
v ravichandran kidnap
ಕ್ರೇಜಿ ಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್
ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ.
ರವಿಚಂದ್ರನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಮತ್ತೊಂದೆಡೆ ಕಿರುತರೆಯಲ್ಲೂ ರಿಯಾಲಿಟಿ ಶೋಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ರವಿಚಂದ್ರನ್ ಅವರ ಮಕ್ಕಳೂ ಕೂಡ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ, ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ವೊಂದು ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ.
ಈ ವಿಚಾರ ಕೇಳಿ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ, ಅದು ಶೂಟಿಂಗ್ ಸೆಟ್ನಿಂದಲೇ ಕ್ರೇಜಿಸ್ಟಾರ್ ಅವರನ್ನು ಕಿಡ್ನಾಪ್ ಮಾಡಲಾಗಿದೆ.
ಶೂಟಿಂಗ್ ಸೆಟ್ನಲ್ಲಿದ್ದ ರವಿಚಂದ್ರನ್ ಅವರ ಮೊಬೈಲ್ ಕಾಲ್ ವೊಂದು ಬರುತ್ತೆ, ಫೋನ್ನಲ್ಲಿ ಮಾತನಾಡುತ್ತಾ ಸೆಟ್ ಬಿಟ್ಟು ಮುಂದೆ ಬಂದಿದ್ದ ರವಿಚಂದ್ರನ್ ಅವರನ್ನು ಓಮ್ನಿ(Omni) ಕಾರಿನಲ್ಲಿ ಅಪಹರಣ ಮಾಡಿದ್ದಾರೆ.
ಅಲ್ಲದೇ ಈ ಖತರ್ನಾಕ್ ಗ್ಯಾಂಗ್ ರವಿಚಂದ್ರನ್ ಅವರ ಮನೆ ಬಳಿಯೇ ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದರಂತೆ.
ಇದನ್ನು ಕೇಳಿದ ಅಭಿಮಾನಿಗಳಿಗೆ ಶಾಕ್ ಆಗಿದೆ, ರವಿಚಂದ್ರನ್ ಅವರನ್ನೇ ಕಿಡ್ನಾಪ್ ಮಾಡಿದ್ದಾರೆ ಅಂದರೆ ಏನೋ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಲು ಕಾರಣವೇನು ?
ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನಾಪ್ ಆಗಿದ್ದಾರೆ ಅಂದಾಕ್ಷಣ ಗಾಬರಿಯಾಗಬೇಡಿ.
ಜೀ ಕನ್ನಡ ತಂಡ ಹೊಸ ಶೋಗೆ ಪ್ರೋಮೊ ಶೂಟ್ ಮಾಡಿ, ಆ ಪ್ರೋಮೊದ ಒಂದು ಭಾಗವದಲ್ಲಿ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಲಾಗಿದೆ.
ಇಲ್ಲಿ ರಿಯಲ್ ಲೈಫ್‌ನಲ್ಲಿ ಬ್ಯುಸಿಯಾಗಿರುವಂತೆ ರವಿಚಂದ್ರನ್‌ರನ್ನು ಮನೆಯಿಂದ ಶೂಟಿಂಗ್‌ಗೆ ಹೊರಡುವುದು, ಅವರನ್ನು ಕೆಲ ಅಪಹರಣ ಮಾಡುವವರು ಫಾಲೋ ಮಾಡುವುದು, ರವಿಚಂದ್ರನ್ ಶೂಟಿಂಗ್ ಸ್ಪಾಟ್‌ಗೆ ತಲುಪಿ, ಅಲ್ಲಿ ಅಪಹರಣಕ್ಕೆ ಒಳಗಾಗುವುವಂತೆ ಪ್ರೋಮೊ ಶೂಟ್ ಮಾಡಲಾಗಿದೆ.
ಇದು ಯಾವ ಶೋ, ಏನಿದು ಕಥೆ ಎಂಬುಂದನ್ನು ಜೀ ಕನ್ನಡ ಇನ್ನು ತಿಳಿಸಿಲ್ಲ ಕೇವಲ ಈ ಪ್ರೋಮೋ ತೋರಿಸಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಬರಿ ಪಟ್ಟುಕೊಂಡಿದ್ದಾರೆ, ನಂತರ ಇದು ಅಸಲಿ ಅಲ್ಲ ನಕಲಿ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟಿದ್ದಾರೆ.
ಯಾವ ಶೋದ ಪ್ರೋಮೊ ಇರಬಹುದು ಎಂದು ವೀಕ್ಷಕರು ತಲೆಗೆ ಹುಳಬಿಟ್ಟುಕೊಂಡಿದ್ದಾರೆ, ಅಲ್ಲದೇ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿ ಕೋಣೆಯಲ್ಲಿ ಮುಖ ಮುಚ್ಚಿ ಕೂರಿಸಿರುವ ದೃಶ್ಯ ಕೂಡ ಈ ಪ್ರೋಮೊದಲ್ಲಿದೆ.
ಹೀಗಾಗಿ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದೆ, ಯಾವ ಶೋ ಗಾಗಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಶೀಘ್ರದಲ್ಲೇ ಜೀಕನ್ನಡ ವಾಹಿನಿಯಲ್ಲಿ ಇದು ಯಾವ ಶೋನದ್ದು ಪ್ರೋಮೊ ಎಂದು ರಿವೀಲ್ ಮಾಡಲಿದೆ.
ಹಿಜಾಬ್ ಕುರಿತು ಸಿದ್ರಾಮಯ್ಯ ಬಿಜೆಪಿಯ ಮೇಲೆ ವಾಗ್ದಾಳಿ ?-sidramaiah-news