ರಾಜ್ಯ ಬಜೆಟನಲ್ಲಿ ಘೋಷಿಸಿದ ಹೊಸ ಯೋಜನೆಗಳಾವವು!

State Budget New Plans 2022

ರಾಜ್ಯ ಬಜೆಟ 2022

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು 2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ತನ್ನ ಮೊಟ್ಟಮೊದಲ ಬಜೆಟ್‌ ಮಂಡನೆ ವೇಳೆ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಈ ರಾಜ್ಯ ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನು ಘೋಷಣೆ ಮಾಡಲಾಗಿಲ್ಲ.

ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ವಲಯವಾರು ವಿಂಗಡಣೆ ಮಾಡಿ ಬಜೆಟ್‌ ಮಂಡನೆ ಮಾಡಿದ್ದಾರೆ.

ಹಾಗೆಯೇ ಈ ರಾಜ್ಯ ಬಜೆಟನಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಆ ಹೊಸ ಯೋಜನೆಗಳು ಯಾವುದು ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ, ಮುಂದೆ ಓದಿ…..State Budget New Plans 2022

ಮುಖ್ಯಮಂತ್ರಿ ಘೋಷಣೆ ಮಾಡಿದ ಹೊಸ ಯೋಜನೆಗಳು 

01. ನೇಕಾರರ ಮಕ್ಕಳಿಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ

02. ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ, ಆರೋಗ್ಯ ಸೌಲಭ್ಯಕ್ಕೆ ವಿಶೇಷ ಯೋಜನೆ

03. ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು, ಖಾಸಗಿ ಸಂಸ್ಥೆ ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆ

04. ಮೀನುಗಾರರಿಗಾಗಿ ಮತ್ಸ್ಯ ಸಿರಿ ಯೋಜನೆ.cm bommayi

05. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಎಂಬ ಹೊಸ ಯೋಜನೆ

06. ಯಾತ್ರಾಸ್ಥಳ ಶ್ರೀಶೈಲದಲ್ಲಿ 85 ಕೋಟಿ ರೂ ವೆಚ್ಚದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣ

07. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ಸ್ಥಾಪನೆ

08. ರೈತರಿಗೆ ರಿಯಾಯಿತಿ ದರದಲ್ಲಿ 24 ಸಾವಿರ ಕೋಟಿ ರೂ. ಸಾಲ

09. ಬಳ್ಳಾರಿಯಲ್ಲಿ ನೂತನ ಕೃಷಿ ಕಾಲೇಜು ನಿರ್ಮಾಣ.

10. ಬೆಳಗಾವಿಯಲ್ಲಿ ನೂತನ ಕೃಷಿ ಕಾಲೇಜು ನಿರ್ಮಾಣ

11. ಹಾವೇರಿಯ ಹಿರೆಕೆರೋರಿನಲ್ಲಿ ಗೋವಿನ ಜೋಳ ಸಂಶೋಧನಾ ಸಂಸ್ಥೆ ಸ್ಥಾಪನೆ

12. ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ

13. ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ

14. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭ

15. ತುಂಗಭದ್ರಾ ಜಲಾಶಯ ಭರ್ತಿಯಾದ ಬಳಿಕ ಹೊರ ಹೋಗುವ ನೀರನ್ನು ಸಂಗ್ರಹ ಮಾಡಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ.cm basavaraj bommayi

16. ಅಸಾಂಕ್ರಾಮಿಕ ರೋಗಳ ಪತ್ತೆಗಾಗಿ ನಮ್ಮ ಕ್ಲಿನಿಕ್ ನಿರ್ಮಾಣ, ಬೆಂಗಳೂರು ನಗರದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಈ ಕ್ಲಿನಿಕ್ ನಿರ್ಮಾಣ

17. ರಾಮನಗರದ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆರಂಭ

18. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಆರಂಭ

19. ಮುಂದಿನ ಎರಡು ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ನೀರಿನ ಸಂಪರ್ಕ

20. ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯ

21. ರಾಜ್ಯ ಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜನೆ

22. ಯಾಣದಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಕ್ರಮ

23. ರಾಯಚೂರಿನಲ್ಲಿ ಗ್ರೀನ್‌ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣ

24. ಮೈಸೂರು ವಿಮಾನ ನಿಲ್ದಾಣ ರನ್‌ ವೇ ವಿಸ್ತರಣೆ.karnataka cm bommayi

25. ದೇಸಿ ಕ್ರೀಡೆ ನಿರ್ಮಾಣ ಉತ್ತೇಜನಕ್ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ರೀಡಾ ಅಂಕಣ ನಿರ್ಮಾಣ

26.ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ ನೂರು ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು ಮತ್ಸ್ಯಸಿರಿ ಯೋಜನೆ ಜಾರಿ.State Budget New Plans 2022

ರಾಜ್ಯ ಬಜೆಟನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಆಧ್ಯತೆ!

https://www.google.com/search?q=way2plot&oq=w&aqs=chrome.1.69i60j69i59l2j69i60l5.1171j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *