
M.S Dhoni
ಟೂರ್ನಿಯಲ್ಲಿನ ಸವಾಲು ಮುಗಿಯುತ್ತಿದ್ದಂತೆ ಧೋನಿ ಬೇಗ ಮನೆಗೆ ಹೋಗಿದ್ದರು, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದ್ದು, ಅದರಲ್ಲಿ ಧೋನಿಯಂತೆ ಕಾಣುವ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸದ್ಯ ಜಾರ್ಖಂಡ್ ನಲ್ಲಿ ಪಂಚಾಯತ್ ಚುನಾವಣೆಯು ನಡೆಯುತ್ತಿದ್ದು, ಅದಕ್ಕಾಗಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಫೋಟೋ ವೈರಲ್ ಒಂದು ಆಗಿದೆ.
ಈ ವ್ಯಕ್ತಿಯು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆ ಕಾಣಿಸಿಕೊಳ್ಳುತ್ತಾನೆ. ಸಿಸಿಎಲ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವಿವೇಕ್ ಕುಮಾರ್ ಎಂಬುವವರ ಫೋಟೋ ಇದೀಗ ವೈರಲ್ ಆಗಿದೆ.

ವಿವೇಕ್ ಕುಮಾರ್ ಅವರು ರಾಂಚಿಯ ಮೂರನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಪರಿಹಾರ ಕೇಂದ್ರದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.
ಧೋನಿಯಂತೆ ಕಾಣುವ ಈ ವಿವೇಕ್ ನನ್ನು ನೋಡಿದ ನಂತರ ಹಲವರು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಕೆಲವು ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿವೆ.
ಇಂಡಿಯನ್ ಪ್ರೀಮಿಯರ್ ಲೀಗ್
ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿ ಹೊರಬಿದ್ದಿತು, ಮೊದಲ ಕೆಲ ಆಟಗಳಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದರೆ, ತದನಂತರ ಎಂ.ಎಸ್ ಧೋನಿ ಪಟ್ಟವನ್ನು ಕೈಗೆತ್ತಿಕೊಂಡರು.
ಆದರೂ ಕೂಡ ಟೂರ್ನಿಯಲ್ಲಿ ನಿರೀಕ್ಷಿತ ಫಲ ದೊರಕಿಲ್ಲ, ಚನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು.
ಇನ್ನು ಎಂ.ಎಸ್ ಧೋನಿ ಜಾರ್ಖಂಡ್‌ನ ರಾಜಧಾನಿ ರಾಂಚಿ ಮೂಲದವರಾಗಿದ್ದು, ಪ್ರಸ್ತುತವಾಗಿ ಜಾರ್ಖಂಡ್‌ನಲ್ಲಿ ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ.
ಇಲ್ಲಿನ ಚುನಾವಣಾ ಕರ್ತವ್ಯದಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಸೋಶಿಯಲ್ ಮೀಡಿಯಾಯದಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

ಒಬ್ಬ ವ್ಯಕ್ತಿಯು ಧೋನಿಯಂತೆ ಕಾಣುತ್ತಿದ್ದು, ಅಭಿಮಾನಿಗಳು ಅದು ಧೋನಿಯೇ ಎಂದು ತಿಳಿದುಕೊಂಡಿದ್ದಾರೆ ಆದರೆ ಸಂಪೂರ್ಣ ಸತ್ಯಾಂಶ ಇಲ್ಲಿದೆ ನೋಡಿ.
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಪ್ರಸ್ತುತ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್ 15ನೇ ಸೀಸನ್‌ಗೂ ಮುನ್ನ ಅವರು ಚೆನ್ನೈ ಸೂಪರ್ ಕಿಂಗ್ಸ್ ತೊರೆದಿದ್ದರು.
ಆದರೆ ಋತುವಿನ ಮಧ್ಯದಲ್ಲಿ ಧೋನಿಗೆ ಮತ್ತೊಮ್ಮೆ ನಾಯಕತ್ವ ನೀಡಲಾಯಿತು. ರವೀಂದ್ರ ಜಡೇಜಾ ನಾಯಕತ್ವದ ತಂಡ ಉತ್ತಮ ಪ್ರದರ್ಶನ ನೀಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫೋಟೋದ ನಿಜ ಮಾಹಿತಿ!
ಚುನಾವಣಾ ಕರ್ತವ್ಯದಲ್ಲಿ ಎಂಎಸ್ ಧೋನಿ ನಿರತರಾಗಿದ್ದಾರೆ ಎಂದು ಹೇಳುವ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಆದರೆ ಆ ಫೋಟೋದಲ್ಲಿ ಕಾಣುವ ವ್ಯಕ್ತಿ ಧೋನಿ ಅಲ್ಲ.
ಈ ಫೋಟೋದಲ್ಲಿರುವ ಇವರ ಹೆಸರು ವಿವೇಕ್ ಕುಮಾರ್, ಸಿಸಿಎಲ್ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯವು ನಿರ್ವಹಿಸುತ್ತಿದ್ದಾರೆ.

ಸದ್ಯ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅವರು ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ನೋಡಲು ಧೋನಿಯಂತೆಯೇ ಇದ್ದು, ಇವರ ಫೋಟೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದನ್ನು ಕಂಡ ಅಭಿಮಾನಿಗಳು ಕೊಂಚ ತಲೆ ಕೆಡಿಸಿಕೊಂಡರು, ಧೋನಿ ಐಪಿಎಲ್ ಬಳಿಕ ಚುನಾವಣೆ ಡ್ಯೂಟಿಯಲ್ಲಿ ಭಾಗಿಯಗಿದ್ದಾರೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
2023ರ ಐಪಿಎಲ್ ನಲ್ಲಿ ಧೋನಿ ಆಡಲಿದ್ದಾರೆ!
ಸಿಎಸಕೆ ಐಪಿಎಲ್ 2022ರಲ್ಲಿ ರಾಜಸ್ಥಾನ ವಿರುದ್ಧ ಕೊನೆಯ ಪಂದ್ಯವನ್ನು ಆಡಿತ್ತು.
ಈ ಪಂದ್ಯದ ನಂತರ ಮಾತನಾಡಿದ ಧೋನಿ, “ಇದು ನನ್ನ ಕೊನೆಯ ಪಂದ್ಯವಲ್ಲ. ಐಪಿಎಲ್‌ನಲ್ಲಿ ಮತ್ತಷ್ಟು ಆಡಲಿದ್ದೇನೆ” ಎಂದು ಹೇಳಿದ್ದಾರೆ. ಈ ಮೂಲಕ ಕ್ಯಾಪ್ಟನ್ ಕೂಲ್ ಆಟವನ್ನು ಮತ್ತೆ ನೋಡುವ ಅವಕಾಶ ಅಭಿಮಾನಿಗಳಿಗೆ ಮತ್ತೆ ಒದಗಿ ಬರಲಿದೆ.