ಕಲ್ಯಾಣ ಕರ್ನಾಟಕ ಅಭಿವೃದಿ ಪ್ರಗತಿ ಪರಿಶೀಲನೆ!-Basavaraj Bommai

Basavaraj Bommai

Basavaraj Bommai

ಬಸವರಾಜ ಬೊಮ್ಮಾಯಿ  ಅವರು ಮುಖ್ಯಮಂತ್ರಿಗಳಾಗಿ  ಅಧಿಕಾರ  ವಹಿಸಿಕೊಂಡ ನಂತರ ಇದೆ ಮೊದಲ ಬಾರಿಗೆ ಅಧಿಕೃತ ಪ್ರವಾಸದಲ್ಲಿ ಬೀದರ ಜಿಲ್ಲೆಗೆ ಆಗಮಿಸಿದ್ದಾರೆ. 

ಇವರಿಗೆ ಬೀದರ ಜಿಲ್ಲೆಯ ಭಾಲ್ಕಿ ಶಾಸಕರು ವಿಶ್ವರ ಖಂಡ್ರೆ ವೈಯಕ್ತಿಕವಾಗಿ ಆತ್ಮೀಯವಾದ  ಸ್ವಾಗತವನ್ನು ಕೋರಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏಪ್ರಿಲ್ 9 ರಂದು ಬೀದರ ಜಿಲ್ಲೆಗೆ  ಬರುತ್ತಿರುವದು ಬಹು ಅನೀರಿಕ್ಷಿತ.

ಹಿಂದುಳಿದ ಬೀದರ್ ಜಿಲ್ಲೆಯ ಪ್ರಗತಿಗಾಗಿ ‘ಬಂಪರ ‘ ನೀಡುತ್ತಾರೆ ಎಂದು  ಜಿಲ್ಲೆಯ ಜನರ  ಕಾತರರಾಗಿದ್ದಾರೆ .

ಮುಖ್ಯಮಂತ್ರಿಯವರು   ಬೆಂಗಳೂರಿನಿಂದ  ವಿಮಾನದ  ಮೂಲಕ  ಬೆಳಿಗ್ಗೆ 10 .20 ಕ್ಕೆ  ಬೀದರಗೆ ಬಂದು ತಲುಪಿ ತದನಂತರ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮುಂಜಾನೆ 10 .45 ಕ್ಕೆ  ಬಸವಕಲ್ಯಾಣನಕ್ಕೆ ಬರುತ್ತಿದ್ದಾರೆ. 

ಕಲ್ಯಾಣದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೆಲ್ಲರೂ 11 ಗಂಟೆಗೆ ಮಂಡಳಿಯಲ್ಲಿ ವಿಶೇಷ  ಸಭೆಯನ್ನು ನಡೆಸಿದರು.

ನೂತನ ಅನುಭವ ಮಂಟಪ

Basavaraj Bommai

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವನ್ನು ಆರಂಭಿಸಬೇಕು ಎಂಬುವದು ಜಿಲ್ಲೆಯಲ್ಲಿನ ಪ್ರತಿಯೊಬ್ಬರ ಬಯಕೆಯಾಗಿದೆ . ಬೀದರ  ಜಿಲ್ಲೆಯ   ರೈತರ  ಜೀವನಾಡಿ  ಬೀದರನ್ನ  ಸಹಕಾರ ಸಕ್ಕರೆ ಕಾರ್ಖಾನೆ

ಪುನರ್ ಚೇತನಗೊಳಿಸುವುದು ಮುಖ್ಯಮಂತ್ರಿ ಅವರ ಜವಾಬ್ದಾರಿಯಾಗಿದೆ.

ಬಚಾವತ್ ನ್ಯಾಯ ಮಂಡಳಿ ನೀಡಿದ ತೀರ್ಪಿಗೆ ಅನುಗುಣವಾಗಿ ಬೀದರ ಜಿಲ್ಲೆಗೆ ಹಂಚಿಕೆ ಮಾಡಲಾಗಿರುವ 23 ಟಿಎಮ್ಸಿ ಅಡಿ ನೀರು ದಶಕಗಳಿಂದಲು ಕೂಡ ವೃಥಾ ತೆಲಂಗಾಣಕ್ಕೆ   ಹರಿದು ಹೋಗುತ್ತಿದೆ.

ಈ ನಿಟ್ಟಿನಲ್ಲಿ ವಿಶೇಷವಾಗಿ ಬೀದರ ಜಿಲ್ಲೆಗೆಂದೇ ನೀರಾವರಿಯನ್ನು ಯೋಜನೆಗಳನ್ನು ಘೋಷಿಸುತ್ತಾರೆ ಎಂಬುವುದು ಜನರ ನಿರೀಕ್ಷೆಗಳ ಪಟ್ಟಿಯಲ್ಲಿ ಮೇಲೆಯೆತ್ತಿಕಾಣುತ್ತಿದೆ.

ಕೃಷಿ, ತೋಟಗಾರಿಕೆ, ಅರೋಗ್ಯ, ರಕ್ಷಣೆ, ಖಾಲಿ ಹುದ್ದೆಗಳ ಭರ್ತಿ, ಕಲೆ, ಸಾಹಿತ್ಯೆ, ಕೈಗಾರಿಕೆ  ಕ್ರೀಡೆ.

ಮತ್ತು ತಂತ್ರಜ್ಞಾನ ಕ್ಷೇತ್ರ ಕುರಿತಂತೆ ಇಲ್ಲಿ ಆಗಬೇಕಾಗಿರುವ ಕೆಲಸ ಬಹಳಷ್ಟು ಇವೆ, ಜಿಲ್ಲೆ ಸಮಸ್ಯೆಗಳ ಸುಳಿಗೆ ಸಿಲುಕಿದೆ ಸಮಸ್ಯೆಗಳು ದಶಕಗಳಿಂದಲೂ ಸಮಸ್ಯೆಗಳಾಗಿಯೇ ಮುಂದುವರೆಯುತ್ತಿವೆ.

ಶಿಕ್ಷಣ ಗುಣಮಟ್ಟದ ಸುಧಾರಣೆ ಇದಂತೂ ಮರೀಚಿಕೆಯಾಗಿದೆ. ಶಿಕ್ಷಕರ, ಉಪನ್ಯಾಸಕರ  ಹಲವಾರು ಹುದ್ದೆಗಳು, ಹಲವು ವರ್ಷಗಳಿಂದ ಖಾಲಿ ಇವೆ  ಸರ್ಕಾರೀ ಶಾಲೆಯ ಕಟ್ಟಡಗಳು  ಶಿಥಿಲಾವಸ್ಥೆಯಲ್ಲಿದೆ.

ಶಾಲೆಯ ಶಿಕ್ಷಕರು ಹಾಗು ಉಪನ್ಯಾಸಕರ ಹುದ್ದೆಗಳು ಖಾಲಿ ಇರುವದು ಮತ್ತು ಶೈಕ್ಷಣಿಕ   ಸೌಲಭ್ಯವನ್ನು ಇಲ್ಲದಿರುವದು. 

ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೀದರ ಜಿಲ್ಲೆ ಅನ್ಯ ಜಿಲ್ಲೆಗಳಿಗೆ ಸರಿಸಾಟಿಯಾಗಿ ಸಾಧನೆ ಮಾಡುವುದಕ್ಕೆ ತೊಡಕಾಗಿ ಪರಿಣಮಿಸಿದೆ.

ಕೃಷಿ ಪದವಿ ಕಾಲೇಜು, ಇನ್ನೊಂದ ಸರ್ಕಾರಿ ಪಾಲಿಟೆಕ್ನಿಕ್, ಪ್ರವಾಸೋದ್ಯಮ ವಿಷಯದಲ್ಲಿ   ಪದವಿ, ಬಿಎಸ್ಸಿ .ಕಾರ್ಡಿಯಾಲಾಜಿ, ಬಿಎಸ್ಸಿ ಆಪ್ತಮಾಲಾಜಿ ಮತ್ತು ಬಿಎಸ್ಸಿ ನರ್ಸಿಂಗ್  ಕೋರ್ಸಗಳು ಬೇಕಾಗಿವೆ. 

