ಕಲ್ಲಂಗಡಿ ಬೀಜದ ಉಪಯೋಗಗಳೇನು!-Watermelon Seeds

Water Melon

Watermelon Seeds

ಕಲ್ಲಗಂಡಿ ಹಣ್ಣು

ಬೇಸಿಗೆ ಬಂತೆಂದರೆ ನೀರಿನ ಅಂಶ ಹೆಚ್ಚು ಹೊಂದಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಸಹಜ. ಬೇಸಿಗೆಯಲ್ಲಿ ವಿಶೇಷವಾಗಿ ಮಾವು, ಲಿಚ್ಚಿ ಹಾಗೂ ಕಲ್ಲಂಗಡಿ ಮುಂತಾದ ಹಣ್ಣುಗಳು ದೊರೆಯುತ್ತವೆ.Watermelon

ಕಲ್ಲಂಗಡಿ 92-93 ಪ್ರತಿಶತದಷ್ಟು ನೀರನ್ನು ಹೊಂದಿರುವುದರಿಂದ ಕಲ್ಲಂಗಡಿ ನಿಮ್ಮನ್ನು ಶಾಖದ ಹೊಡೆತದಿಂದ ಹಾಗೂ ಅನಾರೋಗ್ಯದಿಂದ ರಕ್ಷಣೆ ಮಾಡುತ್ತದೆ. ಇದಲ್ಲದೆ, ವಿಟಮಿನ್ ಸಿ, ವಿಟಮಿನ್ ಎ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಸಹ ಇದರಲ್ಲಿ ಇರುತ್ತವೆ.

ಹೊರಗಡೆ ಹೋದರೆ ಉರಿ ಬಿಸಿಲು, ದೇಹ ತಂಪಾಗಲು ಏನಾದರೂ ಕುಡಿಬೇಕು ಅಥವಾ ತಿನ್ನಬೇಕು ಅಂತ ಅನಿಸುವುದು ಸಹಜ. ಬೇಸಿಗೆಯಲ್ಲಿ ಜನ ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿ  ಕೂಡಾ ಒಂದಾಗಿದೆ.Seeds

ಕಲ್ಲಂಗಡಿ ಜ್ಯೂಸ್ ಮಾಡಿ ಕುಡಿದರೆ ದೇಹ ತಣ್ಣಗಾಗುತ್ತದೆ, ಅದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಅದೇನೇಯಿರಲಿ. ಅದೇನಂದರೆ, ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ಬೀಜವನ್ನು ಎಸೆಯುವುದು.

ಬೀಜದಲ್ಲಿ ಆರೋಗ್ಯ ಪ್ರಯೋಜನಗಳಿವೆ. ಹೀಗಾಗಿ ಬೀಜ ಅಗತ್ಯವಿಲ್ಲ ಎಂದು ಎಸೆಯುವ ಮುನ್ನಾ ಅದರ ಪ್ರಯೋಜನಗಳನ್ನ ತಿಳಿದುಕೊಳ್ಳಬೇಕು.

ಕಲ್ಲಂಗಡಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು, ಆದರೆ ಹಣ್ಣು ತಿಂದ ಬಳಿಕ ನೀವು ಯಾವಾಗಲೂ ಡಸ್ಟ್‌ಬಿನ್‌ನಲ್ಲಿ ಎಸೆಯುವ ಕಲ್ಲಂಗಡಿ ಬೀಜಗಳ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬೇಕು…

ಬೀಜಗಳ ಉಪಯೋಗಗಳ ಬಗ್ಗೆ ತಿಳಿದರೆ ನೀವು ಎಂದಿಗೂ ಅದನ್ನು ಡಸ್ಟ್‌ಬಿನ್‌ನಲ್ಲಿ ಎಸೆಯುವುದಿಲ್ಲ, ಏಕೆಂದರೆ ಕಲ್ಲಂಗಡಿಯ ಸಣ್ಣ ಕಪ್ಪು ಬಣ್ಣದ ಬೀಜಗಳ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.Watermelon Seeds

ಕಲ್ಲಂಗಡಿ ಬೀಜಗಳಲ್ಲಿ ಕ್ಯಾಲೊರಿ ಇರುವುದಿಲ್ಲ ಹಾಗೂ ಸತು, ಕಬ್ಬಿಣ, ಫೋಲೇಟ್, ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಇರುತ್ತವೆ.

