ಪಾಕ್ ನಲ್ಲಿ ಮತ್ತೊಮ್ಮೆ ರಾರಾಜಿಸಿದ ವಿರಾಟ್ ಕೊಹ್ಲಿಯ ಕ್ರೇಜ್!

Virat Kohli Craze In Pakistan

ವಿರಾಟ್ ಕೊಹ್ಲಿ

ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ 2 ವರ್ಷಗಳೇ ಕಳೆದಿವೆ, ಕೊನೆಯ ಬಾರಿ ಕಿಂಗ್ ಕೊಹ್ಲಿಯ ಬ್ಯಾಟ್​ನಿಂದ ಸೆಂಚುರಿ ಮೂಡಿಬಂದಿದ್ದು 2019 ರಲ್ಲಿ ಅಷ್ಟೇ.

ಈಡನ್ ಗಾರ್ಡನ್ ಮೈದಾನದಲ್ಲಿ ನಡೆದಿದ್ದ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿ ಶತಕ ಹೊಡೆದಿದ್ದರು.

ಇದಾದ ಬಳಿಕ 72 ಇನಿಂಗ್ಸ್ ಆಡಿರುವ ಕೊಹ್ಲಿ ಒಂದೇ ಒಂದು ಟೆಸ್ಟ್ ಶತಕ ಸಿಡಿಸಿಲ್ಲ ಎಂಬುದೇ ಅಚ್ಚರಿಯಾಗಿದೆ.

ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ 100 ಟೆಸ್ಟ್​ಗಳನ್ನು ಆಡಿದರು.virat kohli

ಈ ಐತಿಹಾಸಿಕ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್​ನಿಂದ ಶತಕ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯು ಕಾದಿತ್ತು.

ಅದು ಕೇವಲ ಭಾರತದಲ್ಲಿನ ಅಭಿಮಾನಿಗಳಿಗೆ ಮಾತ್ರವಲ್ಲ, ಇತ್ತ ಲಂಕಾ ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯಾ ಎಸೆತದಲ್ಲಿ ಕೊಹ್ಲಿ ಔಟಾಗುತ್ತಿದ್ದಂತೆ ಪಾಕಿಸ್ತಾನದ ಅಭಿಮಾನಿಗಳು ಕೂಡ ನಿರಾಸೆಯಾಗಿದ್ದರೆ.

ಹೀಗಾಗಿಯೇ ಪಾಕಿಸ್ತಾನ್-ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಪೋಸ್ಟರ್​ಗಳು ರಾರಾಜಿಸಿದ್ದವು.

ಕೊಹ್ಲಿಯ ಕ್ರೇಜು

ಹೌದು, ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಪೋಸ್ಟರ್ ಮೂಲಕ ಗಮನವನ್ನು ಸೆಳೆದಿದ್ದರು.Virat Kohli Craze In Pakistan

ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಯೋರ್ವ “ನಿಮ್ಮ 71ನೇ ಶತಕ ಪಾಕಿಸ್ತಾನದಲ್ಲಿ ಬಾರಿಸಬೇಕು” ಎಂದು ಪೋಸ್ಟರ್ ಹಿಡಿದು ನಿಂತಿದ್ದಾನೆ.

ಇದೀಗ ಕೊಹ್ಲಿಯ ಪಾಕ್ ಅಭಿಮಾನಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.

ಮತ್ತೊಂದು ಪೋಸ್ಟರ್​​ನಲ್ಲಿ ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್​ 2022 ರಲ್ಲಿ ರೋಹಿತ್ ಶರ್ಮಾ ವರ್ಸಸ್ ಶಾಹೀನ್ ಅಫ್ರಿದಿ ಎದುರಾಳಿಯಾಗಲಿದೆ ಎಂದು ಬರೆಯಲಾಗಿತ್ತು.virat kohli pakistan

ಅಂದಹಾಗೆ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಪೋಸ್ಟರ್​ಗಳು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲೂ ಕೊಹ್ಲಿಯ ಪೋಸ್ಟರ್​ಗಳು ರಾರಾಜಿಸಿದ್ದವು.

ಪಿಎಸ್​ಎಲ್​ ಟೂರ್ನಿಯಲ್ಲಿನ ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಧ್ಯ ಪಂದ್ಯದ ವೇಳೆ ಕೊಹ್ಲಿಯ ಪೋಸ್ಟರ್​ಗಳು ಕಾಣಿಸಿಕೊಂಡಿದ್ದವು. ಮುಲ್ತಾನ್‌ನ ಬ್ಯಾಟ್ಸ್‌ಮನ್‌ಗಳಾದ ಶಾನ್ ಮಸೂದ್ ಮತ್ತು ಮೊಹಮ್ಮದ್ ರಿಜ್ವಾನ್ ಅರ್ಧಶತಕಗಳೊಂದಿಗೆ ಕ್ರೀಸ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆಯುತ್ತಿದ್ದರು.

ಆ ವೇಳೆ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟ್​ ಅಭಿಮಾನಿಗಳು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪೋಸ್ಟರ್ ಗಳನ್ನೂ ತೋರಿಸಿ ಸಂಭ್ರಮಸಿದ್ದಾರೆ.

ಅಷ್ಟೇ ಅಲ್ಲದೆ ಈ ಪೋಸ್ಟರ್‌ನಲ್ಲಿ ಅಭಿಮಾನಿಯೊಬ್ಬ ಪಾಕಿಸ್ತಾನದಲ್ಲಿ ನಿಮ್ಮ ಶತಕವನ್ನು ನೋಡಬೇಕೆಂದು ಎಂದು ಬರೆದುಕೊಂಡಿದ್ದಾನೆ.

ಇದೀಗ ಪಾಕಿಸ್ತಾನ್-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದ ಸಮಯದಲ್ಲೂ ವಿರಾಟ್ ಕೊಹ್ಲಿಯ ಪೋಸ್ಟರ್​ಗಳು ರಾರಾಜಿಸಿವೆ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಭಾರತೀಯ ಅಭಿಮಾನಿಗಳು ಬಯಸುತ್ತಿರುವಂತೆ ಪಾಕ್ ಫ್ಯಾನ್ಸ್​ ಕೂಡ 71ನೇ ಶತಕಕ್ಕಾಗಿ ತುಂಬಾ ಕಾತುರದಿಂದ ಕಾಯುತ್ತಿರುವುದಂತು ಸ್ಪಷ್ಟ.Virat Kohli Craze In Pakistan

ಅದರಲ್ಲೂ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿರುವ ಆ ಒಂದು ಶತಕಕ್ಕೆ ಮಾರ್ಚ್ 12 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆಯಾ ಕಾದು ವೀಕ್ಷಣೆ ಮಾಡಬೇಕಿದೆ.

“ಅಂತಾರಾಷ್ಟ್ರೀಯ ಮಹಿಳಾ ದಿನ” ಇದರ ಮಹತ್ವವೇನು!

https://jcs.skillindiajobs.com/

Social Share

Leave a Reply

Your email address will not be published. Required fields are marked *