ಉಕ್ರೇನ್ ರಷ್ಯಾ ದಾಳಿಗೂ, ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಕಾರಣವೇನು?

Petrol Price In India

ನವದೆಹಲಿ

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 14ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಯುದ್ಧದ ಎಫೆಕ್ಟ್ ಮಾತ್ರ ಇತರ ದೇಶಗಳ ಮೇಲೆ ತಟ್ಟಿದೆ.

ಅದರಲ್ಲೂ ರಷ್ಯಾ ಉಕ್ರೇನ್ ದಾಳಿಯ ಪ್ರಭಾವದಿಂದ ಭಾರತದಲ್ಲಿ ತೈಲ ದರ ಭಾರೀ ಏರಿಕೆಯಾಗುತ್ತಿದೆ.

ಭಾರತದಲ್ಲಿ ತೈಲ ದರದಲ್ಲಿ ಏರಿಕೆ ಪ್ರಮುಖ ಕಾರಣವೇನು ಎಂಬುದನ್ನು ಗಮನಿಸಿದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ರಫ್ತು ಮಾಡುವ ಮೂರನೇ ಅತಿದೊಡ್ಡ ದೇಶ ರಷ್ಯಾ ದೇಶವಾಗಿದೆ.

ಹಾಗಾಗಿ ಭಾರತದಲ್ಲಿ ತೈಲ ದರ ಏರಿಕೆಯಾಗಲು ಮುಖಮಾಡಿದೆ, ಅಮೆರಿಕ ಮತ್ತು ಸೌದಿ ಹೊರತುಪಡಿಸಿದ್ರೆ ರಷ್ಯಾದಿಂದ ಕಚ್ಚಾ ತೈಲ ಹೆಚ್ಚು ರಫ್ತು ಆಗುತ್ತಿದೆ.Petrol Price In India

ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್‍ಗಳಷ್ಟು ಕಚ್ಚಾ ತೈಲವನ್ನು ರಷ್ಯಾ ರಫ್ತು ಮಾಡುತ್ತಿದ್ದು, ರಷ್ಯಾದ ಒಟ್ಟು ರಫ್ತಿನಲ್ಲಿ ಅರ್ಧದಷ್ಟು ಯುರೋಪ್ ದೇಶಗಳಿಗೆ ರಫ್ತಾದರೆ, 42% ಏಷ್ಯಾ ಮತ್ತು ಓಷಿಯಾನಿಯಾಕ್ಕೆ ಭಾಗಕ್ಕೆ ರಫ್ತಾಗುತ್ತಿದೆ.today petrol price

ಭಾರತದಲ್ಲಿ ಬೆಲೆ ಏರಿಕೆ ಕಾರಣ

ಭಾರತ ದೇಶದ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ 61.6%, ಆಫ್ರಿಕಾದಿಂದ 14.2%, ಉತ್ತರ ಅಮೆರಿಕಾದಿಂದ 12%, ದಕ್ಷಿಣ ಅಮೆರಿಕಾದಿಂದ ಮತ್ತು ರಷ್ಯಾದಿಂದ 5.8%, ಪ್ರಪಂಚದ ಇತರ ದೇಶಗಳಿಂದ 2.5% ಕಚ್ಚಾ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದೆ.petrol price

ಇದೀಗ ರಷ್ಯಾ, ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ಬರುತ್ತಿದೆ ಕಚ್ಚಾ ತೈಲಗಳ ಪ್ರಮಾಣ ಕುಸಿತವಾಗಿದ್ದರಿಂದ ಬೆಲೆ ಏರಿಕೆ ಆಗುತ್ತಿದೆ.

ಉಕ್ರೇನ್, ರಷ್ಯಾ ಯುದ್ಧದಿಂದ ರಷ್ಯಾ ಮೇಲೆ ಯುರೋಪ್ ದೇಶಗಳು ಆರ್ಥಿಕ ನಿರ್ಬಂಧವನ್ನು  ಹೇರಿದ್ದು, ಇದರ ಭಾಗವಾಗಿ ಕಚ್ಚಾತೈಲದ ಆಮದನ್ನು ಈಗಾಗಲೇ ಯುರೋಪಿಯನ್ ದೇಶಗಳು ನಿಲ್ಲಿಸಿವೆ.

ಮೂರನೇ ಅತಿದೊಡ್ಡ ಕಚ್ಚಾತೈಲ ರಫ್ತು ದೇಶದಿಂದ ರಪ್ತು ನಿಂತಿರುವ ಹಿನ್ನೆಲೆ ಇತರೆ ಕಚ್ಚಾತೈಲ ಉತ್ಪಾದನಾ ದೇಶಗಳಲ್ಲಿ ಡಿಮ್ಯಾಂಡ್ ಹೆಚ್ಚಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಕಡಿಮೆ ಇದೆ ಹಾಗಾಗಿ ಪೂರೈಕೆ ಒತ್ತಡ ಹೆಚ್ಚಿದ ಹಿನ್ನೆಲೆ ಬೆಲೆ ಏರಿಕೆ ಕಂಡುಬರುತ್ತಿದೆ.

ನಮ್ಮ ಕಚ್ಚಾ ತೈಲ ಆಮದಿಗೆ ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್ಗೆ ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವಕ್ಕೆ ಎಚ್ಚರಿಕೆಯನ್ನು ನೀಡಿದೆ.petrol price delhi

ರಷ್ಯಾದ ಪ್ರಭಾವ

ಪಾಶ್ಚಿಮಾತ್ಯ ದೇಶಗಳಿಂದ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳ ಆಮದುಗಳ ಮೇಲಿನ ನಿಷೇಧವು ಜಾಗತಿಕ ಆರ್ಥಿಕತೆಗೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.

ಇದರಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ ಡಾಲರ್ 300ಗೆ ಏರಬಹುದು ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ತೈಲ ಆಮದಿಗೆ ಅಮೆರಿಕ ನಿರ್ಬಂಧವನ್ನು ಹೇರಿದ್ದು, ಈ ಹಿನ್ನೆಲೆ ಸಿಟ್ಟಾಗಿರುವ ರಷ್ಯಾ, ಈ ನಿರ್ಧಾರ ವಿಶ್ವ ಮಾರುಕಟ್ಟೆಗೆ ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ.petrol price in bangalore

ಈಗಾಗಲೇ ಮಾರುಕಟ್ಟೆಯಲ್ಲಿ ಬ್ಯಾರೆಲ್‍ಗೆ 130 ಡಾಲರ್ ದಾಟಿದೆ, ಒಂದು ವೇಳೆ ರಷ್ಯಾ ಕಚ್ಚಾ ತೈಲದ ಮೇಲೆ ನಿಷೇಧ ಹೇರಿದರೆ ಕಚ್ಚಾ ತೈಲದ ಬೆಲೆ ಊಹೆಗೂ ಮೀರಿ ಏರಿಕೆಯಾಗುತ್ತೆ ಎಂದು ಖಡಕ್ ಎಚ್ಚರಿಕೆಯನ್ನು ರಷ್ಯಾ ದೇಶ ಕೊಟ್ಟಿದೆ.

ಇದರಿಂದ ಸಹಜವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಬೆಲೆ ಏರಿಕೆಯ ಕಾಣುತ್ತಿದೆ.

ಸದ್ಯ ಪ್ರತಿ ದೇಶಗಳು ತಮ್ಮಲ್ಲಿರುವ ಸ್ಟಾಕ್ ಬಳಸಿಕೊಳ್ಳುತ್ತಿದೆ, ಸ್ಟಾಕ್ ಖಾಲಿಯಾಗುವ ಹೊತ್ತಿಗೆ ಯುದ್ಧ ನಿಂತರೇ ಬೆಲೆ ಈಗಿರುವ ಬೆಲೆಗೆ ಸ್ಥಿರವಾಗಬಹುದು ಎಂಬ ನಿರೀಕ್ಷೆ ಇದೆ.Petrol Price In India

ಯುದ್ಧ ಮುಂದುವರಿದರೆ ಕಚ್ಚಾತೈಲದ ಬೆಲೆ 200 ಡಾಲರ್ ಗಡಿ ದಾಟುವುದು ಖಚಿತವಾಗಿದೆ, ಇದರಿಂದ ಭಾರತವೂ ಸೇರಿದಂತೆ ಹಲವು ದೇಶಗಳು ದುಪ್ಪಟ್ಟು ಬೆಲೆ ತೆತ್ತು ಕಚ್ಚಾತೈಲ ಖರೀದಿ ಮಾಡಬೇಕಾಗುವ ಅನಿವಾರ್ಯತೆಗೆ ಬರಬಹುದು.

ಮತ್ತೆ ಆರ್​ಸಿಬಿಗೆ ‘ಕಾಮ್ ಬ್ಯಾಕ್’ ಮಾಡಿದ ಎಬಿ ಡಿವಿಲಿಯರ್ಸ್!

https://www.google.com/search?q=skillindiajobs.com&oq=&sourceid=chrome&ie=UTF-8

Social Share

Leave a Reply

Your email address will not be published. Required fields are marked *