ವೃದ್ದಿಮಾನ್ ಸಾಹರ ಮತ್ತೊಂದು ಸ್ಪೋಟಕ ಮಾಹಿತಿ !

Wriddhiman Tweet

ವೃದ್ದಿಮಾನ್ ಸಾಹ

ಭಾರತ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ವೃದ್ದಿಮಾನ್ ಸಾಹ ಅವರ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗದ ಬೆನ್ನಲ್ಲೇ ನೀಡಿದ ಸಂದರ್ಶದಲ್ಲಿ ಮಾತನಾಡಿದ್ದಾರೆ.

“ರಾಹುಲ್ ದ್ರಾವಿಡ್ ಅವರು ನನ್ನ ಬಳಿ ನೀನು ನಿವೃತ್ತಿ ಬಗ್ಗೆ ಯೋಚಿಸು ಎಂಬ ಮಾತು ಹೇಳಿದ್ದಾರೆಂದು” ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದಕ್ಕೆ ಸಂಬಂಧ ಪಟ್ಟ ತಮ್ಮ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.Wriddhiman Saha Tweet

ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಿಸಿಸಿಐ ಈ ಬಗ್ಗೆ ಶ್ರೀಘ್ರ ತನಿಖೆ ನಡೆಸಲಿದೆ ಎಂದು ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಹೇಳಿದ್ದಾರೆ.

ಹೀಗಿರುವಾಗ ಸಾಹ ಮತ್ತೊಂದು ಹೇಳಿಕೆ ನೀಡಿದ್ದಾರೆ, ಬಿಸಿಸಿಐ ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ ಎಂದರು.

ಹಾಗೊಂದು ವೇಳೆ ಅವರು ನನ್ನ ಬಳಿ ಆ ಪತ್ರಕರ್ತನ ಹೆಸರು ಹೇಳೆಂದು ಸೂಚಿಸಿದರೆ ನಾನು ಯಾವುದೇ ಕಾರಣಕ್ಕೂ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.

“ಈ ವಿಚಾರದ ಬಗ್ಗೆ ಬಿಸಿಸಿಐ ಇನ್ನೂ ನನ್ನನ್ನು ಸಂಪರ್ಕಿಸಿಲ್ಲ, ಪತ್ರಕರ್ತರ ಹೆಸರನ್ನು ಬಹಿರಂಗಪಡಿಸಲು ಅವರು ನನ್ನನ್ನು ಕೇಳಿದರೆ, ಯಾರೊಬ್ಬರ ವೃತ್ತಿಜೀವನಕ್ಕೆ ಹಾನಿ ಮಡಿದ ಹಾಗೆ ಆಗುತ್ತದೆ.

ವ್ಯಕ್ತಿಯನ್ನು ಕೆಳಗೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ, ಅದಕ್ಕಾಗಿಯೇ ನಾನು ನನ್ನ ಟ್ವೀಟ್‌ನಲ್ಲಿ ಅವರ ಹೆಸರನ್ನು ಕೂಡ ಬಹಿರಂಗ ಮಾಡಿಲ್ಲ.

ನನ್ನ ತಂದ-ತಾಯಿ ನನ್ನನ್ನು ಆರೀತಿ ಬೆಳೆಸಿಲ್ಲ, ನನ್ನ ಟ್ವೀಟ್‌ನ ಮುಖ್ಯ ಉದ್ದೇಶವೆಂದರೆ ಆಟಗಾರರ ಆಶಯವನ್ನು ಗೌರವಿಸದೆ ಮಾಧ್ಯಮಗಳಲ್ಲಿ ಯಾರಾದರೂ ಇಂತಹ ಕೆಲಸಗಳನ್ನು ಮಾಡಬಹುದು.

ಸ್ಕ್ರೀನ್ ಶಾಟ್​ನಲ್ಲಿ ಏನಿದೆ?

“ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ.

ಉತ್ತಮ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ, ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ.

ನೀವು ನಿಮಗೆ ಯಾರು ಸಹಾಯ ಮಾಡುತ್ತಿರೋ ಅವರನ್ನು ಆಯ್ಕೆ ಮಾಡಿ” ಎಂದು ವಾಟ್ಸ್​ಆ್ಯಪ್​ ಮೂಲಕ ಸರಣಿ ಸಂದೇಶ ಕಳುಹಿಸಿದ್ದಾರೆ.Wriddhiman Saha Tweet

ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ ಪತ್ರಕರ್ತ, ನೀವು ನನಗೆ ಕರೆ ಮಾಡಿಲ್ಲ ಎಂದರು.

ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ, ಈ ಅವಮಾನವನ್ನು ನಾನು ಸಾಮಾನ್ಯವೆಂದು ಪರಿಗಣಿಸುವುದಿಲ್ಲ.

ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ, ನೀವು ಮಾಡಬೇಕಾದ ಇದು ಕೆಲಸವಾಗಿರಲಿಲ್ಲ,” ಎಂದು ಕೋಪದಿಂದ ಸಂದೇಶ ಕಳುಹಿಸಿದ್ದಾರೆ.

ಈ ಸಂದೇಶಗಳ ಸ್ಕ್ರೀನ್​ ಶಾಟ್​ ತೆಗೆದಿದ್ದ ವೃದ್ಧಿಮಾನ್ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

“ಭಾರತೀಯ ಕ್ರಿಕೆಟ್​ಗೆ ನಾನು ಇಷ್ಟೆಲ್ಲಾ ಕೊಡುಗೆ ನೀಡಿದ್ದರೂ, ಗೌರವಾನ್ವಿತ ಪತ್ರಕರ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಈ ಸಮಸ್ಯೆ ಎದುರಿಸಿದ್ದೇನೆ.Wriddhiman Saha Tweet

“ನನ್ನ ಸಿನಿಮಾಗಳನ್ನು ನಾನೇ ನೋಡಿಲ್ಲ”ಶಾಕಿಂಗ್ ಹೇಳಿಕೆ ಕೊಟ್ಟ ಶಾರುಖ್!

https://www.google.com/search?q=way2plot&oq=w&aqs=chrome.3.69i60j69i59j46i39j69i59j69i60l4.6390j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *