ಯಶ್ ನಟಿಸಿದ ಎಲ್ಲಾ ಹಿಟ್ ಅಂಡ್ ಫ್ಲಾಪ್ ಚಿತ್ರಗಳು!

Yash

Yash All Movies

ರಾಕಿಂಗ್ ಸ್ಟಾರ್ ಯಶ್

ನವೀನ ಕುಮಾರ್ ಅವರು ರಂಗಮಂದಿರ ಹಾಗು ಕಿರುತೆರೆಯಿಂದ ಸಿನಿಪಯಣ ಆರಂಭಿಸಿದ ಯಶ್ ತನ್ನ ಅಭಿನಯ ಪ್ರತಿಭೆಯಿಂದ ಇಂದು ರಾಷ್ಟ್ರಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಇಲ್ಲಿಯವರೆಗೆ ನಟಿಸಿದ ಚಿತ್ರಗಳ ಸಂಖ್ಯೆ 20.

ಇವುಗಳಲ್ಲಿ ಮೂರು ಚಿತ್ರಗಳನ್ನು ಹೊರತು ಪಡಿಸಿ, ಉಳಿದೆಲ್ಲ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

ಯಶ್  ಸಿನಿಮಾ ಜೀವನ ನೋಡುವುದಾದರೆ, ಇವುಗಳಲ್ಲಿ ಫ್ಲಾಪ್ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆ.

ಬಹುತೇಕ ಎಲ್ಲಾ ಚಿತ್ರಗಳು ಯಶಸ್ಸು ಕಂಡಿದ್ದು, ಈ ಕೆಳಗೆ ಯಶ್ ರ ಹಿಟ್ ಮತ್ತು ಫ್ಲಾಪ್ ಚಿತ್ರಗಳ ಪಟ್ಟಿಯಿದೆ.

1. ಮೊಗ್ಗಿನ ಮನಸು (Super hit)

ಚಿತ್ರ ಬಿಡುಗಡೆ ದಿನಾಂಕ – 18 Jul 2008

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್

ಶಂಶಾಂಕ್ ನಿರ್ದೇಶನದ ಅಡಿಯಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ಮೊದಲ ಬಾರಿಗೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಯಶ್ ಗೆ ಒಂದು ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತು.

2. ರಾಕಿ (Flop)

ಚಿತ್ರ ಬಿಡುಗಡೆ ದಿನಾಂಕ – 25 Dec 2008

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಬಿಯಾಂಕಾ ದೇಸಾಯಿ

ಯಶ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಚಿತ್ರವಿದು.

ಒಳ್ಳೆಯ ಸ್ವಮೇಕ್ ಚಿತ್ರವಾದರೂ ವಿಮರ್ಶಕರಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆದ ಕಾರಣ ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಓಡಲಿಲ್ಲ.

3. ಕಳ್ಳರ ಸಂತೆ (Average)

ಚಿತ್ರ ಬಿಡುಗಡೆ ದಿನಾಂಕ – 18 Dec 2009

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಹರಿಪ್ರಿಯಾ

ಯಶ್ ಹಾಗೂ ಹರಿಪ್ರಿಯಾ ಕಾಂಬಿನೇಶನ್ ನಲ್ಲಿ ಬಂದ ಈ ಚಿತ್ರವನ್ನು ಸುಮನಾ ಕಿತ್ತೂರ್ ನಿರ್ದೇಶನ ಮಾಡಿದ್ದರು. ತಿಳಿ ಹಾಸ್ಯದ ಮೂಲಕ ಪ್ರಸ್ತುತ ರಾಜಕೀಯದ ವ್ಯಂಗ ಚಿತ್ರಣ ಹೊಂದಿದ್ದ ಈ ಚಿತ್ರ ಒಳ್ಳೆಯ ವಿಮರ್ಶೆ ಪಡೆಯಿತು. ಅದೇ ಸಮಯದಲ್ಲಿ ಗಣೇಶ್ ಮಳೆಯಲಿ ಜೊತೆಯಲಿ ಮತ್ತು ಪುನೀತ್ ರಾಮ್ ಚಿತ್ರಗಳು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದರಿಂದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆಯಿತು.Yash All Movies

4. ಗೋಕುಲ (average)

ಚಿತ್ರ ಬಿಡುಗಡೆ ದಿನಾಂಕ – 27 Nov 2009

ಮುಖ್ಯ ಪಾತ್ರದಲ್ಲಿ ನಟ ಯಶ್, ವಿಜಯ್ ರಾಘವೇಂದ್ರ

ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಪೂಜಾ ಗಾಂಧಿ ಮುಂತಾದವರು ನಟಿಸಿದ್ದರು. ಚಿತ್ರ ಸುಮಾರು 50 ದಿನಗಳ ಪ್ರದರ್ಶನ ಕಂಡು ಯಶಸ್ವಿಯಾಯಿತು.

5. ಮೊದಲಾ ಸಲ (Hit)

ಚಿತ್ರ ಬಿಡುಗಡೆ ದಿನಾಂಕ – 31 Dec 2010

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಭಾಮ

ಯಶ್ ಸಿನಿಜೀವನದ ಮೊದಲ ಸೋಲೋ ಹಿಟ್ ಚಿತ್ರ ಮೊದಲಾ ಸಲ. ಮುದ್ದಾದ ಮುಗ್ಧ ಪ್ರೇಮಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಮಲಯಾಳಿ ನಟಿ ಭಾಮಾ ನಾಯಕಿಯಾಗಿ ನಟಿಸಿದ್ದರು. ಹಾಗೇ ಈ ಚಿತ್ರ ಯಶ್ ಗೆ ಲವರ್ ಬಾಯ್ ಇಮೇಜ್ ನೀಡಿತು.

6. ರಾಜಧಾನಿ (Above Average)

ಚಿತ್ರ ಬಿಡುಗಡೆ ದಿನಾಂಕ – 11 Jun 2011

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಶೀನ ಶಹಬಾದಿ

ಈ ಚಿತ್ರದಲ್ಲಿ ಯಶ್ ಗ್ಯಾಂಗಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಒಳ್ಳೆಯ ಓಪನಿಂಗ್ ಪಡೆದುಕೊಂಡ ರಾಜಧಾನಿ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಪಡೆಯಿತು. ಹಿಂದಿ ಮತ್ತು ತೆಲಗು ಭಾಷೆಯಲ್ಲಿ ಕೂಡ ಬಿಡುಗಡೆಯಾಯಿತು.

7. ಕಿರಾತಕ (Hit)

ಚಿತ್ರ ಬಿಡುಗಡೆ ದಿನಾಂಕ – 14 Jun 2011

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಒವಿಯ ಹೆಲೆನ್

ತಮಿಳು ಚಿತ್ರದ ರಿಮೇಕ್ ಆದ ಈ ಚಿತ್ರ ಕನ್ನಡದಲ್ಲಿ ಅದ್ಭುತ ಯಶಸ್ಸು ಪಡೆಯಿತು. ಹಳ್ಳಿ ಹುಡುಗನಾಗಿ ಯಶ್ ಮನ ಸೆಳೆದರು. ವಿಶೇಷವೆಂದರೆ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ತೆರೆಕಂಡ 3000 (ಮೂರು ಸಾವಿರ) ನೇ ಚಿತ್ರ. ಇದರ ಸಿಕ್ವೆಲ್ ಆಗಿ ಮೈ ನೇಮ್ ಇಜ್ ಕಿರಾತಕ’ ಚಿತ್ರ ಘೋಷಣೆಯಾಗಿದೆ.

