ಅಪ್ಪು ಜೀವನ ಚರಿತ್ರೆಯ ಪುಸ್ತಕ “ನೀನೇ ರಾಜಕುಮಾರ”

Puneet Rajkumar

puneet rajkumar biography

ಪುನೀತ್​ ರಾಜ್​ಕುಮಾರ

ಅಪ್ಪು ಅವರನ್ನು ಶರಣು ಹುಲ್ಲೂರು ಅವರು ಒಡನಾಟ ಬರೆದಿದ್ದಾರೆ.

ಇದರ ಬಗ್ಗೆ ಬರೆದುಕೊಂಡಿರುವ ಶರಣು, ‘ಪುನೀತ್​ ಅವರು ಯಾವತ್ತೂ ವರದಿಗಾರರ ಮೇಲೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೆ ತಿರುಗಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು.

ಒಂದು ರೀತಿಯಲ್ಲಿ ನಮ್ಮ ಮನೆಯ ಮಗನಂತೆ ಇದ್ದರು, ಆ ಪ್ರೀತಿ ಮತ್ತೆ ಎಂದು ಹಾಗೆಯೆ ಯಾರಲ್ಲೂ ಸಿಗುವುದಿಲ್ಲ.

ಹಾಗಾಗಿ ಅವರ ಒಡನಾಟವನ್ನು ದಾಖಲಿಸಬೇಕು ಮತ್ತೆ ಅವರ ಜೀವನವನ್ನು ಅಕ್ಷರ ರೂಪಕ್ಕೆ ತರಬೇಕೆನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. puneet rajkumar biography

ಇದೊಂದು ಸಿನಿಮಾ ಪತ್ರಕರ್ತರ ಪರವಾಗಿ ನಾನು ನೀಡುತ್ತಿರುವ ಪುಸ್ತಕದ ಗೌರವವಿದು’ ಎಂದು ಬರೆದುಕೊಂಡಿದ್ದಾರೆ.

ಪುಸ್ತಕ ಬರೆಯಲು ಕಾರಣ

ಅಪ್ಪು ಅವರ ಬಗೆ ಪುಸ್ತಕವನ್ನು ಬರೆಯಲು ಕಾರಣವಾದ ಘಟನೆಯನ್ನು ಶರಣು ನೆನಪಿಸಿಕೊಂಡಿದ್ದಾರೆ.

‘ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟೆಂಬರ್ 2020, ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಅಪ್ಪು ಅವರು.

ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕ ಜಾಕ್ ಮಂಜು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ’ ಮಾಡಿ ಎಂದು ಹೇಳಿದರು. puneet rajkumar biography

ಅಂದು ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಇದ್ದರು, ‘ಅಯ್ಯೋ ನನ್ನ ಪುಸ್ತಕ ಬೇಡ’ ಎಂದವರು.

ಅಲ್ಲಿದ್ದ ಎಲ್ಲರ ಒತ್ತಾಯಕ್ಕೆ ಅಪ್ಪು ಸರ್ ಒಪ್ಪಿಕೊಂಡರು, ಅಲ್ಲಿಂದ ನಾನು ಅಪ್ಪು ಅವರ ಬಗ್ಗೆ ಪುಸ್ತಕ ಬರೆಯಲು ಶುರು ಮಾಡಿದೆ’ ಎಂದು ಶರಣು ಹುಲ್ಲೂರು ಹೇಳಿದ್ದಾರೆ.

‘ಪುನೀತ್ ರಾಜಕುಮಾರ ಅವರನ್ನು ಮಾತನಾಡಲು ಹಲವು ಬಾರಿ ಪ್ರಯತ್ನ ಪಟ್ಟೆ ಆಗಲಿಲ್ಲ, ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. puneet rajkumar biography

ಆರು ತಿಂಗಳ ನಂತರ ಶೆರ್ಟನ್ ಹೋಟೆಲ್​​ನಲ್ಲಿ ಅಪ್ಪು ಅವರ ಜೊತೆ ಭೇಟಿ ಆಯಿತು ಅಲ್ಲಿ ಅವರು ಒಂದು ಮಾತು ಹೇಳಿದ್ದರು.

ಅದು ‘ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ, ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ.

ಒಂದು ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು, ಆದರೂ ನಾನು ನನ್ನ ಹಠ ಬಿಡಲಿಲ್ಲ.

ನನ್ನ ಪಾಡಿಗೆ ನಾನು ಪುಸ್ತಕ ಬರೆಯುವ ಕೆಲಸದ್ಲಲಿ ಇದ್ದೆ, ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು’ ಅಕ್ಟೋಬರ್ 29ರ ಕಹಿ ಘಟನೆ ನೆನಪಿಸಿಕೊಂಡರು.

‘ಪುನೀತ್ ರಾಜ್​ಕುಮಾರ್ ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರಲು ಪ್ರಾರಂಭಿಸಿವೆ.

ಇಡೀ ಕರುನಾಡೇ ಕಣ್ಣೀರಿಟ್ಟಿತು, ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು.

‘ಅಪ್ಪ ಮತ್ತು ಅಮ್ಮನ  ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುವುದು, ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು.

ಅಪ್ಪ-ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದಿರಿ ಎಂದು ಅರಿವಾಯಿತು, ಮತ್ತೆ ನನ್ನ ಕನಸಿಗೆ ಮರುಜೀವ ಬಂತು.

ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಅವರು ಪುಸ್ತಕದ ಬಗ್ಗೆ ಚಿಚರಣೆ ಮಾಡಿ ಮತ್ತೆ ಎಲ್ಲ ಸಂಗತಿಗಳನ್ನು ಕುಡಿಸಿ ಪುಸ್ತಕ ಮಾಡಿದೆ’ ಎಂದಿದ್ದಾರೆ.

ಮೊದಲ ಬಾರಿಗೆ ಶರಣು ಹುಲ್ಲೂರು ಬರೆದ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿದ್ದ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನುಬಿಡುಗಡೆ ಮಾಡುತ್ತಿದೆ.

ಖ್ಯಾತ ಬರಹಗಾರ ಜೋಗಿ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದು, ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಹೀಗೆ ತುಂಬಾ ಜನರ ಪುಸ್ತಕ ಬರೆದಿದ್ದಾರೆ.

ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser

https://www.google.com/search?q=way2plot&oq=wa&aqs=chrome.1.69i60j69i59j69i57j35i39j0i67j69i60l3.1320j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *