ಆಸ್ಪತ್ರೆ ನಿರ್ಮಾಣಕ್ಕೆ ಕೋಟಿಗಟ್ಟಲೆ ದಾನ ಮಾಡಿದ ದಂಪತಿಗಳು!

subrato-sushmita-bagchi-donate-425-crore

ಬೆಂಗಳೂರು 

ಬೇರೆಯವರ ಹಣವನ್ನು ವಂಚಿಸುವ ಈಗಿನ ಕಾಲದಲ್ಲಿ ತಮ್ಮ ಸ್ವಂತ ಹಣದಿಂದ ಜನರಿಗೆ ಸಹಾಯ ಮಾಡಲು ನಾಲ್ಕು ಜನ ಮುಂದಾಗಿದ್ದಾರೆ.

ಭಾರತೀಯ ವಿಜ್ಞಾನ ಮಂದಿರದಲ್ಲಿ 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಕಟ್ಟಿಸಲು  425 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಸುಸ್ಮಿತಾ, ಸುಬ್ರತೊ ಬಾಗ್ಚಿ ಹಾಗೂ ರಾಧಾ, ಎನ್.ಎಸ್ ಪಾರ್ಥಸಾರಥಿ ದಂಪತಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿ ಆಸ್ಪತ್ರೆಯನ್ನು ಕಟಿಸಿದ್ದಾರೆ.

ಇವತ್ತಿನ ದಿನಗಲ್ಲಿ ಎಷ್ಟೇ ಹಣವಿದ್ದರೂ ತಾನು ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಈ ಯುಗದಲ್ಲಿ ತಾಣ ದುಡ್ಡು ಆಸ್ಪತ್ರೆ ಕಟ್ಟಿಸಲು ನೀಡಿದ್ದಾರೆ.

ಶ್ರೀಮಂತಿಕೆಯ ಬದಲು ಮಾನವೀಯತೆಯ ದೃಷ್ಟಿಯಿಂದ ಬಡ ಜನರಿಗೆ ಸಹಾಯವನ್ನು ಮಾಡಲು ತುಂಬಾ ಜನರು ಬರೋದಿಲ್ಲ.

ಹಣಕ್ಕಿಂತ ದುಡ್ಡಿನ ಅವಶ್ಯಕತೆ ಇರುವವರು ಹುಡುಕಿದಷ್ಟು ಸಿಗುತ್ತಾರೆ, ಆದರೆ ಸಹಾಯ ಮಾಡುವ ಆಲೋಚನೆ ಬಹಳಷ್ಟು ಜನಕ್ಕೆ ಬರುವುದಿಲ್ಲ.

ಸುಬ್ರತೊ ಬಾಗ್ಚಿ ಇವರು ಒಡಿಶಾದಲ್ಲಿ ಜನಿಸಿದ್ದು. ದೇಶದ ಉದ್ಯಮಿ ಹಾಗೂ ಪ್ರಸಿದ್ಧ ಐಟಿ ಕಂಪನಿ ಮೈಂಡ್‌ ಟ್ರೀ ಸಹ ಸಂಸ್ಥಾಪಕರಾಗಿದ್ದು. ಇವರ ತಂದೆಯು ಒಬ್ಬ ಸಾಮಾನ್ಯ ಸರ್ಕಾರಿ ನೌಕರರು.subrato-sushmita-bagchi-donate-425-crore

ಸುಬ್ರತೊ ಸಹ ಮೊದಲು ಒಡಿಶಾ ಸರ್ಕಾರದ ಗುಮಾಸ್ತನಾಗಿ ಕೆಲಸ ಮಾಡಿ ನಂತರ ಖಾಸಗಿಯಾಗಿ ಏನಾದರೂ ವ್ಯವಹಾರ ಮಾಡಲು ಪ್ರಾರಂಭಿಸಿದರು.

ಇವರು ವಿಪ್ರೊ, ಲ್ಯೂಸೆಂಟ್‌ ಕಂಪನಿಗಳಲ್ಲಿ ತುಂಬಾ ವರ್ಷಗಳ ಕಾಲ ಕೆಲಸ ಮಾಡಿ ಅದರ ಅನುಭವವನ್ನು ಪಡೆದುಕೊಂಡು ಇವಾಗ ಐಐಎಸ್‌ಸಿಗೆ ದಾನ ಮಾಡಿದ ಎನ್‌ಎಸ್‌ ಪಾರ್ಥಸಾರಥಿ ಅವರೂ ಸೇರಿ 9 ಜನ ಸ್ನೇಹಿತರ ಜೊತೆಗೆ ಮೈಂಡ್‌ ಟ್ರೀ ಸಂಸ್ಥೆಯನ್ನು ಸ್ಥಾಪಿಸಿದರು.

ಐಐಎಸ್‌ಸಿ ಇತಿಹಾಸದಲ್ಲೆ ಇದು ದೊಡ್ಡ ದಾನವಾಗಿದೆ, ಸುಸ್ಮಿತಾ-ಸುಬ್ರತೊ ಬಾಗ್ಚಿ ಮತ್ತು ರಾಧಾ-ಎನ್.ಎಸ್. ಪಾರ್ಥಸಾರಥಿ ದಂಪತಿಗಳು ಒಟ್ಟಾಗಿ 425 ಕೋಟಿ ರೂಪಾಯಿಗಳನ್ನು ದೇಣಿಗೆಯ ರೂಪದಲ್ಲಿ ನೀಡಿದ್ದಾರೆ.subrato-sushmita-bagchi-donate-425-crore

ಸಹಾಯ ಮಾಡಿದವರ ಹೆಸರಿನಲ್ಲೆ, ಹೊಸ ಆಸ್ಪತ್ರೆ ನಿರ್ಮಾಣ ಆಗಲಿದ್ದು, “ಬಾಗ್ಚಿ – ಪಾರ್ಥಸಾರಥಿ ಆಸ್ಪತ್ರೆ” ಎಂದು ನಾಮಕರಣ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಆಸ್ಪತ್ರೆ ಕಾಮಗಾರಿ ಕೆಲಸ ಆರಂಭವಾಗಲಿದೆ.subrato-sushmita-bagchi-donate-425-crore

ಆಸ್ಪತ್ರೆ ವಿಶೇಷತೆ ಏನು

ಈ ಆಸ್ಪತ್ರೆಯು ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ, ನರವಿಜ್ಞಾನ, ಎಂಡೋಕ್ರಿನಾಲಜಿ, ಗ್ಯಾಸ್ಟ್ರೋಎಂಟರಾಲಜಿ, ನೆಪ್ರಾಲಜಿ, ಯುರಾಲಜಿ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೊಬೋಟಿಕ್ ಶಸಚಿಕಿತ್ಸೆ, ನೇತ್ರವಿಜ್ಞಾನ ಸೇರಿ ಮುಂತಾದವುಗಳು ಇರಲಿವೆ.

ಎಂಡಿ, ಎಂಎಸ್ ಮತ್ತು ಡಿಎಂ, ಎಂಸಿಎಚ್ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳ ತರಬೇತಿಯನ್ನು ಮಾಡಲಾಗುತ್ತದೆ.subrato-sushmita-bagchi-donate-425-crore

ಸಮಗ್ರ ವಿದ್ಯುನ್ಮಾನ ವೈದ್ಯಕೀಯ ದಾಖಲೆ ವ್ಯವಸ್ಥೆ ಮತ್ತು ಹ್ಯಾಪ್ಟಿಕ್ಸ್ ಇಂಟೇಸ್‌ಗಳು, ಸಮಗ್ರ ಟೆಲಿಮೆಡಿಸಿನ್ ವ್ಯವಸ್ಥೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಹೊಂದಿರುತ್ತದೆ.

ಸಿಎಸಕೆ ತಂಡಕ್ಕೆ ಜನರ ತೀವ್ರ ಆಕ್ರೋಶ!-boycott csk

https://navbharattimes.indiatimes.com/business/business-news/mindtree-founder-subroto-bagchi-donated-rs-425-crore-to-iisc-for-hospital-and-research/articleshow/89582783.cms

Social Share

Leave a Reply

Your email address will not be published. Required fields are marked *