ಬೀದರ ಟೊಮ್ಯಾಟೋ ಬೆಲೆ ಕುಸಿತದಿಂದ ರೈತರ ಸಂಕಷ್ಟ!-Tomato Rate

Tomato

Tomato Rate Decrease

ಬೀದರ

ಬೀದರ ಭಾರತದ ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ನಗರವಾಗಿದ್ದು, ಇದು ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯಲ್ಲಿರುವ ಬೀದರ ಜಿಲ್ಲೆಯ ಪ್ರಧಾನ ಕಛೇರಿಯಾಗಿದೆ.

ಇದು ವಿಶಾಲವಾದ ಬೀದರ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿರುವ ನಗರವಾಗಿದೆ.

ಈ ನಗರವು ವಾಸ್ತುಶಿಲ್ಪ, ಐತಿಹಾಸಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆಯ ಅನೇಕ ತಾಣಗಳಿಗೆ ಹೆಸರುವಾಸಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 700 ಕಿಮೀ (430 ಮೈಲಿ) ದೂರದಲ್ಲಿರುವ ಈ ಜಿಲ್ಲೆಯು ರಾಜ್ಯ ಸರ್ಕಾರದಿಂದ ಬಹಳ ಸಮಯದಿಂದ ನಿರ್ಲಕ್ಷಿಸಲ್ಪಟ್ಟಿದೆ.

ಆದಾಗ್ಯೂ, ಇದರ ಶ್ರೀಮಂತ ಪರಂಪರೆಯ ಕಾರಣದಿಂದಾಗಿ, ನಗರವು ಭಾರತದ ಪುರಾತತ್ವ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಇದು ದಖ್ಖನ್ ಪ್ರಸ್ಥಭೂಮಿಯ ಮೇಲೆ ಚಿತ್ರಾತ್ಮಕವಾಗಿ ನೆಲೆಸಿರುವ ಬೀದರ ಕೋಟೆಯು 500 ವರ್ಷಗಳಿಗಿಂತಲೂ ಹಳೆಯದಾಗಿದೆ ಹಾಗೂ ಇನ್ನೂ ಭದ್ರವಾಗಿದೆ.

ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆಯು ಪ್ರಕಟಿಸಿದ “ಬೀದರ್ ಹೆರಿಟೇಜ್” ಪುಸ್ತಕದ ಪ್ರಕಾರ, ಇಲಾಖೆಯು ಪಟ್ಟಿ ಮಾಡಿರುವ 61 ಸ್ಮಾರಕಗಳಲ್ಲಿ, ಸುಮಾರು 30 ಸಮಾಧಿಗಳು ಬೀದರ ನಗರ ಹಾಗೂ ಸುತ್ತಮುತ್ತ ನೆಲೆಗೊಂಡಿವೆ.

ಅದರ ಅಡ್ಡಹೆಸರನ್ನು ವಿವರಿಸುವ “ನಗರ” ವಿಸ್ಪರಿಂಗ್ ಸ್ಮಾರಕಗಳು”. ಬೀದರ್ ಮತ್ತು ಸುತ್ತಮುತ್ತಲಿನ ಪಾರಂಪರಿಕ ತಾಣಗಳು ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರ ಶೂಟಿಂಗ್‌ಗೆ ಪ್ರಮುಖ ಆಕರ್ಷಣೆಯಾಗಿವೆ.

ಮತ್ತು ಕನ್ನಡ ಚಲನಚಿತ್ರೋದ್ಯಮವನ್ನು ಹೊರತುಪಡಿಸಿ ಬಾಲಿವುಡ್‌ಗೆ ಭೇಟಿ ನೀಡುತ್ತಿದೆ.

ಟೊಮೆಟೋ ಬೆಲೆ ಕುಸಿತ-Tomato Rate

ರೈತರ ಪಾಲಿಗೆ ಅಲ್ಪಾವಧಿಗೆ ಹಣವನ್ನು ತಂದು ಕೊಡುವ ಬೆಳೆ ಎಂದರೆ ಅದು Tomato, ಕೆಲವೊಮ್ಮೆ ಟೊಮ್ಯಾಟೊ ಬೆಳೆ ರೈತನ ಕೈ ಹಿಡಿದರೆ ಇನ್ನು ಕೆಲವೊಮ್ಮೆ ರೈತನನ್ನ ನಷ್ಟಕ್ಕೆ ತಳ್ಳಿ ಹಾಕುತ್ತದೆ.

ಆದರೆ ಈ ವರ್ಷವು ಟೊಮ್ಯಾಟೋ ಬೆಳೆದ ರೈತ ಕಂಗಾಲಾಗಿದ್ದು, ಟೊಮ್ಯಾಟೋವನ್ನು ನಾಶಪಡಿಸುತ್ತಿದ್ದಾರೆ. ಟೊಮೆಟೋ Price ಕುಸಿತದಿಂದ ಕಂಗಾಲಾಗಿರುವ ಬೀದರ್ ಜಿಲ್ಲೆಯ ರೈತರು ತಾವು ಬೆಳೆದಿರುವ ಟೊಮೆಟೋ ಬೆಳೆಯನ್ನು ತೋಟದಲ್ಲಿಯೇ ನಾಶ ಮಾಡುತ್ತಿದ್ದಾರೆ.

Tomatoes ಪ್ರತೀ ಕಿಲೋಗೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಈಗ ಕೇವಲ 2 ರೂಪಾಯಿಗೆ ಕುಸಿದಿದೆ.

ರೈತರು ಲಕ್ಷದವರೆಗೆ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿ ಬೆಳೆ ಬೆಳೆದ ರೈತ ಕೊನೆಗೆ ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂತುಕೊಳ್ಳುವ ಸಮಯ ಬಂದಿದೆ.

ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದ್ದರೂ 800 ರಿಂದ 1 ಸಾವಿರ ಅಡಿಗಳಿಂದ ನೀರೆತ್ತಿ ಸಮೃದ್ಧ ಬೆಳೆ ತೆಗೆಯುವ ರೈತರಿಗೆ ಕೊನೆಗೆ ಅಸಲೂ ಸಿಗದೆ ಪರದಾಡುವಂತಾಗಿದೆ.

ರೈತ ದೇವಿದಾಸ್

ಸುಮಾರು 3 ಎಕರೆಯಷ್ಟೂ ಜಮೀನಿನಲ್ಲಿ ಟೋಮ್ಯಾಟೋ ಸಸಿಗಳನ್ನು ನಾಟಿಮಾಡಿದ್ದು, 2 ಲಕ್ಷಕ್ಕೂ ಹೆಚ್ಚು ಬಂಡವಾಳವನ್ನು ತೊಡಗಿಸಿದ್ದೆ ಆದರೆ ಇದರಿಂದ ನಮಗೆ ಬಿಡಿಗಾಸು ಸಿಗಲಿಲ್ಲ.

Tomato Rate Decreaseಯಿಂದ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ, ಆದ್ದರಿಂದ ತೋಟದಲ್ಲಿಯೇ ಗಿಡಗಳನ್ನು ನಾಶಮಾಡಿದರೆ ಗೊಬ್ಬರವಾದರು ಆಗುತ್ತದೆಂದು ಹೀಗೆ ಮಾಡುತ್ತಿದ್ದೇನೆಂದು ಎಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತ ದೇವಿದಾಸ್ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಕೆಲವು ಸಲ ರೈತರಿಗೆ ಟೊಮ್ಯಾಟೋ ಬೆಳೆಯು ಕೆಂಪು ಚಿನ್ನವಾಗಿ ಬದಲಾಗುತ್ತದೆ, ಆವಾಗ ರೈತರಿಗೆ ಜಾಕ್ ಪಾಟ್ ಹೊಡೆದಂತೆಯೇ. ಆದರೆ ಒಮ್ಮೊಮ್ಮೆ ದರದಲ್ಲಿ ಕುಸಿತವಾದರೆ ರೈತ  ಕುಸಿಯೋದು ಗ್ಯಾರಂಟಿ ಎಂದೇ ಹೇಳಬಹುದು.

ಆದರೆ ಈ ಬಾರಿ ಕೆಂಪು ಚಿನ್ನಕ್ಕೆ ಬೆಲೆಯಿಲ್ಲದಂತಾಗಿದ್ದು, ಇದರಿಂದ ರೈತರು ಬಹಳ ಕಂಗಾಲಾಗುವಂತೆ ಮಾಡಿದೆ. ಬೆಲೆ ಕುಸಿತದಿಂದ ರೋಸಿ ಹೋಗಿರುವ ರೈತರು ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ.

ಇನ್ನೂ ಈ ವರ್ಷ ಟೊಮ್ಯಾಟೋ ಬೆಳೆ ಉತ್ತಮವಾಗಿ ಬಂದರು ಕೂಡ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ್ದರಿಂದ ರೈತರಿಗೆ ಇದರಿಂದಾಗಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.

ಇನ್ನೂ ಪ್ರತಿಯೊಬ್ಬ ರೈತರು ಒಂದು ಎಕರೆಗೆ ಸಸಿಗಳನ್ನೂ ಖರೀದಿ, ಕೃಷಿ ಚಟುವಟಿಕೆ, ರಸಗೊಬ್ಬರ ಸೇರಿ ನಿರ್ವಹಣೆಗಾಗಿ ಸುಮಾರು 50 ಸಾವಿರದಷ್ಟು ಹಣವನ್ನು ಖರ್ಚು ಮಾಡಿದ್ದಾರೆ.

ಆದರೆ ದುರದೃಷ್ಟವತ್ ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಬಾಕ್ಸ್‌ ಟೊಮೆಟೋಗೆ 50 ರೂಪಾಯಿ ಬೆಲೆಯನ್ನು ಕೇಳುತ್ತಿದ್ದಾರೆ. ರೈತರು ಈ ಭಾಗದಲ್ಲಿ ಟೊಮ್ಯಾಟೋ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿದ್ದಾರೆ.

ಒಂದೇ ಸಲ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆ ಕಡಿಮೆಯಾಗಲು ಕಾರಣ ಅಥವಾ ಏನು ಎಂಬುದು ಅರ್ಥವಾಗುತ್ತಿಲ್ಲ, ಆದರೆ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕಡಿಮೆಯಿದೆ.

ಈ ಸಮಯದಲ್ಲಿ ಟೊಮೇಟೊ ಬೆಳೆ ಕಿತ್ತು, ಬೇರೆ ಬೆಳೆ ಬೆಳೆಸಲು ಮತ್ತಷ್ಟು ಹಣ ಖರ್ಚು ಮಾಡಿ ಬೆಳೆಯ ಬೇಕಾಗುತ್ತದೆ, ಇದರಿಂದ ರೈತರಿಗೆ ಬಾರಿ ಹೊರೆಯಾಗಿದೆ.

ಈ Tomato Prices ಕುಸಿತದ ಬಗ್ಗೆ ತೋಟಗಾರಿಕೆ ಅಧಿಕಾರಿ ವಿಶ್ವನಾಂಥ್ ಮಾತನಾಡಿದ್ದು, ಬೀದರ್ ಜಿಲ್ಲೆಯಲ್ಲಿ 672ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದಾರೆ.

ಕಳೆದ ವರ್ಷಕಿಂತ ಈ ವರ್ಷದಲ್ಲಿ 10% ಕ್ಕಿಂತ ಹೆಚ್ಚಾಗಿ ಟೊಮ್ಯಾಟೊ ಬೆಳೆಯನ್ನು ಬೆಳೆದಿದ್ದಾರೆ. ಕಳೆದ ವಾರದಲ್ಲಿ Tomato Rate Decrease ಕಂಡಿದೆ ಹಾಗೂ ಹೈದರಾಬಾದ್​ ಭಾಗದಲ್ಲಿ ಈಗ ಕಳೆದ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಬೆಲೆಯು ಏರುತ್ತಿದೆ.

ಹೀಗಾಗಿ ಎಲ್ಲಾ ರೈತರು ತಮ್ಮ ಬೆಳೆಯನ್ನು ನಾಶ ಪಡಿಸದೇ ಇಟ್ಟು ಕೊಂಡು ಕಾಪಾಡಿಕೊಳ್ಳಬೇಕೆಂದು ಹೇಳಿದ್ದಾರೆ.

ರೈತರು ಕೊರೊನಾ ಸಂಕಷ್ಟದಿಂದ ಹೊರ ಬರುವ ಮೊದಲೇ ಈಗ ಟೊಮ್ಯಾಟೋ ಬೆಲೆಯು ಕುಸಿತವಾಗಿ ರೈತರಿಗೆ ಸಂಕಷ್ಟ ಎದುರಾಗಿದ್ದು, ರೈತರ ಸಂಕಷ್ಟಗಳನ್ನು ಪದೇ ಪದೇ ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಪ್ರಯೋಜನವಾಗುತ್ತಿಲ್ಲ.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯು ಸಿಗದಿದ್ದಾಗ ಬೆಳೆಗಳನ್ನೇ ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರೂ ನಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುವುದಿಲ್ಲ ಎಂದು ತಿಳಿದ ಮೇಲೆ ರೈತರು ನಮ್ಮ ಬೆಳೆಗಳನ್ನು ತಾವೇ ನಾಶ ಮಾಡಿ ಜಮೀನಿಗೆ ಗೊಬ್ಬರ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ, ಜೀವನ ನಡೆಸಲೂ ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಧಾನಿ ಮೋದಿ & ಅಮಿತ್ ಶಾಹ್ ಮುಂದಿನ ವಾರ ರಾಜ್ಯಕ್ಕೆ ಭೇಟಿ!

https://jcs.skillindiajobs.com/

Social Share

Leave a Reply

Your email address will not be published. Required fields are marked *