
kangana and shabana hijab tweets
ಬಾಲಿವುಡ್
ಹಿಜಾಬ್ ಕುರಿತ ಚರ್ಚೆ ದೇಶದಾದ್ಯಂತ ನಡೆಯುತ್ತಿರುವಂತೆಯೇ ಬಾಲಿವುಡ್ ಚಿತ್ರರಂಗ ಕೂಡ ಈ ಕುರಿತು ಚರ್ಚೆಯಲ್ಲಿ ತೊಡಗಿಸಿಕೊಂಡಿದೆ.
ಹಲವು ಚಿತ್ರತಾರೆಯರು ಹಿಜಾಬ್ ಧರಿಸುವುದರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು, ಇತ್ತೀಚೆಗೆ ಕಂಗನಾ ರಣಾವತ್ ಕೂಡ ಅಭಿಪ್ರಾಯ ಹಂಚಿಕೊಂಡಿದ್ದರು.
ಇದೀಗ ಕಂಗನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆವಾಗಿದೆ, ಹಿರಿಯ ನಟಿ ಶಬಾನಾ ಅಜ್ಮಿ ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಂಗನಾ ಹಾಗೂ ಬರಹಗಾರ, ಚಿತ್ರ ಸಾಹಿತಿ ಜಾವೇದ್ ಅಖ್ತರ್ ನಡುವೆ ಮೊದಲಿನಿಂದಲೂ ಹಲವು ವಿಚಾರಗಳಿಗೆ ಬಿಸಿಬಿಸಿ ಚರ್ಚೆಯಾಗುತ್ತಿವೆ.
ಇತ್ತೀಚಿಗೆ ಜಾವೇದ್ ಅಖ್ತರ್ ಹಿಜಾಬ್ ಹಾಗೂ ಬುರ್ಖಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು, ಕಂಗನಾ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಇದೀಗ ಜಾವೇದ್ ಪತ್ನಿ ಅಬಾನಾ ಅಜ್ಮಿ, ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ, ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.
ಜಾವೇದ್ ಅಖ್ತರ್ ಹೇಳಿದ್ದೇನು
ಬುಧವಾರ ಟ್ವೀಟ್ವ ಮಾಡಿದ್ದ ಜಾವೇದ್ ಅಖ್ತರ್, ತಾವು ಮೊದಲಿನಿಂದಲೂ ಹಿಜಾಬ್ ಅಥವಾ ಬುರ್ಖಾಗಳ ಪರವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಲ್ಲದೇ ಈ ನಿಲುವಿನ ಪರವಾಗಿ ನಿಲ್ಲುತ್ತೇನೆ ಎಂದು ಅವರು ಹೇಳಿದ್ದರು, ಆದರೆ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.kangana and shabana hijab tweets
ಕಂಗನಾ ಪೋಸ್ಟ್ನಲ್ಲಿ ಏನಿತ್ತು
ಕಂಗನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆನಂದ್ ರಂಗನಾಥನ್ ಟ್ವೀಟ್ ಒಂದನ್ನು ಉದಾಹರಣೆಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಇರಾನ್ 1973ರಲ್ಲಿ ಇದ್ದ ಫೋಟೋವನ್ನು ಹಂಚಿಕೊಂಡಿದ್ದ ಆನಂದ್ ರಂಗನಾಥನ್, ಆಗ ಮಹಿಳೆಯರು ಧರಿಸಿದ್ದ ದಿರಿಸು ಮತ್ತು ಈಗ ಬುರ್ಖಾ ಧರಿಸುತ್ತಿರುವುದರ ಚಿತ್ರ ಹಂಚಿಕೊಂಡಿದ್ದರು.
ಇದನ್ನು ಉಲ್ಲೇಖಿಸಿದ್ದ ಕಂಗನಾ, ‘ಧೈರ್ಯವಿರುವವರು ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆಯಲಿ’ ಎಂದು ಹೇಳಿದರು.
ಅಲ್ಲದೇ ಸ್ವತಂತ್ರದ ಕುರಿತು ಎಲ್ಲರೂ ಯೋಚಿಸಿ, ಮತ್ತೆ ಬಂಧನದ ಕುರಿತಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.
ಕಂಗನಾ ಹೇಳಿಕೆಗೆ ಶಬಾನಾ ಅವರ ಪ್ರತಿಕ್ರಿಯೆ
ಕಂಗನಾ ಇನ್ಸ್ಟಾಗ್ರಾಂ ಸ್ಟೋರಿಯನ್ನು ಉಲ್ಲೇಖಿಸಿರುವ ಶಬಾನಾ ಅಜ್ಮಿ, ಕಂಗನಾ ಹೇಳಿಕೆಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.
ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆದು ಧೈರ್ಯ ತೋರಿಸಲಿ ಎಂದಿದ್ದ ಕಂಗನಾರ ಮಾತನ್ನು ಪ್ರಶ್ನಿಸಿರುವ ಜಾವೇದ್ ಅಖ್ತರ್ ಪತ್ನಿ ಶಬಾನಾ, ಕಂಗನಾಗೆ ಟಾಂಗ್ ಕೊಟ್ಟಿದ್ದಾರೆ.
‘ಅಫ್ಘಾನಿಸ್ತಾನ ಧಾರ್ಮಿಕ ನಿಯಮಗಳ ಮೇಲೆ ನಿಯಮಗಳನ್ನು ಹೊಂದಿರುವ ರಾಷ್ಟ್ರ, ಆದರೆ ನಾನು ಪರೀಕ್ಷಿಸಿದಾಗ ಭಾರತವು ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿತ್ತು’ ಎಂದು ಹೇಳಿದ್ದಾರೆ.
ಶಬಾನಾ ಹೇಳಿಕೆಗೆ ಅವರ ಅಭಿಮಾನಿಗಳು ದನಿಗೂಡಿಸಿದ್ದು, ಕಂಗನಾ ಅವರೊಂದಿಗೆ ವಾದ ಮಾಡಿ ಪ್ರಯೋಜನವಿಲ್ಲ ಎಂದು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಹಲವರು ಶಬಾನಾ ಅವರ ಹೇಳಿಕೆಗೆ ವಿರೋಧವನ್ನೂ ವ್ಯಕ್ತಡಿಸಿದ್ದಾರೆ.
ಹಿಜಾಬ್ ವಿವಾದದ ಕುರಿತಂತೆ ಹಲವು ತಾರೆಯರು ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡುತ್ತಿದ್ದಾರೆ,
ಖ್ಯಾತ ನಟರಾದ ಕಮಲ್ ಹಾಸನ್, ರೀಚಾ ಛಡ್ಡಾ, ಸ್ವರಾ ಭಾಸ್ಕರ್, ರಮ್ಯಾ ಸೇರಿದಂತೆ ಹಲವು ತಾರೆಯರು ಈ ಕುರಿತು ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಾಬ್ ಸಾಲು’ ಕುರಿತು ಹಲವಾರು ಹಿಂದಿ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.
ಈ ವಿವಾದವು ರಾಜ್ಯದಾದ್ಯಂತ ಹಾಗು ದೇಶಾದ್ಯಂತ ಹರಡುತ್ತಿದೆ, ಅಂತಿಮವಾಗಿ ರಾಷ್ಟ್ರೀಯ ಸುದ್ದಿಗಳನ್ನು ಮಾಡಿತು ಮತ್ತು ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಂದ ಕಾಮೆಂಟ್ಗಳನ್ನು ಆಕರ್ಷಿಸುತ್ತಿದೆ.kangana and shabana hijab tweets
ಲೇಖಕ-ಗೀತರಚನೆಕಾರ ಜಾವೇದ್ ಅಖ್ತರ್ ಸರಣಿ ಟ್ವೀಟ್‌ಗಳಲ್ಲಿ, ತಾನು ಬುರ್ಖಾ ಮತ್ತು ಹಿಜಾಬ್‌ನ ವಿರುದ್ಧ ಹೊಂದಿದ್ದೇನೆ ಆದರೆ ಸಣ್ಣ ಗುಂಪನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಗೂಂಡಾಗಳ ಗುಂಪುಗಳ ಬಗ್ಗೆ ಆಳವಾದ ತಿರಸ್ಕಾರವಲ್ಲದೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಅಥ್ಲೆಟಿಕ್ ಕ್ಲಬ್ ನಲ್ಲಿ ಗುಂಡಿನ ದಾಳಿ ಏನಿದು ಘೋರ ? -Athletic-Club-Vs-Real-Madrid