ಧಿಡೀರ್ ಅಡುಗೆ ಎಣ್ಣೆ ಬೆಲೆ ಏರಿಕೆ ಮುಗಿಬಿದ್ದ ಜನ!

Cooking Oil Price Increase

ಬೆಂಗಳೂರು

ಕರ್ನಾಟಕದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಉಕ್ರೇನ್​ನಲ್ಲಿ ಸಿಡಿಯುತ್ತಿರುವ ಬಾಂಬ್​ಗಳ ಬಿಸಿ ನೇರವಾಗಿ ನಮ್ಮ ಅಡುಗೆಮನೆಗಳಿಗೆ ತೊಂದರೆ ಆಗುತ್ತಿದೆ.

ಅಡುಗೆಗೆ ಬಳಸುವ ಸೂರ್ಯಕಾಂತಿ ಎಣ್ಣೆ ಒಂದೇ ವಾರದಲ್ಲಿ ಸುಮಾರು 100 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಕಾಳಸಂತೆಕೋರರು ಅಡುಗೆ ಎಣ್ಣೆಯ ಕಳ್ಳದಾಸ್ತಾನು ಮಾಡಲು ಮುಂದಾಗಿದ್ದು, ಇದನ್ನು ಹತ್ತಿಕ್ಕಲು ಸರ್ಕಾರವು ಕಠಿಣವಾದ ಕ್ರಮಗಳನ್ನು ಘೋಷಿಸಿದೆ.cooking oil rate

ಬೆಲೆ ಹೆಚ್ಚಾಗಬಹುದು ಎಂಬ ಆತಂಕದಲ್ಲಿ ಚಿಲ್ಲರೆಯಾಗಿ ಎಣ್ಣೆ ಖರೀದಿಸುವ ಗೃಹಸ್ಥರು ಹಾಗೂ ಸಗಟಾಗಿ ಎಣ್ಣೆ ಖರೀದಿರುವ ಹೊಟೆಲ್​ ಉದ್ಯಮಿಗಳು ಸಹ ದಾಸ್ತಾನು ಮಾಡಲು ಮುಂದಾಗಿದ್ದು ಅಡುಗೆ ಎಣ್ಣೆಯ ಬೆಲೆ ನೋಡನೋಡುತ್ತಲೇ ಆಕಾಶಕ್ಕೆ ಏರುತ್ತಿದೆ.

ಕರ್ನಾಟಕದಲ್ಲಿ ಕೇವಲ ಒಂದು ವಾರದ ಮೊದಲು ಸರಾಸರಿ 110ರಿಂದ  140 ರ ಆಸುಪಾಸಿನಲ್ಲಿ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆಯು ಸಿಗುತ್ತಿತ್ತು.

ಆದರೆ ಈಗ ಇದು 170 ರಿಂದ  220ಕ್ಕೆ ಏರಿಕೆಯಾಗಿದೆ, ಇದಕ್ಕೇನು ಕಾರಣ ಎಂದು ಹುಡುಕಿದರೆ ದೊಡ್ಡಬಳ್ಳಾಪುರದಂಥ ಸಣ್ಣ ಊರಿನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಶಿವರಾಮ ಅವರಂಥವರೂ ಸಹ ಉಕ್ರೇನ್ ಯುದ್ಧ ಎಂದು ನೆಪವನ್ನು ಹೇಳುತ್ತಾರೆ.

ಪಾಕೆಟ್ ಮೇಲೆ ಈ ಹಿಂದೆಯೂ ಇಷ್ಟೇ ಬೆಲೆ ಇತ್ತು, ಆದರೆ ನೀವು ಕೊಡುತ್ತಿರುವ ಡಿಸ್ಕೌಂಟ್ ಮಾತ್ರ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರೆ, ಪಾಕೆಟ್​ ಮೇಲಿನ ರೇಟ್ ಬದಲಿಸಲು ಕಂಪನಿಗೂ ಇನ್ನೂ ಸಾಧ್ಯವಾಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಸಗಟು ವ್ಯಾಪಾರಿಗಳು ಕೊಡುವ ಉತ್ತರಗಳೂ ಹೆಚ್ಚೂ ಕಡಿಮೆ ಇದೇ ರೀತಿ ಇರುತ್ತವೆ.

ಈ ಯುದ್ಧ ಹೀಗೆಯೇ ಮುಂದುವರಿದು, ಉಕ್ರೇನ್​ನ ಬಂದರಗಳು ವಹಿವಾಟಿಗೆ ಮುಕ್ತವಾಗದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಿದ್ದಾರೆ ಸಗಟು ವ್ಯಾಪಾರಿ ಮಂಜುನಾಥ್.cooking oil

ಕರ್ನಾಟಕವು ಎಣ್ಣೆ ಬೀಜಗಳ ದೊಡ್ಡ ಗ್ರಾಹಕ ರಾಜ್ಯವಾಗಿದೆ ಎಂದು ಕರ್ನಾಟಕ ಆಯಿಲ್ ಫೆಡರೇಷನ್​ನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಯ ಪೈಕಿ ಶೇ 15ರಷ್ಟು ಸೂರ್ಯಕಾಂತಿ ಎಣ್ಣೆಯೇ ಇದೆ, ಈ ಪೈಕಿ ಬಹುತೇಕ ಪ್ರಮಾಣದ ಉತ್ಪನ್ನ ಉಕ್ರೇನ್​ನಿಂದಲೇ ಭಾರತಕ್ಕೆ ಬರುತ್ತಿತ್ತು, ಎನ್ನುವುದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಮಾಹಿತಿ.

ಕರ್ನಾಟವು ತಿಂಗಳಿಗೆ 25 ರಿಂದ 30 ಸಾವಿರ ಟನ್​ಗಳಷ್ಟು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು.

ಪೂರೈಕೆ ಸರಪಳಿಯಲ್ಲಿ ಆಗಿರುವ ಸಮಸ್ಯೆಗಳಿಂದಾಗಿ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಕೊರತೆ ಕಾಣಿಸಿಕೊಂಡಿದ್ದು, ಬೆಲೆ ಸತತವಾಗಿ ಏರುತ್ತಿದೆ.Cooking Oil Price Increase

ಎಂಬ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್ ಜಾಲತಾಣ ವರದಿಯನ್ನು ಮಾಡಿದೆ.

ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ, ಇದೂ ಸಹ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳು ಹೇಳುತ್ತಾರೆ.

ಸಗಟು ದರಗಳಲ್ಲಿ ಪ್ರತಿ ಲೀಟರ್​ಗೆ 40 ಹೆಚ್ಚಳವಾಗಿದೆ, 5 ಲೀಟರ್​ ಎಣ್ಣೆ ಕ್ಯಾನ್​ಗಳ ಬೆಲೆ ಕೇವಲ 2 ತಿಂಗಳ ಅವಧಿಯಲ್ಲಿ 650 ರಿಂದ 800ಕ್ಕೆ ಏರಿಕೆಯಾಗಿದೆ.cooking oil price

ಈ ಪೈಕಿ ಕೇವಲ 7 ದಿನಗಳಲ್ಲಿ 100ರಷ್ಟು ಹೆಚ್ಚಾಗಿದೆ, ಒಂದು ಲೀಟರ್ ಎಣ್ಣೆ ಪೊಟ್ಟಣಗಳ ಬೆಲೆ 120 ರಿಂದ 200ರವರೆಗೆ ಹೆಚ್ಚಳವಾಗಿದೆ ಎಂದು ಚಿಲ್ಲರೆ ವ್ಯಾಪಾರಿ ಶಿವರಾಮ್ ಹೇಳುತ್ತಾರೆ.

ಆಹಾರ ಇಲಾಖೆಯ ಸಭೆ

ಉಕ್ರೇನ್-ರಷ್ಯಾ ದಾಳಿಯು ಕರ್ನಾಟಕದ ಮೇಲೆ ಬೀರಬಹುದಾದ ಪರಿಣಾಮಗಳನ್ನು ತಿಳಿದುಕೊಳ್ಳಲೆಂದು ಆಹಾರ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದರು.

 ಕಳ್ಳದಾಸ್ತಾನು ತಡೆಯಲು ಕಠಿಣ ಕ್ರಮಗಳನ್ನೂ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿತ್ತು ಎಂದು ಮೂಲಗಳು ಹೇಳಿವೆ.

ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಖಾದ್ಯ ತೈಲದ ಕೊರತೆ ಇಲ್ಲ, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ದಾಸ್ತಾನು ಇರಿಸಬಹುದಾದ ಪ್ರಮಾಣವನ್ನು ಈಗಾಗಲೇ ಕಡಿಮೆ ಮಾಡಿದ್ದೇವೆ.

 ಆದರೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಬಹುದು ಎನ್ನುವ ಆಸೆಯಿಂದ ಕೆಲವರು ದಾಸ್ತಾನು ಮಾಡಲು ಮುಂದಾಗಿರುವುದನ್ನು ತಡೆಯಲು ಸಾಧ್ಯವಿಲ್ಲ.cooking oil price increase

ಗೋದಾಮುಗಳ ಮೇಲೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಿದ್ದಾರೆ ಎಂದು ಆಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕಪಿಲ್ ಮೋಹನ್ ತಿಳಿಸಿದ್ದಾರೆ.

ದಿನಕ್ಕೆ ಬೆಂಗಳೂರಿಗೆ ಎಷ್ಟು ಟನ್ ಎಣ್ಣೆಬೇಕು?

ಬೆಂಗಳೂರು ನಗರದ ಜನಸಂಖ್ಯೆ 1.25 ಕೋಟಿ ದಾಟಿದೆ, ನಗರದ ಒಂದು ದಿನದ ಸೂರ್ಯಕಾಂತಿ ಎಣ್ಣೆಯ ಬಳಕೆಯು ಸರಾಸರಿ 900 ಟನ್ ಇದೆ.

ಕರ್ನಾಟಕಕ್ಕೆ ಮುಖ್ಯವಾಗಿ ಗುಜರಾತ್, ಆಂಧ್ರ ಪ್ರದೇಶ ಮತ್ತು ಮಂಗಳೂರಿನ ಬಂದರುಗಳಿಂದ ಸೂರ್ಯಕಾಂತಿ ಎಣ್ಣೆ ಸರಬರಾಜಾಗುತ್ತದೆ.

ಆದರೆ ಉಕ್ರೇನ್ ರಷ್ಯಾ ದಾಳಿಯ ನಂತರ ಸೂರ್ಯಕಾಂತಿ ಎಣ್ಣೆ ಪೂರೈಕೆ ಹೆಚ್ಚು ಕಡಿಮೆ ಸ್ಥಗಿತವಾಗಿದೆ.cooking oil price in karnataka

ಪೂರೈಕೆ ಹಾಗೂ ಮಾರಾಟ ವ್ಯವಸ್ಥೆಯಲ್ಲಿ ಆಗಿರುವ ಸಮಸ್ಯೆಯಿಂದ ಬೆಲೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಾರೆ, ಕರ್ನಾಟಕ ಎಣ್ಣೆ ಬೆಳೆಗಾರರ ಸಹಕಾರ ಮಹಾಮಂಡಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ರೆಡ್ಡಿ.Cooking Oil Price Increase

ಕುತೂಹಲ ಮೂಡಿಸಿದ ಆರ್​ಸಿಬಿ ಹೊಸ ನಾಯಕ ಯಾರು ಗೊತ್ತೇ!

https://skillindiajobs.com/

Social Share

Leave a Reply

Your email address will not be published. Required fields are marked *