8. ಲಕ್ಕಿ (Hit)

ಚಿತ್ರ ಬಿಡುಗಡೆ ದಿನಾಂಕ – 24 Feb 2012

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ರಮ್ಯಾ

ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿದ ಲಕ್ಕಿ ಚಿತ್ರದಲ್ಲಿ ಯಶ್ ಜೊತೆ ರಮ್ಯಾ ನಾಯಕಿಯಾಗಿ ನಟಿಸಿದರು. ಚಿತ್ರದಲ್ಲಿ ಯಶ್ ಪಾತ್ರ ಎರಡು ಶೇಡ್ ಹೊಂದಿತ್ತು. ಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಬಾಕ್ಸಾಫೀಸಿನಲ್ಲಿ 15 ಕೋಟಿಗೂ ಹೆಚ್ಚು ಗಳಿಕೆ ಮಾಡಿತು.

9. ಜಾನು (Average)

ಚಿತ್ರ ಬಿಡುಗಡೆ ದಿನಾಂಕ – 01 Jun 2012

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ದೀಪಾ ಸನ್ನಿಧಿ

ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದ ಜಾನು ಚಿತ್ರದಲ್ಲಿ ಯಶ್ ಜೊತೆ ದೀಪಾ ಸನ್ನಿಧಿ ನಾಯಕಿಯಾಗಿ ನಟಿಸಿದರು. ಚಿತ್ರ ಒಳ್ಳೆಯ ಓಪನಿಂಗ್ ಪಡೆದು 50 ದಿನಗಳನ್ನು ಪೂರೈಸಿತು.Yash All Movies

10. ಡ್ರಾಮಾ (Hit)

ಚಿತ್ರ ಬಿಡುಗಡೆ ದಿನಾಂಕ – 23 Nov 2012

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್

ಯೋಗರಾಜ್ ಭಟ್ ಗರಡಿಯಿಂದ ಬಂದ ಡ್ರಾಮಾ ಚಿತ್ರದಲ್ಲಿ ಯಶ್-ರಾಧಿಕಾ ಜೋಡಿ ಮತ್ತೊಮ್ಮೆ ಮೋಡಿ ಮಾಡಿತು. ಚಿತ್ರದಲ್ಲಿ ಅಂಬರೀಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶತದಿನೋತ್ಸವ ಆಚರಿಸಿ 2012 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲೊಂದಾಗಿತ್ತು. 4 ಕೋಟಿ ಬಜೆಟ್ ಅಲ್ಲಿ ತಯಾರಾಗಿದ್ದ ಈ ಚಿತ್ರ 20 ಕೋಟಿಗೂ ಅಧಿಕ ಗಳಿಕೆ ಮಾಡಿತು.

11. ಗೂಗ್ಲಿ (Blockbuster)

ಚಿತ್ರ ಬಿಡುಗಡೆ ದಿನಾಂಕ – 19 Jul 2013

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಕೃತಿ ಖರಬಂದ

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ 2013 ರ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದು. ಶತದಿನೋತ್ಸವ ಪ್ರದರ್ಶನ ಕಂಡ ಈ ಚಿತ್ರ ಸುಮಾರು 25 ಕೋಟಿಗೂ ಅಧಿಕ ಗಳಿಕೆ ಮಾಡಿತು..

12. ರಾಜಾ ಹುಲಿ (Super-Hit)

ಚಿತ್ರ ಬಿಡುಗಡೆ ದಿನಾಂಕ – 01 Nov 2013

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಮೇಘನಾ ರಾಜ್

ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬಂದ ರಾಜಾಹುಲಿ ಚಿತ್ರದಲ್ಲಿ ಯಶ್ ಮಂಡ್ಯ ಸೊಗಡಿನ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡರು. ತಮಿಳಿನ ಸುಂದರ ಪಾಂಡಿಯನ್ ರಿಮೇಕ್ ಆದ ಈ ಚಿತ್ರದ ಮೂಲಕ ಯಶ್ ಹ್ಯಾಟ್ರಿಕ್ (ಡ್ರಾಮಾ, ಗೂಗ್ಲಿ, ರಾಜಾಹುಲಿ) ಹಿಟ್ ನೀಡಿದರು.

