅನೇಕ ಸಿನಿಮಾಗಳನ್ನು ನೋಡಿಲ್ಲವಂತೆ.Shahruk Khan Interview

ಇದರ ಬಗ್ಗೆ ಒಂದು ಸಂದರ್ಶನದಲ್ಲಿ ಇವರು ನನ್ನ ಸಿನಿಮಾಗಳು ಬಹಳಷ್ಟು ನಾನೇ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಶಾರುಖ್ ಖಾನ್ ಅವರು ಬಾಲಿವುಡ ಬೇಡಿಕೆಯ ನಟ, ಅವರಿಗೆ ಎಣಿಕೆಯಾಗದ ಕೋಟ್ಯಂತರ ಅಭಿಮಾನುಗಳನ್ನು ಹೊಂದಿದ್ದಾರೆ.

ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಅವರನ್ನು ಇಷ್ಟಪಡುವ ಅನೇಕ ನಟ, ನಟಿಯರು ಹಾಗೂ ಅಭಿಮಾನಿಗಳಿದ್ದಾರೆ.

ಪ್ರಸ್ತುತದ ವರ್ಷಗಳಲ್ಲಿ ಅವರ ನಟನೆಯ ಯಾವುದೇ ಸಿನಿಮಾ ಹಿಟ್ ಆಗಿಲ್ಲ, 2018ರಲ್ಲಿ ತೆರೆಗೆ ಬಂದ ‘ಝೀರೋ’ ಸಿನಿಮಾದ ಬಳಿಕ ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ.

ಸದ್ಯ, ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ, ಇದು ಅವರ ಹಳೆಯ ಸಂದರ್ಶನ ವಿಡಿಯೋ ಒಂದು ವೈರಲ್ ಆಗಿದೆ.

ಹೇಳಿಕೆ

ಹಿಂದಿ ಜೀ ಟಿವಿಯಲ್ಲಿ ‘ಯಾಕೋಂಕಿ ಬರಾತ್’ ಕಾರ್ಯಕ್ರಮ ಪ್ರಸಾರವಾಗುತಿತ್ತು, ಈ ಕಾರ್ಯಕ್ರಮದಲ್ಲಿ ಶಾರುಖ್ ಮತ್ತು ಅನುಷ್ಕಾ ಶರ್ಮಾ ಅವರು ಆಗಮಿಸಿದ್ದರು.Shahruk Khan Interview

ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕ ರಿತೇಷ್ ದೇಶ್ಮುಖ್ ಅವರು, ‘ನಿಮ್ಮದೇ ಸಿನಿಮಾಗಳನ್ನು ನೀವು ವೀಕ್ಷಿಸದೇ ಇರುವ ಉದಾಹರಣೆ ಇದೆಯೇ’ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಅನುಷ್ಕಾ ಶರ್ಮಾ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ, ಆದರೆ ಶಾರುಖ್ ಖಾನ್ ಹೌದು ಎಂದು ಹೇಳಿದರು.

‘ನಾನು ನನ್ನ ನಟನೆಯ ಹಲವು ಸಿನಿಮಾಗಳನ್ನು ನೋಡಿಲ್ಲ, ಯಶಸ್ಸು ಕಂಡ ನನ್ನ ಸಿನಿಮಾಗಳನ್ನೂ ನೋಡಿಲ್ಲ. ಎಂದು ಹೇಳಿದರು.

‘ದಿವಾನಾ’, ‘ಸ್ವದೇಶ್’ ಸೇರಿ ತುಂಬಾ ಸಿನಿಮಾ ನೋಡಿಲ್ಲ, ಡಬ್ಬಿಂಗ್ ಮಾಡುವ ಸಮಯದಲ್ಲಿ ಮಾತ್ರ ನೋಡಿದ್ದೇನೆ.

ನಾನು ಯಾವುದಾದರೂ ಒಂದು ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ವಿಡಿಯೋವನ್ನು ಮುಂದೊಂದು ದಿನ ನೋಡಿದರೆ ಅಬ್ಬಾ ಇದು ನಾನೇ ನೀಡಿದ ಸಂದರ್ಶನವೇ ಎಂದು ಅನಿಸುತ್ತದೆ’ ಎಂದರು ಶಾರುಖ್.

ಆಧುನಿಕ ಕೃಷಿಯಲ್ಲಿ ಡ್ರೋನ್​​ಗಳಿಗೆ ಮೋದಿ ಚಾಲನೆ!-kisan drones

https://www.google.com/search?q=way2plot&oq=w&aqs=chrome.1.69i60j69i59j69i57j69i59j69i60l4.1547j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *