ಸುರೇಶ ಚನಶೆಟ್ಟಿ ಗೆಲುವು ನಿಶ್ಚಿತ : ಸಾಮಾಜಿಕ ಸಾಹಿತಿಗಳ ಸಮೀಕ್ಷೆ ಬಹಿರಂಗ
ನಾಳೆ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಈ ಬಾರಿ ಅಭ್ಯರ್ಥಿಗಳ ಮದ್ಯೆ ತೀವ್ರ ಪೈಪೋಟಿ ಕಂಡುಬರದಿದ್ದರೂ ವಯಕ್ತಿಕ ಟಿಪ್ಪಣಿಗಳು ಹೆಚ್ಚಾಗಿ ಕೇಳಿಬರುತ್ತೇವೆ .
ಜಿಲ್ಲೆಯಾದ್ಯಂತ ಹಲವಾರು ಸಾಹಿತಿಗಳು , ಚಿಂತಕರು ಮತ್ತು ಸಂಘಟಿಕರ ವಿಚಾರಗಳ ಪ್ರಕಾರ ಈ ಬಾರಿಯೂ ಸುರೇಶ ಚನಶೆಟ್ಟಿ ಯವರ ಅಭೂತಪೂರ್ವ ಗೆಲುವಿಗೆ ಎಲ್ಲರು ಮನಸ್ಸು ಮಾಡಿರುವುದು ಹೊಸಬದಲಾವಣೆಗೆ ನಾಂದಿಹಾಡಿದೆ.
ಈ ಹಿಂದಿನ ಸರ್ವ ಅಧ್ಯಕ್ಷರಿಗಿಂತ ತುಂಬಾ ವಿಭಿನ್ನವಾಗಿ ಕಾರ್ಯ ನಿರ್ವಿಹಿಸಿ , ಸಾಹಿತಿಗಳು , ಮಹಿಳೆಯರು ,ಯುವಕರು, ಕೃಷಿಕರು ಮತ್ತು ಮಕ್ಕಳ ಮನಸ್ಸಿನಲ್ಲಿ ಜಾಗಮಾಡಲು ಯಶಸ್ವಿಯಾಗಿದ್ದಾರೆ .
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಸಂಘಟನೆಗಳು ಬೆಂಬಲ ಸೂಚಿಸಿರುವುದು ಸುರೇಶ ಚನಶೆಟ್ಟಿ ಯವರಿಗೆ ಗೆಲುವಿನ ಹೊಸ್ತಿಲಿಗೆ ಮುಟ್ಟಿಸಿದೆ.
ಬೆಂಬಲ ಸೂಚಿಸಿದ ಪ್ರಮುಖ ಸಂಘ ಸಂಸ್ಥೆಗಳು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೀದರ್
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೀದರ್
ಉಪನ್ಯಾಸಕರ ಸಂಘ ಬೀದರ್
ಎಸ .ಸಿ /ಎಸ .ಟಿ ನೌಕರರ ಸಂಘ ಬೀದರ್
ಏನ್ ಜಿ ಓ ಗ್ರಹ ನಿರ್ಮಾಣ ನೌಕರರ ಸಂಘ
ಹೈದೆರಾಬಾದ್ ಕರ್ನಾಟಕ ಕಲಾವಿದರ ಒಕ್ಕೂಟ
ಮಕ್ಕಳ ಸಾಹಿತ್ಯ ಪರಿಷತ್ತು
ಕರ್ನಾಟಕ ರಾಜ್ಯ ಲೇಖಕಿಯರ ಸಂಘ
ಶ್ರೀಗನ್ನಡಂ ವೇದಿಕೆ
ನಿವೇದಿತಾ ಪ್ರತಿಷ್ಠಾನ
ಚುಟುಕು ಸಾಹಿತ್ಯ ಪರಿಷತ್
ದಾಸ ಸಾಹಿತ್ಯ ಪರಿಷತ್
ಬಸವ ಕೇಂದ್ರ
ಕರ್ನಾಟಕ ರಾಜ್ಯ ವಿಕಾಸ ಪರಿಷತ್
ಸಂಗೀತ ಕಲಾವಿದರ ಒಕ್ಕೂಟ ಬೀದರ್ ಇತ್ಯಾದಿ
ಹೀಗೆ ಹತ್ತು ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿರುವ ಶಕ್ತಿಯೇ ಇಂದು ಸುರೇಶ ಚನಶೆಟ್ಟಿ ಗೆಲುವಿನ ಶ್ರೀ ರಕ್ಷೆಯಾಗಿದ್ದು .
ಬೀದರ್ ಜಿಲ್ಲೆಯೇ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿಯಾಗಿ ಹಲವಾರು ಸಾಹಿತಿಗಳಿಂದ ಪಡೆದ ಮಾಹಿತಿ ಪ್ರಕಾರ ಸುರೇಶ ಚನಶೆಟ್ಟಿ ಯವರ ಗೆಲುವು ನಿಚ್ಚಳ ಅನಿಸುತ್ತೆ.
ಇದಕ್ಕೆ ಅವರ ಸರಳ ಮತ್ತು ರಾಜಕೀಯ ರಹಿತ ಕನ್ನಡ ಸೇವೆ ಹಾಗು ಜಿಲ್ಲೆಯಲ್ಲಿನ ಕನ್ನಡ ಅಭಿವೃದ್ಧಿಗಾಗಿ ಎಲ್ಲರನ್ನ ಒಗ್ಗಟಾಗಿ ತೆಗೆದುಕೊಂಡು ಎಲ್ಲರನ್ನ ಗೌರವಿಸಿ ಬದಲಾವಣೆ ತಂದಿರುವುದೇ ಕಾರಣವಾಗಿದೆ.
ಈ ಸರಿ ಕಣದಲ್ಲಿ ಮೂವರು ಅಭ್ಯರ್ಥಿಗಳಿದ್ದು ಸುರೇಶ ಚನಶೆಟ್ಟಿ, ಸಂಜೀವಕುಮಾರ ಅತಿವಾಳೆ ಮತ್ತು ರಾಜಕುಮಾರ್ ಹೆಬ್ಬಾಳೆ ಸ್ಪರ್ದಿಸಿದ್ದಾರೆ. ಕನ್ನಡ ಸೇವೆಗೆ ಪೂರ್ಣ ಪ್ರಮಾಣದ ಕನ್ನಡ ಸೇವೆಕರಿದ್ದಾರೆ ಒಳ್ಳೇದು ಎಂಬುದು ಬಹುತೇಕರ ಆಶಯವಾಗಿದೆ .
ಎಲ್ಲರೀತಿಯ ಸಮಾಜದ ಗಣ್ಯರಿಗೆ ಗೌರವಿಸಿ ಒಗ್ಗಟ್ಟಾಗಿ ನಿಂತೆಗೆದುಕೊಂಡು ಹೋಗುವ ಜಾತಿ ರಹಿತ ಸೇವೆಕರನ್ನ ಗೆಲ್ಲಿಸಬೇಕು ಎನ್ನೊವಿದು ಸಾಹಿತಿಗಳ ಆಂತರಿಕ ಕಳಕಳಿಯಾಗಿದೆ .