13. ಗಜಕೇಸರಿ (Hit)

ಚಿತ್ರ ಬಿಡುಗಡೆ ದಿನಾಂಕ – 23 May 2014

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಅಮೂಲ್ಯ

ಕ್ಯಾಮರಾಮೆನ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ಗಜಕೇಸರಿ ಚಿತ್ರದಲ್ಲಿ ಯಶ್ ಧ್ವಿಪಾತ್ರದಲ್ಲಿ ನಟಿಸಿದ್ದರು. ಒಂದು ಪುರಾತನ ಯೋಧನ ಪಾತ್ರವಾದರೆ, ಇನ್ನೊಂದು ಆಧುನಿಕ ಯುವಕನ ಪಾತ್ರ. ಚಿತ್ರದಲ್ಲಿ ಪುನರ್ಜನ್ಮದ ಕಥೆಯು ಸುಳಿಯುತ್ತದೆ.

14. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (Blockbuster)

ಚಿತ್ರ ಬಿಡುಗಡೆ ದಿನಾಂಕ – 25 Dec 2014

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್

ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್, ಸಾಹಸಸಿಂಹ ವಿಷ್ಣುವರ್ಧನ್ ಫ್ಯಾನ್ ಆಗಿ ನಟಿಸುತ್ತಾರೆ. ರಾಧಿಕಾ-ಯಶ್ ಜೋಡಿ ಈ ಚಿತ್ರದ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ನೀಡಿತು.

15. ಮಾಸ್ಟರ್ ಪೀಸ್ (Hit)

ಚಿತ್ರ ಬಿಡುಗಡೆ ದಿನಾಂಕ – 24 Dec 2015

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಶಾನ್ವಿ ಶ್ರೀವಾತ್ಸವ

ಮಂಜು ಮಾಂಡವ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ಜೊತೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದರು. ಚಿತ್ರದ ಒಂದು ಸಣ್ಣ ದೃಶ್ಯದಲ್ಲಿ ಯಶ್ ಭಗತ್ ಸಿಂಗ್ ವೇಷದಲ್ಲಿ ಕಾಣಿಸಿಕೊಂಡರು.

16. ಸಂತು ಸ್ಟ್ರೇಟ್ ಫಾರ್ವರ್ಡ್ (Average)

ಚಿತ್ರ ಬಿಡುಗಡೆ ದಿನಾಂಕ – 28 Oct 2016

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್

ಕೆ.ಮಂಜು ನಿರ್ಮಾಣ ಮತ್ತು ಮಹೇಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ನಾಲ್ಕನೇ ಬಾರಿ ಜೊತೆಯಾಗಿ ನಟಿಸಿದರು. ಈ ಚಿತ್ರ ಬಿಡುಗಡೆಯಾಗುವ ಮುನ್ನ ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥವಾಯಿತು.

17. ಕೆಜಿಎಫ್ (Industry Hit – Mega Blockbuster)

ಚಿತ್ರ ಬಿಡುಗಡೆ ದಿನಾಂಕ – 21 Dec 2018

ಮುಖ್ಯ ಪಾತ್ರದಲ್ಲಿ ನಟ ಯಶ್ ಮತ್ತು ಶ್ರೀನಿಧಿ ಶೆಟ್ಟಿ

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಮೂಲಕ ಯಶ್ ಕನ್ನಡದ ಅತಿ ದೊಡ್ಡ ಹಿಟ್ ಚಿತ್ರ ನೀಡಿದರು. ಈ ಚಿತ್ರ ಕನ್ನಡ ಮಾತ್ರವಲ್ಲದೇ ಭಾರತದಾದ್ಯಂತ ಜಯಭೇರಿ ಭಾರಿಸಿತು.

ರಾಧಿಕಾ ಪಂಡಿತ ವಿಮಾನದಲ್ಲಿ ಮಾಡಿದ್ದೇನು ಗೊತ್ತಾ!

https://www.google.com/search?q=way2plot&oq=w&aqs=chrome.1.69i60j69i59j69i57j46i39j69i60l4.899j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *