Indonesia School
ಮಾಹಿತಿ
ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಶಿಕ್ಷೆ ನೀಡುವುದು ಸರ್ವೇ ಸಾಮಾನ್ಯವಾಗಿದೆ.
ಆದರೆ, ಶಾಲಾ- ಕಾಲೇಜಿನ ನಿಯಮಗಳನ್ನು ಉಲ್ಲಂಘಿಸುವ ಅಥವಾ ಕೆಟ್ಟದಾಗಿ ವರ್ತಿಸುವ ವಿದ್ಯಾರ್ಥಿಗಳು ಶಿಸ್ತಿನಿಂದ ಇರಲು ಶಿಕ್ಷೆಯ ಮೂಲಕ ಬುದ್ಧಿಯನ್ನು ಕಲಿಸಲಾಗುತ್ತದೆ.
ಮುಂದಿನ ಭವಿಷ್ಯದಲ್ಲಿ ಮಕ್ಕಳು ತಪ್ಪು ಕೆಲಸಗಳನ್ನು ಮಾಡಬಾರದು ಎಂಬುದು ಇದರ ಉದ್ದೇಶವಾಗಿರುತ್ತದೆ.
ಈ ದಿನಗಳಲ್ಲಿ ಅತ್ಯಂತ ಸಾಮಾನ್ಯವಾದ ಸ್ಮಾರ್ಟ್‌ಫೋನ್‌ಗಳನ್ನು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಕೆ ಮಾಡಬಾರದೆಂದು ನಿಯಮವಿದೆ.
ಎಲ್ಲ ಕಡೆಯೂ ವಿದ್ಯಾರ್ಥಿಗಳನ್ನು ಶಾಲೆ ಕಾಲೇಜುಗಳಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ, ಆದರೂ ಕೂಡ ಅವರು ಸೆಲ್ ಫೋನ್ ತರುವುದು ತಪ್ಪು.Indonesia School
ಸರ್ಕಾರ ಹಾಗೂ ಶಾಲೆಯಲ್ಲಿ ಎಷ್ಟೇ ಕಠಿಣವಾದ ಕ್ರಮವನ್ನು ಜಾರಿಗೆ ತಂದರು ಮಕ್ಕಳು ಸ್ಮಾರ್ಟ್ ಫೋನ್ಸ್ ತರುತ್ತಿದ್ದಾರೆ.
ಅದರಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕ್ಲಾಸ್ರೂಂನೊಳಗೆ ಮೊಬೈಲನ್ನು ತಂದಿದ್ದನ್ನು ನೋಡಿ ಕೋಪಗೊಂಡು ಆ ಸ್ಮಾರ್ಟ್‌ಫೋನ್‌ಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಇಂಡೋನೇಷ್ಯಾ
ಇಂಡೋನೇಷ್ಯಾದಲ್ಲಿ ಶಾಲಾ ಶಿಕ್ಷಕರ ಗುಂಪೊಂದು ಕ್ಲಾಸ್ ರೂಂನಲ್ಲಿ ಮಕ್ಕಳಿಂದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ಬೆಂಕಿ ಹಚ್ಚಿರುವ ವಿಡಿಯೋ ಮಾಡಲಾಗಿದೆ.
ವಿದ್ಯಾರ್ಥಿಗಳಿಂದ ಆ ಮೊಬೈಲ್ಗಳನ್ನು ತೆಗೆದುಕೊಂಡು ಬೆಂಕಿಯಲ್ಲಿ ಸುಟ್ಟು ಹಾಕಿರುವ ಶಿಕ್ಷಕರು.
ವಿದ್ಯಾರ್ಥಿಗಳು ತಮ್ಮ ಮೊಬೈಲ್ ವಾಪಾಸ್ ನೀಡಬೇಕೆಂದು ಎಷ್ಟೇ ಮನವಿ ಮಾಡಿದರು, ಅತ್ತರೂ ಶಿಕ್ಷಕರು ಕೇಳದೆ ಆ ಮೊಬೈಲ್ಗಳನ್ನು ಸುಟ್ಟು ಹಾಕಿ, ಶಿಕ್ಷೆಯನ್ನು ನೀಡಿದ್ದಾರೆ.
ಈ ತರಹದ ಕಠಿಣ ಕ್ರಮ ತೆಗೆದುಕೊಂಡರೆ ಮತ್ತೊಮ್ಮೆ ಅವರು ಮೊಬೈಲ್ ಗಳು ಶಾಲೆ ಕಾಲೇಜುಗಳಿಗೆ ತರುವುದಿಲ್ಲ ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆ.Indonesia School
ಈ ವಿಡಿಯೋ ತುಣುಕನ್ನು ಟಿಕ್‌ಟಾಕ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ನಂತರ ವೈರಲ್ ಆಗಿದೆ.
ವಿದ್ಯಾರ್ಥಿಗಳು ಶಿಕ್ಷಕರಿಗೆ ಬೆಂಕಿ ಹಚ್ಚಿರುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಅದು ವ್ಯರ್ಥವಾಗಿದೆ.
ಇಂಡೋನೇಷ್ಯಾದ ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಇಂಡೋನೇಷ್ಯಾದ ಬೋರ್ಡಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸುತ್ತವೆ.
ಶಿಕ್ಷಕರು ಎಷ್ಟೇ ಕಠಿಣ ಕ್ರಮವನ್ನು ತೆಗೆದುಕೊಂಡರು ಮೊಬೈಲ್ ಗಳನ್ನೂ ಸುಟ್ಟು ಹಾಕದೆ ಮನೆಗೆ ಹೋಗುವಾಗ ಹಿಂದಿರುಗಿಸಬೇಕಾಗಿತ್ತು.
ಈ ವಿಡಿಯೋ ನೋಡಿ ಹಲವು ನೆಟ್ಟಿಗರು ಆಕ್ರೋಶ ಮಾಡಿದ್ದಾರೆ, ಆಸ್ತಿಗೆ ಹಾನಿ ಮಾಡಿದ ಶಿಕ್ಷಕರನ್ನು ಶಿಕ್ಷಿಸಬೇಕು ಮತ್ತು ಮೊಕದ್ದಮೆ ಹೂಡಬೇಕು ಎಂದು ಹಲವಾರು ಹೇಳಿದ್ದಾರೆ.
ಬಹುಶಃ ಬೋರ್ಡಿಂಗ್ ಶಾಲೆಯಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಅನೇಕ ಬಾರಿ ಖಂಡಿಸಲಾಗಿತ್ತು.
ಆ ಮೊಬೈಲ್ ಫೋನ್ಗಳನ್ನು ಹಾಗೇ ವಾಪಾಸ್ ಕೊಟ್ಟು ಬುದ್ಧಿ ಹೇಳಬಹುದಿತ್ತು, ಆ ಮಕ್ಕಳ ಮನೆಗೆ ಮೊಬೈಲ್ ಫೋನ್ಗಳನ್ನು ಕಳುಹಿಸಕೊಡಬಹುದಿತ್ತು.
ಈ ರೀತಿ ಫೋನ್ಗಳನ್ನು ಸುಟ್ಟು ಹಾಕಬಾರದಿತ್ತು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.