
Amulya Twin Babies
ಅಮೂಲ್ಯ
ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ, ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.
ಈ ವಿಷಯವನ್ನು ಪತಿ ಜಗದೀಶ್ ಆರ್ ಚಂದ್ರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡುವ ಮೂಲಕ ಅಮೂಲ್ಯ ಅವರ ಮಾಹಿತಿ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ’.
ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು ಎಂದು ಹೇಳಿದರು .
ನಟಿ ಅಮೂಲ್ಯ ಅವರು ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಬೆಳಗ್ಗೆ 11.45ಕ್ಕೆ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸ್ಯಾಂಡಲ್ವುಡ್ ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮುಂತಾದವರು ದಂಪತಿಗೆ ಶುಭಾಶಯ ಹೇಳಿದ್ದಾರೆ.Amulya Twin Babies
ಈ ಸಂತೋಷದ ವಿಷಯವನ್ನು ತಿಳಿದ ಅಭಿಮಾನಿಗಳು ಕೂಡ ನೆಚ್ಚಿನ ನಟಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಬಾಲನಟಿಯಾಗಿ ಅಮೂಲ್ಯ
ಅಮೂಲ್ಯ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು, ‘ಚೆಲುವಿನ ಚಿತ್ತಾರ’ದ ಮೂಲಕ ನಾಯಕಿಯಾದ ಅವರು, ಅದರಲ್ಲಿನ ಪಾತ್ರ ಪೋಷಣೆಗೆ ಅಪಾರ ಜನಪ್ರಿಯತೆಯನ್ನು ಗಳಿಸಿದರು.
ಅಮೂಲ್ಯ ಅವರು ಕೂಡ ತುಂಬಾ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಕೊಟ್ಟಿದ್ದಾರೆ.
ಇವರು ಕೂಡ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಸಿನಿಮಾಗಳಿಗೆ ಜನರು ತುಂಬಾ ಕಾಯ್ತಾ ಇದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಖ್ಯಾತ ತಾರೆಯರೊಂದಿಗೆ ತೆರೆ ಹಂಚಿಕೊಂಡ ಕೀರ್ತಿ ಅವರದ್ದು, ಗಣೇಶ್, ಯಶ್, ಲವ್ಲೀ ಸ್ಟಾರ್ ಪ್ರೇಮ್, ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರಿಗೆ ಜೋಡಿಯಾಗಿ ನಟಿಸಿದ್ದಾರೆ.
‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಜತೆ ತೆರೆಹಂಚಿಕೊಂಡು ಅಪಾರ ಮೆಚ್ಚುಗೆಯನ್ನು ಗಳಿಸಿದರು.
ಅಮೂಲ್ಯ, ಜಗದೀಶ್ ಅವರ ಜೊತೆ ಮಾಡುವೆ ಆದಾಗಿನಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ, ಆದರೆ ಇವರ ಚಿತ್ರಗಳಿಗೆ ಅಭಿಮಾನಿಗಳಿಗೆ ಕಾತುರ.
ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವ ನಟಿಯಾಗಿ ಗುರುತಿಸಿಕೊಂಡಿದ್ದ ಅಮೂಲ್ಯ, 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಜತೆ ಅಮೂಲ್ಯ 2017ರಲ್ಲಿ ಮದುವೆ ನೆರವೇರಿತು.
‘ನಾವೀಗ ಕೇವಲ ಇಬ್ಬರಲ್ಲ’ ಎಂಬ ಕ್ಯಾಪ್ಷನ್ ಮೂಲಕ ಅಮೂಲ್ಯ ಕೆಲ ಸಮಯದ ಹಿಂದೆ ತಾಯಿಯಾಗುತ್ತಿರುವುದನ್ನು ಹಂಚಿಕೊಂಡಿದ್ದರು.
2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ, ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್ ಆಗಿ ನಟಿಸಿದ ಕೊನೇ ಸಿನಿಮಾ ‘ಮಾಸ್ತಿಗುಡಿ’.Amulya Twin Babies
2017ರಲ್ಲಿ ತೆರೆಕಂಡ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು, ಪ್ರಸ್ತುತ ಅಮೂಲ್ಯ ಹಾಗೂ ಜಗದೀಶ್ ಪೋಷಕರಾಗಿದ್ದಾರೆ.
ಸಂತೋಷದ ಸಮಯದಲ್ಲಿ ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ.