
Pre Wedding Shoot
ಪ್ರೀ ವೆಡ್ಡಿಂಗ್ ಫೋಟೋಶೂಟ್
ಪ್ರೀ ವೆಡ್ಡಿಂಗ್ ಫೋಟೋಶೂಟ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ, ವಿಭಿನ್ನ ಕಲ್ಪನೆಗಳ ಮೂಲಕ, ಹೊಸ ಹೊಸ ಜಾಗಗಳಿಗೆ ತೆರಳಿ ಫೋಟೋಶೂಟ್ ಮಾಡುತಿದ್ದರೆ.
ಇವಾಗಂತೂ ಫೋಟೋಗ್ರಾಫರ್ಗಳೂ ಕೂಡ ಹೊಸ ಹೊಸ ರೀತಿಯ ಕಾನ್ಸೆಪ್ಟ್ಗಳನ್ನು ಇಟ್ಟುಕೊಂಡು ಜೋಡಿಗಳ ಪೋಟೋಶೂಟ್ ಮಾಡಿಸುತ್ತಾರೆ.Pre Wedding Shoot
ಇದೀಗ ತಮಿಳುನಾಡಿನ ದೇವಸ್ಥಾನದ ಎದುರು ನಡೆಸಿದ ಜೋಡಿಯೊಂದರ ಪ್ರೀ ವೆಡ್ಡಿಂಗ್ ಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟ್ವಿಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ ವಿಡಿಯೋ ನೋಡಿ ನೆಟ್ಟಿಗರು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಹುಡುಗ ತಲೆ ಕೆಳಗೆ ಮಾಡಿ ನಿಂತಿರುತ್ತಾನೆ, ಯುವತಿ ಭರತನಾಟ್ಯದ ಸ್ಟೆಪ್ನಂತೆ ಪೋಸ್ ನೀಡುತ್ತಾಳೆ.
ಮುಂದುವರೆದ ದೃಶ್ಯಗಳಲ್ಲಿ ಹುಡುಗನ ಕುತ್ತಿಗೆಯಲ್ಲಿದ ಹಾರವನ್ನು ಯುವತಿ ಹಿಡಿದೆಳೆಯುವಂತೆ ಕಾಣಿಸಿದೆ.
ತದನಂತರ ಸ್ನೇಹಿತರೊಂದಿಗೆ ಹುಡುಗ ಯುವತಿಯನ್ನು ಎತ್ತಿದ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಬಗ್ಗೆ
ವಿಡಿಯೋದಲ್ಲಿ ಯುವತಿ ಕೆಂಪು ಬಣ್ಣದ ಸೀರೆ, ಒಡವೆ ಧರಿಸಿದ್ದು, ಹುಡುಗ ಬಿಳಿ ಪಂಚೆ ಮತ್ತು ಶರ್ಟ್ ಉಡುಪು ಧರಿಸಿದ್ದಾನೆ.
ಜೊತೆಗೆ ಇಬ್ಬರೂ ಹಾರವನ್ನು ಹಾಕಿಕೊಂಡಿದ್ದು, ಪಕ್ಕಾ ಮದುವೆಗೆ ರೆಡಿಯಾದ ಜೋಡಿಯಂತೆ ಸಮವಸ್ತ್ರ ಧರಿಸಿದ್ದಾರೆ.
ವಿಡಿಯೋ ನೋಡಿ ಜನರು, ದೇವಸ್ಥಾನದ ಮುಂದೆ ಈ ರೀತಿ ಫೋಟೊಶೂಟ್ ಮಾಡಲು ಅವಕಾಶ ನೀಡಿದ್ದಾರಾ ಎಂದು ಪ್ರಶ್ನಿಸಿದರೆ.
ಫೋಟೋಗೆ ಪೋಸ್ ನೀಡಲಿ ತಲೆಕೆಳಗಾಗಿ ನಿಂತ ಹುಡುಗನ ಪರಿಸ್ಥಿತಿಯನ್ನು ನೋಡಿ ಪಾಪ ಎಂದಿದ್ದಾರೆ.
ಸದ್ಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು,ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.Pre Wedding Shoot
ಜನರು ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದು ಸಾಮಾನ್ಯ ಸಂಗತಿಯಾಗಿದೆ.
ವಿಡಿಯೋ ಮಾಡಿ ಪೋಸ್ಟ್ ಮಾಡುವುದು ಸಹಜವಾದರೂ ಇದಕ್ಕಾಗಿಯೇ ಹರ ಸಾಹಸ ಮಾಡುತ್ತಿದ್ದಾರೆ.
ತಾವು ಏನು ಮಾಡಲು ಸಿದ್ಧವೆಂದು ಎಲ್ಲ ತರಹದ ವಿಡಿಯೋ ಪೋಸ್ಟ್ ಜೊತೆಗೆ ಜನರನ್ನು ಆಶ್ಚರ್ಯಗೊಳಿಸುತಿದ್ದರೆ.
ಆದರೆ ಇಲ್ಲೊಬ್ಬ ಭೂಪ ಮದುವೆಯ ಗೆಟಪಿನನಲ್ಲಿ ಹುಡುಗಿಯ ಜೊತೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ.
ಇದ್ರಲ್ಲಿ ಹುಡುಗ ತಲೆ ಕೆಳಗೆ ಮಾಡಿ ನಿಂತಿದ್ದು, ಎಲ್ಲಾರಿಗೂ ಆಶ್ಚರ್ಯಗೊಳಿಸಿದ್ದಾನೆ.
ಆದರೆ ಹುಡುಗಿಯು ಭಾರತ ನಾಟ್ಯ ರೂಪದ ಭಂಗಿಯಲ್ಲಿ ನಿಂತಿದ್ದಾಳೆ,ಹಾಗೂ ಇಬ್ಬರು ಕೊರಳಲ್ಲಿ ಮಾಲೆಗಳನ್ನು ಹಾಕಿಕೊಂಡಿದ್ದಾರೆ.
ನಂತರ ಇಬ್ಬರು ದೇವಸ್ಥಾನದ ಒಳಗೆ ಬರುತ್ತಾರೆ, ಹೀಗೆ ದೇವಸ್ಥಾನದಲ್ಲಿ ವಿಡಿಯೋ ಮಾಡಲು ಅವಕಾಶ ಕೊಟ್ಟಿದ್ದು.
ಏನೇ ಮಾಡಿದರು ಜನರು ತಮ್ಮ ಜೀವಕ್ಕೆ ಹಾನಿಯಾಗದಂತೆ ವಿಡಿಯೋ ಮಾಡಬೇಕು, ಇಲ್ಲದಿದ್ದರೆ ಜೀವಕ್ಕೆ ಹಾನಿ ಉಂಟುಮಾಡುತ್ತದೆ.Pre Wedding Shoot
ವೈರಲ್ ಆಗುವ ಗೋಸ್ಕರ ಎಲ್ಲ ತರಹದ ವಿಡಿಯೋ ಮಾಡುತ್ತಿದ್ದಾರೆ, ತೊಂದರೆಗೆ ಸಿಲುಕಿಕೊಳ್ಳದೆ ಮಾಡಬೇಕು.
ಪಾಪ್ಯುಲರ್ ಗೋಸ್ಕರ ಏನೇ ಮಾಡಿದರು ಬಹಳ ಜಾಗ್ರತೆಯಿಂದ ಮಾಡಬೇಕು, ಸ್ವಲ್ಪ ಎಡವಟ್ಟಾದರೂ ಪ್ರಾಣಕ್ಕೆ ಕುತ್ತು ಬರುತ್ತದೆ.