ಟೀಮ್ ಇಂಡಿಯಾಗೆ ಹೊಸ ಉಪನಾಯಕ!

jasprit bumrah vice captain

ಕ್ರಿಕೆಟ್

ಭಾರತ-ಶ್ರೀಲಂಕಾ ನಡುವೆ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.

ಭಾರತ ಟೆಸ್ಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ, ಆದರೆ ಈ ಸರಣಿ ಮೂಲಕ ಜಸ್​ಪ್ರೀತ್ ಬುಮ್ರಾ ಉಪನಾಯಕರಾಗಿದ್ದಾರೆ.

ಗಾಯಗೊಂಡಿರುವ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಸರಣಿಯಿಂದ ಹೊರಗುಳಿದಿದ್ದಾರೆ, ಹೀಗಾಗಿ ಉಪನಾಯಕನಾಗಿ ಜಸ್​ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಅದರಂತೆ ಶ್ರೀಲಂಕಾ ವಿರುದ್ದದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ಆಗಿ ಯಾರ್ಕರ್ ಮಾಂತ್ರಿಕ ಬುಮ್ರಾ ಆಡಲಿದ್ದಾರೆ.

ಇನ್ನು ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ ಕಂಬ್ಯಾಕ್ ಮಾಡಿದ್ದು, ಹಾಗೆಯೇ ವಿಶ್ರಾಂತಿಯ ಕಾರಣ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಈ ಸರಣಿಯಿಂದ ಹೊರಗೆ ಉಳಿದಿದ್ದಾರೆ.

ಭಾರತ-ಶ್ರೀಲಂಕಾ ನಡುವಣ ಸರಣಿ ಫೆಬ್ರವರಿ 24 ರಿಂದ ಶುರುವಾಗಲಿದೆ, ಈ ಸರಣಿಯ ಆಟದಲ್ಲಿ ಮೊದಲು ಟಿ20 ಪಂದ್ಯಗಳನ್ನು ಆಡಲಾಗುತ್ತಿದೆ.

ಇದಾದ ಬಳಿಕ ಟೆಸ್ಟ್ ಪಂದ್ಯ ನಡೆಯಲಿದ್ದು, ಇನ್ನು ಈ ಸರಣಿಯ ಪ್ರಮುಖ ವಿಷಯ ಎಂದರೆ ಡೇ-ನೈಟ್ ಟೆಸ್ಟ್ .

ಹೌದು, ಭಾರತ ತಂಡ ಒಂದು ವರ್ಷದ ನಂತರ ಮತ್ತೆ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.

ಈ ಆಟವು ಮಾರ್ಚ್ 12 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.

ಟಿ20 ಸರಣಿಯ ಮೊದಲ ಪಂದ್ಯ ಫೆಬ್ರವರಿ 24 ರಂದು ಲಕ್ನೋದಲ್ಲಿ ನಡೆಯುತ್ತಿದ್ದು, ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳು ಜರುಗಲಿವೆ.

ಹಾಗೆಯೇ ಟೆಸ್ಟ್‌ನ ಪಂದ್ಯಗಳು ಮೊಹಾಲಿ ಹಾಗು ಬೆಂಗಳೂರಿನಲ್ಲಿ ನಡೆಯಲಿವೆ, ಮೊದಲ ಟೆಸ್ಟ್ ಮಾರ್ಚ್ 4 ರಿಂದ 8 ರವರೆಗೆ ಮೊಹಾಲಿಯಲ್ಲಿ ನಡೆಯಲಿದೆ. jasprit bumrah vice captain

ಹಾಗೆ ಎರಡನೇ ಡೇ ನೈಟ್ ಟೆಸ್ಟ್ ಮಾರ್ಚ್ 12 ರಿಂದ 16 ರವರೆಗೆ ಬೆಂಗಳೂರಿನಲ್ಲಿ ಆಡಲಾಗುತ್ತದೆ.

ಶ್ರೀಲಂಕಾ ಸರಣಿಗೆ ಭಾರತ ತಂಡ ಹೀಗಿದೆ

ಟಿ20 ತಂಡ

ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್.

ದೀಪಕ್ ಹೂಡಾ, ಜಸ್​​ಪ್ರೀತ್ ಬುಮ್ರಾ (ಉಪನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಅವೇಶ್ ಖಾನ್. jasprit bumrah vice captain

ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್.

ಶುಭ್​ಮನ್ ಗಿಲ್, ಕೆಎಸ್ ಭರತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್.

ಜಸ್​ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಸೌರಭ್ ಕುಮಾರ್.

ಶ್ರೀಲಂಕಾ ವಿರುದ್ದ ಸರಣಿಯ ವೇಳಾಪಟ್ಟಿ

1ನೇ ಟಿ20 – ಫೆಬ್ರವರಿ 24

ಎರಡನೇ ಟಿ20 – ಫೆಬ್ರವರಿ 26

ಮೂರನೇ ಟಿ20 – ಫೆಬ್ರವರಿ 27

1ನೇ ಟೆಸ್ಟ್ – 4 ರಿಂದ 8 ಮಾರ್ಚ್

2ನೇ ಟೆಸ್ಟ್ – ಮಾರ್ಚ್ 12-16

ಪ್ರಭಾಸ್ ಅಮಿತಾಬ್”ಪ್ರಾಜೆಕ್ಟ್ ಕೆ”ನಲ್ಲಿ ಮುಖಾಮುಖಿ!

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.760j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *