EMI ನಲ್ಲಿ ಮೊಬೈಲ್ ಖರೀದಿಸುತ್ತೀರಾ? ಹಾಗಾದ್ರೆ ತಪ್ಪದೆ ಇದನ್ನು ನೋಡಿ.

Mobile Phones Background Pile Of Different Modern Smartphones Stock Photo -  Download Image Now - iStock

smartphones-emi-news

ಇವತ್ತಿನ ದಿನಗಳಲ್ಲಿ ತಿಂಗಳಿಗೆ ಕಡಿಮೆ ಎಂದರೂ 5 ರಿಂದ 10 ಸ್ಮಾರ್ಟ್​ಫೋನ್​ಗಳು  ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ.

ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಫೋನು ಕೂಡ ಉತ್ತಮವಾಗಿ ಮಾರಾಟವಾಗುತ್ತಿವೆ, ಇವಾಗ 15,18 ಸಾವಿರಕ್ಕೆ ಆಕರ್ಷಕವಾದ ಫೀಚರ್​ಗಳ ಮೊಬೈಲ್​ಗಳು ಬರುತ್ತಾ ಇವೆ ಹಾಗು ಪ್ರತಿಯೊಬ್ಬರೂ ಆ ಫೋನ್ಗಳನ್ನು ಉಪಯೋಗ ಮಾಡುತಿದ್ದಾರೆ.smartphones-emi-news

ಇದಕ್ಕೆ ಕಾರಣ ಏನೆಂದರೆ,ಇಂದು ಒಂದು ಮೊಬೈಲ್​ಗೆ ನಿಗದಿ ಪಡಿಸಿರುವ ಎಲ್ಲಾ ಬೆಲೆಯನ್ನು ಒಮ್ಮೆಯೆ ಕಟ್ಟಬೇಕು ಎಂಬ ನಿಯಮ ಇಲ್ಲದಿರುವುದು.

ಇವಾಗ ಏನಿದ್ದರು ಇಎಂಐ ಅಂದರೆ ಮೊದಲು ಮೊಬೈಲ್ ಅನ್ನು ಖರೀದಿ ಮಾಡಿ ಆಮೇಲೆ ಕಂತಿನ ರೂಪದಲ್ಲಿ ಪ್ರತಿ ತಿಂಗಳು  ಹಣ ಪಾವತಿ ಮಾಡುವುದು.

ಹಾಗಾಗಿ ತುಂಬಾ ಜನರು ಕಂತಿನ ರೂಪದಲ್ಲೇ ಹಣ ಕಟ್ಟಲು ಮೊಬೈಲ್ ಖರೀದಿಸುವುದಕ್ಕೆ ಮುಗಿ ಬೀಳುತ್ತಾರೆ.

ನಮ್ಮ ದೇಶದಲ್ಲಿ ತುಂಬಾ ಜನ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವವರೇ ಹೆಚ್ಚಾಗುತ್ತಿದ್ದಾರೆ.

ಬೇರೆ ಬೇರೆ ಕಂತಿನ ರೂಪವನ್ನೂ ನೀಡಲಾಗುತ್ತದೆ ಆಯ್ಕೆ ನಿಮ್ಮದಾಗಿರುತ್ತದೆ, ಒಂದೊಂದರಲ್ಲಿ ಒಂದೊಂದು ರೀತಿಯ, ಒಂದೊಂದು ಮೊಬೈಲ್ ಒಂದೊಂದು ಲಕ್ಷಣದ ಇಎಂಐ ಆಯ್ಕೆಗಳಿರುತ್ತದೆ.

ಕಂತಿನ ರೂಪದಲ್ಲಿ ಮೊಬೈಲ್ ಖರೀದಿಸುವುದು ಬಹಳ ಸುಲಭವಾದ ಮಾರ್ಗವಾಗಿದ್ದು,ಸರಿಯಾದ ಕ್ರೆಡಿಟ್ ಲಿಮಿಟ್ ಹೊಂದಿರುವ ಕ್ರೆಡಿಟ್ ಕಾರ್ಡ್ ಬೇಕಾಗುತ್ತದೆ ಅಷ್ಟೇ.smartphones-emi-news

ನೀವು ಕಂತಿನ ರೂಪದಲ್ಲಿ ಫೋನ್ ಖರೀದಿಸುವ ಬಗ್ಗೆ ಗೊತ್ತಿಲ್ಲವೆಂದರೆ ಕೆಲವೊಂದು ಮಾಹಿತಿಯನ್ನು ನಾವು ನೀಡುತ್ತೇವೆ.

ಇಎಂಐ ನಲ್ಲೆ ಮೊಬೈಲ್ ಹೇಗೆ ಖರೀದಿಸುವುದು

ಕಂತಿನ ರೂಪದಲ್ಲಿ ಮೊಬೈಲ್ ಖರೀದಿಸಬೇಕೆಂದರೆ, ನೀವು ಉತ್ತಮವಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬೇಕು.

ಇಎಂಐ ಆಯ್ಕೆಯು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ದೊರಕುತ್ತದೆ.

ನಿಮ್ಮ ಕಾರ್ಡಿನ ಮಾಹಿತಿಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ.

ಓಟಿಪಿಗಾಗಿ ನಿಮ್ಮ ಮೊಬೈಲ್ ಆಕ್ಸಿಸ್ ಇಟ್ಟುಕೊಂಡಿರಿ.

ಮೊಬೈಲ್ ಆನ್ಲೈನ್ ನಲ್ಲಿ ಹೇಗೆ ಖರೀದಿಸಬೇಕು ?

ಆನ್ಲೈನ್ ವೆಬ್ ಸೈಟ್ ಅಥವಾ ಆ್ಯಪ್ ಅನ್ನು ಓಪನ್ ಮಾಡಿ .

ಯಾವ ತರಹದ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಷ್ಟ ಪಡುತ್ತಿರೋ ಅದನ್ನು ಆಯ್ಕೆ ಮಾಡಿಕೊಳ್ಳಿ.

‘Buy Now’ ಆಯ್ಕೆಯನ್ನು ಒತ್ತಿ .

ನಿಮ್ಮ ವಿಳಾಸವನ್ನು ಆಯ್ಕೆ ಮಾಡಿ ಅಥವಾ ಬರೆಯಿರಿ ಮತ್ತು ಕಂಟಿನ್ಯೂ ಆಯ್ಕೆ ಒತ್ತಿ. ಇದು ನಿಮ್ಮನ್ನು ದುಡ್ಡನ್ನು ಪಾವತಿ ವಿಭಾಗಕ್ಕೆ ಕೊಂಡೊಯ್ಯುತ್ತದೆ.

ಇಲ್ಲಿ ಪಾವತಿ ಮೋಡ್ ಅನ್ನು ಕಂತಿನ ರೂಪದಲ್ಲಿ ಎಂದು ಆಯ್ಕೆ ಮಾಡಿ ಮತ್ತು ಕಂಟಿನ್ಯೂ ಬಟನ್ ಅನ್ನು ಒತ್ತಿ.

ನಿಮ್ಮ ಕ್ರೆಡಿಟ್ ಕಾರ್ಡ್ ಇರುವ  ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಕಂತಿನ ರೂಪದ  ಟೈಮ್ ಪಿರೇಡ್ ಆಯ್ಕೆ ಮಾಡಿ (ಸಾಮಾನ್ಯವಾಗಿ 3 ತಿಂಗಳಿನಿಂದ 24 ತಿಂಗಳವರೆಗಿನ ಆಯ್ಕೆಗಳಿರುತ್ತವೆ).

ಕಾರ್ಡಿನ ಮಾಹಿತಿಯನ್ನು ಬರೆಯಿರಿ ಮತ್ತು ಮುಂದುವರಿಯಲು ಒತ್ತಿ.

ಆವಾಗ ನಿಮಗೆ ಒಂದು ಒಟಿಪಿ ಬರುತ್ತದೆ, ಅದು ನೀವು ಬ್ಯಾಂಕ್ ನಲ್ಲಿ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರಿಗೆ ಅದನ್ನು ಕಳುಹಿಸುತ್ತದೆ.

ಓಟಿಪಿಯನ್ನು ಹಾಕಿ  ಪಾವತಿಯನ್ನು ಪೂರ್ಣಗೊಳಿಸಿ .

ಆಫ್ ಲೈನ್ ಖರೀದಿ ಮಾಡುವು ಹೇಗೆ ?

ನಿಮಗೆ ಇಷ್ಟವಾದ ಆಫ್ ಲೈನ್ ರೀಟೈಲರ್ ಶಾಪ್ ಗೆ ಹೋಗಿ ಮತ್ತು ಯಾವ ಫೋನ್ ಖರೀದಿಸಬೇಕೆಂಬುವುದನ್ನು ಆಯ್ಕೆ ಮಾಡಿ.

ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿ ಮತ್ತು ನಂತರ ಅದನ್ನು ಕಂತಿನ ರೂಪದಲ್ಲು ಕನ್ವರ್ಟ್ ಮಾಡಲು ಅವಕಾಶವಿರುತ್ತದೆ.

ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬಹುದು ಅಥವಾ ಬ್ಯಾಂಕಿನ ಮೊಬೈಲ್ ಆಪ್ ಬಳಸಿ ಕೂಡ ಮಾಡಬಹುದು.

ಬೀದರ್ ಮೆಡಿಕಲ್ ಕಾಲೇಜ್ ನಲ್ಲಿ ಹಿಜಾಬ್ ಧರಿಸಿದರೆ ನೋ ಎಂಟ್ರಿ!

https://economictimes.indiatimes.com/topic/smartphone-emi/news

Social Share

Leave a Reply

Your email address will not be published. Required fields are marked *