ಬೀದರನಲ್ಲಿ  ಸರ್ಕಾರಿ ಇಂಜಿನಿಯರಿಂಗ ಕಾಲೇಜು ಬೇಗನೆ ಸಾಕಾರವಾಗಬೇಕಿದೆ, ತೋಟಗಾರಿಕೆ ಇಲ್ಲಿಯ ಹವಾಮಾನ ಹೇಳಿ ಮಾಡಿಸಿದಂತಿದೆ.

ಆದರೆ ಜಿಲ್ಲೆಯಲ್ಲಿ ರೇಷ್ಯಾ ವಲಯದಂತೆ ತೋಟಗಾರಿಕೆ ಕ್ಷೇತ್ರ ಕೂಡ ಸರ್ಕಾರದ ದಿವ್ಯ  ನಿರ್ಲಕ್ಷಕೀಡಾಗಿದೆ.

ವ್ಯವಸ್ಥೆಯ ಅಣುಕಾಗಿದೆ!

‘ಜಿಲ್ಲಾ ಕೇಂದ್ರ’ ಬೀದರನಲ್ಲಿ ಮಿನಿ ವಿಧಾನ ಸೌಧ ಹಾಗು ಜಿಲ್ಲಾ ಆಡಳಿತ ಸಂಕೀರ್ಣ ಇಲ್ಲದಿರುವದು ಅಣಕಿಸುವಂತಿದೆ. ಜಿಲ್ಲೆಯನ್ನು ಕೈಗಾರಿಕಾ ರಹಿತ ಜಿಲ್ಲೆ ಎಂದು ಘೋಷಿಸಿ  ಜಿಲ್ಲೆಗೆ ಕೈಗಾರಿಕೆಗಳನ್ನು ಹಾಗು ಉತ್ಪಾದನಾ ಘಟಕಗಳನ್ನು ಸೆಳೆಯಬೇಕಾಗಿದೆ.

ಐತಿಹಾಸಿಕ ಮಹತ್ವ ಹೊಂದಿರುವ ಜಿಲ್ಲೆಯಲ್ಲಿಯ ಪ್ರವಾಸೋದ್ಯಮ ವಲಯ ಅನಾಥವಾಗಿದೆ. ಟೂರಿಸ್ಟ ಗೈಡುಗಳು ಇಲ್ಲದಿರುವದು ಪ್ರವಾಸೋಧ್ಯಮ ವಲಯಕ್ಕೆ ದೃಷ್ಟಿಬೆಟ್ಟು. 

ಮೈಸೂರ ಜಿಲ್ಲೆಯ ಸರಿಸಾಟಿಯಾಗಿ ಇಲ್ಲಿ ಸ್ಮಾರಕಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿದ್ದರು  ಕೂಡ ಇಲ್ಲಿಯ ಪ್ರವಾಸೋದ್ಯಮ ವಲಯ ಇನ್ನು ಶಿಕವಾವಸ್ಥೆಯಲ್ಲಿದೆ. 

‘ದಯನೀಯ’ ಸ್ಥಿತಿಯಲ್ಲಿದೆ. ಕಲೆ, ಕಲಾವಿದರಿಗೆ, ಬಿದ್ರಿ ಕಲೆಗೆ ಹಾಗು ಬಿದ್ರಿ ಕಲಾಕೃಷಿಗಳ ಕುಶಲಕರ್ಮಿಗಳಿಗೆ ಪ್ರೋತ್ಸಹ ರಾಜಾಶ್ರಯದ ಅಗತ್ಯವಿದೆ.

ಈ ದಿಸೆಯಲ್ಲಿ ಮುಖಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಬೀದರ ಜಿಲ್ಲೆಯ ಜನರ  ನಿರೀಕ್ಷೆ ಅಪಾರವಾಗಿದೆ.

ದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ!

https://jcs.skillindiajobs.com/

Social Share

Leave a Reply

Your email address will not be published. Required fields are marked *