ಹಿಜಾಬ್ ಕುರಿತು ಸಿದ್ರಾಮಯ್ಯ ಬಿಜೆಪಿಯ ಮೇಲೆ ವಾಗ್ದಾಳಿ ?-sidramaiah-news

Sidramaiah

sidramaiah-news

ಬೆಂಗಳೂರು

ಹಿಜಾಬ್ (Hijab) ಗಲಾಟೆ ಮಾಡುವ ವಿಷಯ ಅಲ್ಲ. ತುಂಬಾ ವರ್ಷಗಳಿಂದ ಮುಸ್ಲಿಂ ಯುವತಿಯರು ಧರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah).

ಇದ್ದಕ್ಕಿದ್ದಂತೆ ಇದನ್ನು ವಿವಾದ ಮಾಡಲಾಗಿದೆ, ಹಿಂದೂ ಧರ್ಮ ಗಟ್ಟಿಗೊಳಿಸಿ ಮತ ಕ್ರೋಢೀಕರಣಕ್ಕೆ ವಿವಾದ ಸೃಷ್ಟಿ ಮಾಡಿದ್ದಾರೆ.

ಕೇಸರಿ ಬಣ್ಣದ ಶಾಲನ್ನು ವಿದ್ಯಾರ್ಥಿಗಳು ಖರೀದಿಸಿ ಹಾಕಿಕೊಂಡಿಲ್ಲ,ಸಂಘ ಪರಿವಾರದವರೇ ಅದನ್ನು ಖರೀದಿಸಿ ನೀಡಿದ್ದಾರೆ.

ಶಾಲೆಯ ಮಕ್ಕಳಿಗೂ ಒತ್ತಾಯದಿಂದ ಕೇಸರಿ ಶಾಲು ಹಾಕಿ ಕಳಿಸಿದ್ದಾರೆ,ಸಮವಸ್ತ್ರದ ಹೆಸರಲ್ಲಿ ದ್ವೇಷದ ಭಾವನೆ ಹುಟ್ಟಿಸುವ ಉದ್ದೇಶ ಅಂತ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಜನ ಕಷ್ಟ ಎದುರಿಸಬೇಕಾಗಿದೆ,ಬಿಜೆಪಿಯವರು ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ಧರ್ಮ, ಜಾತಿ ನಶೆಯನ್ನು ಜನರಿಗೆ ಅಂಟಿಸಿದ್ದಾರೆ.ex mukhyamantri siddaramaiah

ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ.

ದೇಶವನ್ನು ಲೂಟಿ ಮಾಡುತ್ತಿದ್ದಾರೆ, ಇದನ್ನೆಲ್ಲ ಮುಚ್ಚಲು ಭಾವನಾತ್ಮಕ ವಿಚಾರ ಜನರ ಮುಂದಿಡುತ್ತಿದ್ದಾರೆ  ಅಂತ  ಬೆಂಗಳೂರಿನಲ್ಲಿ  ವಿಪಕ್ಷ  ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. sidramaiah-news

ಆ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಿದ್ದೀರಿ ಅಂತ ಪ್ರಿನ್ಸಿಪಾಲ್ ಗೇಟ್ ಹಾಕುತ್ತಾರೆ ಅಂದರೆ ಇದಕ್ಕಿಂತ ಅಮಾನವೀಯವಾಗಿದ್ದು ಯಾವುದು ಇಲ್ಲ.

ಇವರೆಲ್ಲರಿಗೂ ಸಂವಿಧಾನದ ಮೇಲೆ ನಂಬಿಕೆ ಇದ್ದಿದ್ದರೆ ಪ್ರಿನ್ಸಿಪಾಲ್ ಸಸ್ಪೆಂಡ್ ಮಾಡಬೇಕಾಗಿತ್ತು, ಮಕ್ಕಳಿಗೆ ಧರ್ಮ, ಜಾತಿ ತುಂಬಿ ಮಕ್ಕಳನ್ನು ಹಾಳು ಮಾಡುವ ಕೆಲಸ ಬಿಜೆಪಿ ಸಂಘ ಪರಿವಾರ ಮಾಡುತ್ತಿದ್ದಾರೆ.karnataka ex cm siddaramaiah

ದೇಶದಲ್ಲಿ ಏನು ಅಪಾಯ ಆಗಬಹುದು ಇವರು ಊಹೆ ಮಾಡುತ್ತಿಲ್ಲ. ರಾಷ್ಟ್ರಧ್ವಜ ಕೆಳಗೆ ಇಳಿಸಿ ಕೇಸರಿ ಝಂಡಾ ಮೇಲಕ್ಕೆ ಏರಿಸುವ ಕೆಲಸ ಮಾಡುತ್ತಾರೆ. ಇದನ್ನು ನಾವು ಖಂಡಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು.

ಹಿಜಾಬ್ ವಿವಾದ

ಮತ ಕ್ರೋಢೀಕರಣಕ್ಕೆ ಇವರು ಮುಂದಾಗಿದ್ದಾರೆ. ಅದಕ್ಕಾಗಿಯೇ ಈ ವಿವಾದ ತಲೆದೋರಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಳ್ಳುತ್ತೇನೆ. sidramaiah-news

ಸಂಘ ಪರಿವಾರದವರು ಉಡುಪಿ-ಮಂಗಳೂರು ಅಲ್ಲದೆ, ಇಡೀ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ.

ಮನೆಮನೆಗೆ ಬೆಂಕಿ ಬಿದ್ದಿದೆ, ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಸಂಚು ಮಾಡುತಿದ್ದಾರೆ.

ರಾಜ್ಯಕ್ಕೆ ವಿಷ ಹಾಕಿದ್ದಾರೆ ಜಾತೀಯತೆ ಎನ್ನುವುದು ಭ್ರಷ್ಟಾಚಾರಕ್ಕಿಂತ ಅಪಾಯಕಾರಿ ಎಂದು ಹೇಳಿದರು.ex cm siddaramaiah

ನಮ್ಮ ಯುವಕರು ಸಂವಿಧಾನವನ್ನು ಚೆನ್ನಾಗಿ  ಓದಿಕೊಳ್ಳಬೇಕು, ನರೇಂದ್ರ ಮೋದಿಯಿಂದ ನಾವು ದೇಶಭಕ್ತಿ ಕಲಿಬೇಕಾಯ್ತಲ್ಲ ಎಂಬ ವ್ಯಥೆ ನಮಗಿದೆ.

ನರೇಂದ್ರ ಮೋದಿ ಹುಟ್ಟಿದ್ದೇ ಸ್ವಾತಂತ್ರ್ಯ ಬಂದ ಮೇಲೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ.

ಬಿಜೆಪಿಯವರು ಯಾರಾದರೂ ಸ್ವಾತಂತ್ರ್ರಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರಾ ಅಥವಾ ಆಸ್ತಿ ಕಳೆದಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಯಾವುದಾದರೂ ರಾಜಕೀಯ ಪಕ್ಷ ದೇಶಕ್ಕೋಸ್ಕರ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡಿದ್ರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಹೇಳಿದರು.

ದೇಶ ಉಳಿಸಬೇಕು, ಸಂವಿಧಾನ ರಕ್ಷಣೆ ಮಾಡಬೇಕಾಗಿದೆ, ದೇಶ ಆರ್ಥಿಕವಾಗಿ ದಿವಾಳಿ ಆಗುತ್ತಿದೆ.

ಇದನ್ನು ತಡೆಗಟ್ಟಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ, ಯುವಜನರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ, ಕಳೆದ ಏಳೆಂಟು ವರ್ಷಗಳಲ್ಲಿ ಬಿಜೆಪಿ ಜನಪರವಾಗಿ ಏನೂ ಕೆಲಸ ಮಾಡಿಲ್ಲ, ನುಡಿದಂತೆ ನಡೆಯಲಿಲ್ಲ ಎಂದು ಟೀಕೆ ಮಾಡಿದರು.age of siddaramaiah

ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ಧರ್ಮ ಜಾತಿಯ ನಶೆಯನ್ನು ಅಂಟಿಸಿದ್ದಾರೆ, ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರ ಸಹ ಕಳೆದ ಎರಡೂವರೆ ವರ್ಷಗಳಿಂದ ಏನೂ ಮಾಡಿಲ್ಲ, ಅಭಿವೃದ್ಧಿ ನಿಂತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ.

ದೇಶವನ್ನು ಲೂಟಿ ಮಾಡುತಿದ್ದಾರೆ ಎಂದು ಆರೋಪ ಮಾಡಿದರು.

ರಾಹುಲ್ ಗಾಂಧಿ ಭಾಷಣ ಎಲ್ಲರನ್ನು ಬೆರಗಾಗುವಂತೆ ಮಾಡಿದೆ ? ಇಲ್ಲಿದೆ ನೋಡಿ.

https://tv9kannada.com/latest-news

Social Share

Leave a Reply

Your email address will not be published. Required fields are marked *