Vishnu Solanki
ವಿಷ್ಣು ಸೊಳಂಕಿ
ಕೆಲ ದಿನಗಳ ಹಿಂದಷ್ಟೇ ತನ್ನ ಮಗಳನ್ನು ಕಳೆದುಕೊಂಡಿದ್ದ ಬರೋಡಾ ಕ್ರಿಕೆಟರ್ ವಿಷ್ಣು ಸೋಲಂಕಿ ಚಂಡೀಗಡ ವಿರುದ್ಧದ ರಣಜಿ ಟ್ರೋಫಿ 2021-22 ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.
ವಿಷ್ಣುವಿನ ಮಗು ಜನಿಸಿ ಕೆಲದಿನಗಳಲ್ಲೇ ಮೃತಪಟ್ಟಿದೆ, ಆದ್ರೆ ಅಂತ್ಯಕ್ರಿಯೆ ಮುಗಿಸಿ ನೋವಿನಲ್ಲಿ ತಂಡ ಸೇರಿಕೊಂಡ ವಿಷ್ಣು ತಂಡದ ಪರ ಅಮೋಘ ಅಜೇಯ ಶತಕ ಕಲೆಹಾಕಿದ್ದಾರೆ.
ಮಗವಿನ ಅಂತ್ಯಕ್ರಿಯೆ ಮುಗಿಸಿಕೊಂಡು ನೇರವಾಗಿ ಬರೋಡಾ ತಂಡವನ್ನ ಸೇರಿಕೊಂಡ ವಿಷ್ಣು ಸೋಲಂಕಿ ತಂಡದ ಪರ ಅದ್ಭುತ ಆಟ ಆಡಿದ್ದಾರೆ.
ಭುವನೇಶ್ವರದ ವಿಕಾಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಗ್ರೂಪ್ ಬಿ ಹಂತದಲ್ಲಿ ಬರೋಡಾ ಹಾಗೂ ಚಂಡೀಗಡ ಮುಖಾಮುಖಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚಂಡೀಗಡ ಮೊದಲ ದಿನದ ಆಟದಲ್ಲೇ ಕೇವಲ 168 ರನ್‌ಗಳಿಗೆ ಆಲೌಟ್ ಆಗಿದ್ದಾರೆ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬರೋಡಾ ಎರಡನೇ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 398 ರನ್ ಮಾಡಿದ್ದೂ, 230 ರನ್‌ಗಳ ಮುನ್ನಡೆ ಸಾಧಿಸಿದೆ.Vishnu Solanki
103 ರನ್ ಕಲೆಹಾಕಿದ ವಿಷ್ಣು ಸೋಲಂಕಿ ಎರಡನೇ ದಿನದ ಆಟದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದಾರೆ.
ವಿಷ್ಣು ಸೋಲಂಕಿ 161 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕುವ ಮೂಲಕ ಬರೋಡಾ ತಂಡದ ಉತ್ತಮ ಲೀಡ್ ಗಳಿಸುವಂತೆ ಆಧಾರವಾಗಿದ್ದರೆ.
63.98 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಈತ 12 ಬೌಂಡರಿಗಳನ್ನ ಸಹ ಬಾರಿಸಿದ್ದಾರೆ.
ದಿನದಾಟದಲ್ಲಿ ಅಜೇಯರಾಗಿ ಉಳಿದ ಸೋಲಂಕಿ ಅವರು ತನ್ನ ಮಗುವನ್ನ ಕಳೆದುಕೊಂಡ ನೋವಿನಲ್ಲೂ ಧೈರ್ಯದಿಂದ ಚಂಡೀಗಡ ಬೌಲರ್‌ಗಳನ್ನ ಎದುರಿಸಿ ದಿಟ್ಟತನವಾಗಿ ಆಟವಾಡಿದರು.
ಸೌರಾಷ್ಟ್ರದ ವಿಕೆಟ್‌ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್ ಸೋಲಂಕಿ ದಿಟ್ಟತನ ಹಾಗೂ ಧೈರ್ಯವನ್ನ ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ಶೆಲ್ಡನ್ ಜಾಕ್ಸನ್
ಶೆಲ್ಡನ್ ಜಾಕ್ಸನ್ ಅಬ್ಬ ಎಂತಹ ಆಟಗಾರ, ನನಗೆ ತಿಳಿದಿರುವ ಹಾಗೆ ಅತ್ಯಂತ ಕಠಿಣ ಆಟಗಾರ ಈತ.
“ವಿಷ್ಣು ಹಾಗೂ ಅವರ ಕುಟುಂಬಕ್ಕೆ ಒಂದು ದೊಡ್ಡ ನಮಸ್ಕಾರ ಇದು ಸುಲಭವಲ್ಲ, ನಿಮಗೆ ಇನ್ನೂ ನೂರಾರು ಮತ್ತು ಹೆಚ್ಚಿನ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ”
ಸಿಇಒ ಶಿಶಿರ್ ಹತ್ತಂಗಡಿ
ವಿಷ್ಣು ಬದ್ದತೆಯನ್ನ ಮೆಚ್ಚಿನ ಬರೋಡಾ, ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಸಿಇಒ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಶಿಶಿರ್ ಹತ್ತಂಗಡಿ ಇವರು ಕೂಡ 29 ವರ್ಷದ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
“ಕೆಲವು ದಿನಗಳ ಹಿಂದೆ ತಮ್ಮ ನವಜಾತ ಮಗಳನ್ನು ಕಳೆದುಕೊಂಡ ಕ್ರಿಕೆಟಿಗನ ಕಥೆ, ಅವನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು , ತಂಡಕ್ಕೆ ಹಿಂದಿರುಗಿ ಶತಕ ಬಾರಿಸಿದ್ದಾರೆ.Vishnu Solanki
ಅವರ ಹೆಸರು ಸಾಮಾಜಿಕ ಮಾಧ್ಯಮದಲ್ಲಿ “ಲೈಕ್” ಮಾಡದಿರಬಹುದು, ಆದರೆ ನನಗೆ #vishnoosolanki ನಿಜ ಜೀವನದ ಉತ್ತಮ ನಾಯಕ.
ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, ಫೆಬ್ರವರಿ 11 ರ ಮಧ್ಯರಾತ್ರಿಯ ನಂತರ ಸೋಲಂಕಿ ಅವರು ತಮ್ಮ ಮಗಳ ಜನನದ ಸುದ್ದಿಯನ್ನು ತಿಳಿದುಕೊಂಡಿದ್ದರು.
ಆದರೆ 24 ಗಂಟೆಗಳ ಒಳಗೆ, ನವಜಾತ ಶಿಶು ಇನ್ನಿಲ್ಲ ಎಂದು ಅವರಿಗೆ ತಿಳಿಸಲಾಯಿತು.
ತಮ್ಮ ರಾಜ್ಯ ತಂಡದೊಂದಿಗೆ ಭುವನೇಶ್ವರದಲ್ಲಿದ್ದ ಸೋಲಂಕಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತೆ ವಡೋದರಾಕ್ಕೆ ಬಂದರು.
ಆದಾಗ್ಯೂ, ಮೂರು ದಿನಗಳಲ್ಲಿ ಆತ ವಿಮಾನ ಹತ್ತಿ ಭುವನೇಶ್ವರ್‌ಕ್ಕೆ ಹಿಂದಿರುಗಿ ತಮ್ಮ ರಾಜ್ಯ ತಂಡವನ್ನು ಸೇರಿ ಆಟವಾಡಿದರು.