ಬೀದರನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಪ್ರಾರಂಭ!-Bidar-Bangalore

Bidar To Bangalore

ಬೀದರ್

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ, ಬೀದರ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾ ಪ್ರಾರಂಭ ಮಾಡಿದೆ.

ಬೀದರ್-ಬೆಂಗಳೂರು ವಿಮಾನ ಸೇವೆ ಗುರುವಾರದಿಂದ ಪುನಃ ಆರಂಭವಾಗಿದೆ.

ಕೋವಿಡ್ ಪರಿಸ್ಥಿತಿ ಮತ್ತು ಇತರ ಕಾರಣಗಳಿಂದಾಗಿ ಬೀದರ್‌ನಿಂದ ವಿಮಾನ ಹಾರಾಟ ನಿಂತುಹೋಗಿತ್ತು.

24/2/2022ರ ಗುರುವಾರದಿಂದ ವಿಮಾನ ಸೇವೆ ಮತ್ತೆ ಪ್ರಾರಂಭ ಮಾಡಿದೆ, ಇದರಿಂದಾಗಿ ಜನರು ರಾಜಧಾನಿ ಬೆಂಗಳೂರಿಗೆ ಬರಲು ಸಹಾಯಕವಾಗಲಿದೆ.

ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಹಾಗೂ ರವಿವಾರ) ಬೀದರ್-ಬೆಂಗಳೂರು ವಿಮಾನವನ್ನು ಹಾರಾಟ ನಡೆಸಲಿದೆ.

ಪ್ರಯಾಣಿಕರು ಈ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.Bidar To Bangalore

ಬೀದರ್ ಸಂಸದ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕೋವಿಡ್ ಹಾಗೂ ಇತರ ಕಾರಣಗಳಿಂದ ಸ್ಥಗಿತವಾಗಿತ್ತು.

ಬೀದರ್‌ನಿಂದ ನಾಗರಿಕ ವಿಮಾನ ಸೇವೆ ನಿಂತಿದ್ದರಿಂದ ಕುರಿತು ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು.

ಪ್ರಯಾಣದ ಪಟ್ಟಿ

ವಾರದಲ್ಲಿ ಮೂರು ದಿನ ಟ್ರೂ ಜೆಟ್ ಸಂಸ್ಥೆ ಬೀದರ್-ಬೆಂಗಳೂರು ನಡುವೆ ವಿಮಾನ ಹಾರಾಟವನ್ನು ಮಾಡಲಿದೆ.

ವಿಮಾನ ಸಂಖ್ಯೆ 2ಟಿ 625 ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡಿ, ಮಧ್ಯಾಹ್ನ 1.10ಕ್ಕೆ ಬೀದರ್ ತಲುಪಲಿದೆ.

ವಿಮಾನ ಸಂಖ್ಯೆ 2ಟಿ 626 ಮಧ್ಯಾಹ್ನ 1.40ಕ್ಕೆ ಬೀದರ್‌ನಿಂದ ಹೊರಟು 3.25ಕ್ಕೆ ಬೆಂಗಳೂರು ತಲುಪುತ್ತದೆ.

ಉಭಯ ನಗರಗಳ ನಡುವಿನ ಪ್ರಯಾಣದ ಸಮಯ 1 ಗಂಟೆ 45 ನಿಮಿಷವಾಗಿದೆ.

ಮತ್ತೆ ಬೀದರ ಜಿಲ್ಲೆಯಿಂದ ಬೆಂಗಳೂರಗೆ ಹೋಗಲು ವಿಮಾನ ಪ್ರಯಾಣ ಮತ್ತೆ ಪ್ರಾರಂಭವಾಗಿದೆ, ನೀವು ಆರಾಮ ಮತ್ತು ಖುಷಿಯಿಂದ ಪ್ರಯಾಣ ಮಾಡಬಹುದು.

ವಿಮಾನ ಸಂಚಾರಕ್ಕೆ ಒತ್ತಾಯ 2021ರ ನವೆಂಬರ್‌ನಲ್ಲಿಯೇ ಬೀದರ್-ಬೆಂಗಳೂರು ವಿಮಾನ ಸಂಚಾರ ಪುನಃ ಆರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ. ಜಿ. ಶೆಟಕಾರ್ ಒತ್ತಾಯ ಮಾಡಿದರು.

ಕೇಂದ್ರ ವಿಮಾನಯಾನ ಸಚಿವರಿಗೆ ಈ ಕುರಿತು ಪತ್ರವನ್ನು ಬರೆದಿದ್ದು, ಉಡಾನ್ ಯೋಜನೆಯಡಿಯಲ್ಲಿ ಬೀದರ್‌ನಿಂದ ನಾಗರಿಕ ವಿಮಾನ ಸೇವೆ ಆರಂಭ ಮಾಡಲಾಗಿತ್ತು.Bidar To Bangalore

ಆದರೆ ಅದನ್ನು ಕಡಿಮೆ ಅವಧಿಯಲ್ಲಿಯೇ ನಿಲ್ಲಿಸಲಾಗಿತ್ತು ಎಂದು ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ..

2020ರ ಫೆಬ್ರವರಿ 7ರಂದು ಬೀದರ್ ಜಿಲ್ಲೆಯ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಿದರು.

ಈ ಮೂಲಕ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಜಿಲ್ಲೆಯ ಜನರ ದಶಕಗಳ ಕನಸು ನನಸಾಗಿತ್ತು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಬೀದರ್ ವಿಮಾನ ನಿಲ್ದಾಣ ಕಾಮಗಾರಿ ಚಾಲನೆ ಸಿಕ್ಕಿತ್ತು.

ಯಡಿಯೂರಪ್ಪ ಮುಖ್ಯಮಂತ್ರಿಯಾಗದಲೇ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತ್ತು, ಆದರೆ ಬಳಿಕ ಬೀದರ್-ಬೆಂಗಳೂರು ವಿಮಾನ ಹಾರಾಟ ನಿಂತಿತ್ತು.

2008ರಲ್ಲಿ ಬೀದರ್ ವಿಮಾನ ನಿಲ್ದಾಣ ಯೋಜನೆಯ ಚಾಲನೆ ಸಿಕ್ಕಿತ್ತು, ಆದರೆ ಹೈದರಾಬಾದ್ ವಿಮಾನ ನಿಲ್ದಾಣ 150 ಕಿ. ಮೀ. ದೂರದಲ್ಲಿ ಇದೆ ಎಂಬ ಕಾರಣಕ್ಕೆ ಯೋಜನೆಗೆ ಅನುಮತಿ ನೀಡುವುದು ಸ್ವಲ್ಪ ವಿಳಂಬವಾಯಿತು.Bidar To Bangalore

ಆದರೆ 2017ರಲ್ಲಿ ಜಾರಿಗೆ ಬಂದ ಉಡಾನ್ ಯೋಜನೆ ಅಡಿಯಲ್ಲಿ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಸಿಕ್ಕಿತು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಲ್ಲಿಕೆಯಾಗಿದ್ದ ಆಕ್ಷೇಪಣೆ ವಾಪಸ್ ಪಡೆದುಕೊಂಡರು.

ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್, ಖತರ್ನಾಕ್ ಗ್ಯಾಂಗ್ ನ ವಿವರ ಇಲ್ಲಿದೆ ನೋಡಿ.-v ravichandran kidnap

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.1075j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *