ನಿಮಗೆ ಹಣಕಾಸಿನ ತೊಂದರೆ ಇದೆಯೇ ಸಮಸ್ಯೆಗೆ ಪರಿಹಾರ!

Today Horoscope

ನಿತ್ಯ ರಾಶಿ ಭವಿಷ್ಯ

ಪ್ಲವನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಸಪ್ತಮಿ ತಿಥಿ, ಬುಧವಾರ, ಮಾರ್ಚ್ 09, 2022. ಕೃತ್ತಿಕೆ ನಕ್ಷತ್ರ,

ರಾಹುಕಾಲ: ಬೆಳಿಗ್ಗೆ 12.26ರಿಂದ ಇಂದು ಮಧ್ಯಾಹ್ನ 01.55ರ ತನಕ. ಬೆಂಗಳೂರು ಸೂರ್ಯೋದಯ – ಬೆಳಿಗ್ಗೆ 6.29, ಸೂರ್ಯಾಸ್ತ – ಸಂಜೆ 6.24

ದಿನಾಂಕ – 9-3-2022 ರ ಬುಧವಾರದ ರಾಶಿಭವಿಷ್ಯ.

ಮೇಷ

ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು, ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುತ್ತದೆ.

ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯಬಹುದು, ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 8

ವೃಷಭ

ಆತ್ಮೀಯರೊಂದಿಗೆ ಮನಸ್ತಾಪವಾಗುವ ಸಂದರ್ಭ ಬರಬಹುದು, ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ.today horoscope

ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುತ್ತಾರೆ. ಶುಭ ಸಂಖ್ಯೆ: 5

ಮಿಥುನ

ದೀರ್ಘಕಾಲದ ಸಮಸ್ಯಗಳಿಗೆ ಪರಿಹಾರ ದೊರೆಯುತ್ತದೆ, ಕೋರ್ಟನಲ್ಲಿ ಇರುವ ನ್ಯಾಯ ಬಗೆಹರಿಯುವುದು.

ಆರ್ಥಿಕ ಸಮಸ್ಯೆಯಲ್ಲಿ ಸುಧಾರಣೆ ಕಂಡುಬರುವುದು, ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು.

ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯನ್ನು ಕಂಡುಬರುವುದು. ಶುಭ ಸಂಖ್ಯೆ: 1

ಕಟಕ

ಸ್ವಂತ ಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು, ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆವಿದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇಡಬೇಕು. ಶುಭ ಸಂಖ್ಯೆ: 9

ಸಿಂಹ

ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟವು ಸಾಧ್ಯತೆ ಇರುವುದು.Today Horoscope

ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿರುತ್ತದೆ. ಹಿರಿಯರ ಸಲಹೆ ಪಡೆಯಬಹುದು. ಶುಭ ಸಂಖ್ಯೆ: 5

ಕನ್ಯಾ

ನಿಮ್ಮಲ್ಲಿ ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯಹಾನಿಯ ಸಂಭವವಿದೆ.

ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ, ದೊಡ್ಡಮೊತ್ತದ ಹಣಹೂಡಿಕೆ ಮಾಡುವುದು ಇವಾಗ ಬೇಡ. ಶುಭ ಸಂಖ್ಯೆ: 3

ತುಲಾ

ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗಿ ಕಾಣಬಹುದು. today horoscope kannada

ಹಣಕಾಸಿನ ತೊಂದರೆಗಳು ಕಂಡುಬರಬಹುದು ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆಯನ್ನು ವಹಿಸಬೇಕು. ಶುಭ ಸಂಖ್ಯೆ: 8

ವೃಶ್ಚಿಕ

ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆಯನ್ನು ವಹಿಸಿರಿ.

ಅನಿರೀಕ್ಷಿತವಾಗಿ ಬರುವ ತೊಂದರೆಗಳು ತಾವಾಗಿಯೇ ಪರಿಹಾರ ಕಾಣುವವು.

ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಆಗಬಹುದು. ಶುಭ ಸಂಖ್ಯೆ: 6

ಧನು

ಮನಸ್ಸು ಚಂಚಲವಾಗಿ ಮಾಡುವ ಕಾರ್ಯವು ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರಿಸುತ್ತೀರಿ, ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವುದು.

ವಿದೇಶ ಪ್ರಯಾಣ ಮಾಡುವ ಯೋಗವಿದೆ. ಶುಭ ಸಂಖ್ಯೆ: 2

ಮಕರ

ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯವು ವೃದ್ಧಿಯಾಗುವುದು, ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು.

ನೌಕರರ ಸಮಸ್ಯೆಗಳು ನಿವಾರಣೆಯಾಗುವವು, ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 7

ಕುಂಭ

ನಿರೀಕ್ಷಿತ ಸರ್ವಕಾರ್ಯಗಳು ನೆರವೇರುತ್ತವೆ, ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರಸುಖ ಸಂಬ್ರಮಗಳಿರುತ್ತದೆ.

ಶುಭ ಕಾರ್ಯ ಪ್ರಯತ್ನದಿಂದ ಫಲಕೊಡುತ್ತದೆ. ಶುಭ ಸಂಖ್ಯೆ: 9

ಮೀನ

ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ ಪಡೆಯಬಹುದು. ಜೀವನದ ಏಳಿಗೆಗೆ ಚಿಂತನೆ, ಕೆಲಸದ ನಡುವೆ ಮತ್ತೊಂದು ಕಾರ್ಯ ವಹಿಸಿಕೊಳ್ಳಲು ಚೈತನ್ಯವಾಗಿದೆ.Today Horoscope

ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲದಂತೆ ನಡೆದುಕೊಳ್ಳುವುದು ಒಳಿತಾಗಿದೆ. ಶುಭ ಸಂಖ್ಯೆ: 5.

ಪಾಕ್ ನಲ್ಲಿ ಮತ್ತೊಮ್ಮೆ ರಾರಾಜಿಸಿದ ವಿರಾಟ್ ಕೊಹ್ಲಿಯ ಕ್ರೇಜ್!

https://jcs.skillindiajobs.com/

Social Share

Leave a Reply

Your email address will not be published. Required fields are marked *