ಅದಕ್ಕಾಗಿ, ಕಲ್ಲಂಗಡಿ ಬೀಜಗಳನ್ನು ಒಣಗಿಸಿ ನಂತರ ಅವುಗಳನ್ನು ಲಘುವಾಗಿ ಹುರಿಯಿರಿ ಮತ್ತು ಲಘು ಆಹಾರವಾಗಿ ತಿನ್ನಬಹುದು.Used

ಕಲ್ಲಂಗಡಿ ಬೀಜದ ಉಪಯೋಗಗಳು

01. ದೇಹದ ಮೂಳೆಗಳನ್ನ ಬಲಪಡಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಹಾಗೂ ಪೊಟ್ಯಾಸಿಯಂನಂತಹ ಖನಿಜ ಅಂಶ ಹೆಚ್ಚಿದೆ, ಹೀಗಾಗಿ ಇದು ದೇಹದ ಮೂಳೆಗಳಿಗೆ ತುಂಬಾ ಒಳ್ಳೆಯದು.Watermelon Seeds Benefits

ಒಂದು ದಿನಕ್ಕೆ 5, 6 ಒಣಗಿದ ಕಲ್ಲಂಗಡಿ ಬೀಜಗಳನ್ನು ತಿನ್ನಬೇಕು.Seeds Benefits

02. ವೀರ್ಯ ಗುಣಮಟ್ಟ ಸುಧಾರಣೆ

ಬಂಜೆತನಕ್ಕೆ ಕೇವಲ ಹೆಣ್ಣು ಕಾರಣವಾಗಲ್ಲ. ಗಂಡು ಕೂಡ ಇದಕ್ಕೆ ಕಾರಣ, ಗಂಡಿನಲ್ಲಿ ವೀರ್ಯದ ಕೊರತೆ ಉಂಟಾದಾಗ ಭವಿಷ್ಯದಲ್ಲಿ ಮಗು ಪಡೆಯಲು ಸಾಧ್ಯವಾಗದೇ ಇರಬಹುದು. ಕಲ್ಲಂಗಡಿ ಹಣ್ಣಿನ ಹೆಚ್ಚಿನ ಪ್ರಮಾಣದ ಸತುವನ್ನು ಹೊಂದಿರುತ್ತದೆ.Benefits

03. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ

ಈ ಕಲ್ಲಂಗಡಿ ಬೀಜ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳಿಂದ ಕೂಡಿದ್ದು, ಚರ್ಮವನ್ನು ಶುದ್ಧೀಕರಿಸಲು ಸಹಾಯವನ್ನು ಮಾಡುತ್ತದೆ.

ಅದರ ಜೊತೆಗೆ ವಿವಿಧ ಸೌಂದರ್ಯ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ, ಕಲ್ಲಂಗಡಿ ಬೀಜಗಳು ಮೆಗ್ನೀಸಿಯಮ್ ಅನ್ನು ಒಳಗೊಂಡಿದ್ದು, ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯ ಮಾಡುತ್ತದೆ.watermelon seed benefits

04. ತಲೆ ಕೂದಲಿಗೆ ಉತ್ತಮ

ಪ್ರತಿಯೊಬ್ಬರೂ ಆರೋಗ್ಯಕರ ತಲೆ ಕೂದಲನ್ನು ಇಷ್ಟಪಡುತ್ತಾರೆ, ಕಲ್ಲಂಗಡಿ ಬೀಜಗಳಲ್ಲಿ ಇರುವ ಪ್ರೋಟೀನ್ಗಳು, ಕಬ್ಬಿಣ, ಮೆಗ್ನೀಸಿಯಂ, ಸತು ಹಾಗೂ ತಾಮ್ರ ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದರ ಜೊತೆಗೆ ಕೂದಲನ್ನು ಬಲಪಡಿಸುತ್ತದೆ, ಹಾಗೆಯೇ ಕಲ್ಲಂಗಡಿ ಬೀಜದಲ್ಲಿರುವ ಮ್ಯಾಂಗನೀಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ.Watermelon seeds nutrition

05. ರೋಗ ನಿರೋಧಕ ಶಕ್ತಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು, ಆಗ ಮಾತ್ರ ಕಾಯಿಲೆಗಳ ವಿರುದ್ಧ ನಾವು ಹೋರಾಡಬಹುದು. ಕೊರೊನಾ ಹೆಚ್ಚಾದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಜನ ಪರದಾಡುತ್ತಿದ್ದರು, ಕಲ್ಲಂಗಡಿ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಅಡಗಿದೆ. ಅದಕ್ಕಾಗಿ ಕಲ್ಲಂಗಡಿ ಬೀಜಗಳನ್ನು ಸೇವಿಸಿ.Healthy

ಕಲ್ಲಂಗಡಿ ಬೀಜಗಳನ್ನು ತಿನ್ನುವುದು ಹೇಗೆ?

ನೀವು ಕಲ್ಲಂಗಡಿ ಬೀಜಗಳನ್ನು ಒಣಗಿಸಿ ಅದನ್ನು ಸೇವಿಸಬಹುದು, ಬಾಣಲಿಯಲ್ಲಿ ಕೂಡಾ ಹುರಿದು ತಿನ್ನಬಹುದು. ಹೇಗೆ ತಿಂದರೂ ಇದು ತುಂಬಾ ಟೇಸ್ಟಿಯಾಗಿರುತ್ತದೆ.Watermelon’s

ಈ ರಾಶಿಯವರು ನಿಮ್ಮ ಆರೋಗ್ಯದ ಜಾಗೃತೆ ವಹಿಸಿ!-Horoscope

https://www.google.com/search?q=skillindiajobs.com&oq=s&aqs=chrome.1.69i60j69i59l2j69i57j69i59j69i60l3.7829j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *