
insurance policy
ಕೋವಿಡ್-19 ಸಾಂಕ್ರಾಮಿಕ ಬಂದ ಬಳಿಕ ಜನರಲ್ಲಿನ ಆರೋಗ್ಯದ ಕಾಳಜಿ ತುಂಬಾ ಹೆಚ್ಚಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಬಹಳ ಜನ ಈಗಾಗಲೇ ಆರೋಗ್ಯ ವಿಮೆಗಳತ್ತ ಮೊರೆ ಹೋಗಿರುವುದು ಸಾಮಾನ್ಯವಾಗಿದೆ.
ಅನೇಕರು ಮಾಡುವ ತಪ್ಪು ಏನೆಂದರೆ ಯಾವುದೇ ವಿಮಾ ನೀವು ಪಾಲಿಸಿ ಖರೀದಿಸುವಾಗ ಸರಿಯಾದ ದಾಖಲೆಯ ಪರಿಶೀಲನೆ ಮಾಡುವದಿಲ್ಲ. insurance policy
ಅದರ ಜೊತೆಗೆ ವಿಮೆಯ ನಿಯಮ ಮತ್ತು ಷರತ್ತುಗಳನ್ನು ಗಮನ ಕೊಡುವುದಿಲ್ಲ.
ಹೀಗಾಗಿ ಜನರು ಆರೋಗ್ಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅದರ ವ್ಯಾಪ್ತಿ, ನಿಯಮಗಳು ಮತ್ತು ಪ್ರೀಮಿಯಂ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ವಿಮೆ ಪಾಲಿಸಿಯನ್ನು ಖರೀದಿಸುವ ಮೊದಲು ಇನ್ನೂ ಕೆಲವು ಅಂಶಗಳನ್ನು ನೋಡಿಕೊಳ್ಳಬೇಕಾಗಿದೆ.
ನಿಮಗೆ ವಿಮೆಯ ಅವಶ್ಯಕತೆ ಎಷ್ಟಿದೆ ಎಂದು ತಿಳಿರಿರಿ
ಯಾವುದೇ ವಿಮೆಯ ಪಾಲಿಸಿ ಖರೀದಿಗೂ ಮುನ್ನ ನಿಮ್ಮ ಅವಶ್ಯಕತೆಯ ಎಷ್ಟಿದೆ ಎಂಬುದನ್ನ ಮೊದಲು ಅರಿಯಿರಿ.
ವಿಮಾ ಪಾಲಿಸಿಗಳು ವ್ಯಕ್ತಿಯ ಲಿಂಗ, ವಯಸ್ಸು, ಆದಾಯ, ಶಿಕ್ಷಣ ಮಟ್ಟ, ವರ್ಷಗಳ ಅನುಭವ, ಸ್ಥಳ, ಮುಂತಾದವುಗಳ ಅನುಸಾರ ವೆಚ್ಚವನ್ನ ನಿರ್ಧರಿಸಲು ಸಹಾಯ ಮಾಡುತ್ತದೆ. ರೋಬಾಟ್ ಶಸ್ತ್ರಚಿಕಿತ್ಸೆಯಂತಹ ಆಧುನಿಕ ಸೌಲಭ್ಯಗಳನ್ನು ಒಬ್ಬರು ಬಯಸಿದರೆ ಅವರು ಹೆಚ್ಚಿನ ವ್ಯಾಪ್ತಿ ನೀತಿಯನ್ನು ಆಯ್ಕೆ ಮಡಿಕೊಳ್ಳಬೇಕು.
ಅಲ್ಲದೆ, ಯಾವುದೇ ಚಿಕಿತ್ಸೆಯ ಕ್ಯಾಪಿಂಗ್ ಅಥವಾ ಮಿತಿಗಾಗಿ ಕಂಪನಿಯನ್ನು ಮುಂಚಿತವಾಗಿ ಕೇಳಿ ತಿಳಿದುಕೊಳ್ಳಿ.
ಯಾವುದೇ ಚಿಕಿತ್ಸೆಯ ಆಯ್ಕೆ ಅಥವಾ ಯಾವುದೇ ಕಾಯಿಲೆಗೆ ಸೀಮಿತವಾಗಿರದ ನೀತಿಯನ್ನು ಆರಿಸಿಕೊಳ್ಳಿ.
ಆದ್ದರಿಂದ ನೀವು ಈಗಾಗಲೇ ಯಾವುದೇ ಕಾಯಿಲೆ ಅಥವಾ ಯಾವುದೇ ಗಂಭೀರ ರೋಗವನ್ನು ಹೊಂದಿದ್ದರೆ ಆ ಕುರಿತು ವಿಮೆ ಕವರ್ ಆಗುತ್ತದೆಯೇ ಎಂಬ ಮಾಹಿತಿಯನ್ನು ಚೆನ್ನಾಗಿ ಸಂಗ್ರಹಿಸಿ.
ವಿಮಾ ಕಂಪನಿಯು ಪಾಲಿಸಿಯಲ್ಲಿ ಅನ್ವಯವಾಗುವ ಕಾಯುವ ಅವಧಿಯನ್ನು ಪರಿಶೀಲನೆ ಮಾಡಿ.
ಕಡಿಮೆ ಕಾಯುವ ಅವಧಿಯನ್ನು ಹೊಂದಿರುವ ನೀತಿಗಳನ್ನು ಆಯ್ಕೆ ಮಾಡಲು ಪ್ರಯತ್ನ ಮಾಡಿ.
ನಗದುರಹಿತ ಚಿಕಿತ್ಸೆ ಆಯ್ಕೆ
ಮೊದಲು ನೀವು ಆಸ್ಪತ್ರೆಯ ನೆಟ್‌ವರ್ಕ್ ಎಷ್ಟಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಅದರಲ್ಲೂ ಅವರು ನಗದುರಹಿತ ಚಿಕಿತ್ಸೆಯ ಸೌಲಭ್ಯವನ್ನು ನೀಡುತ್ತಾರೆಯೇ ಎಂದು ಪರಿಶೀಲನೆ ಮಾಡಿ. insurance policy
ಏಕೆಂದರೆ ವೈದ್ಯಕೀಯ ತುರ್ತು ಸಮಯದಲ್ಲಿ ಮುಂಗಡ ಪಾವತಿ ಮಾಡುವುದು ಕಷ್ಟವಾಗಿರುತ್ತದೆ.
ಆದ್ದರಿಂದ ಆಸ್ಪತ್ರೆಗಳ ವ್ಯಾಪಕ ಜಾಲದ ಜೊತೆಗೆ ದೇಶಾದ್ಯಂತ ನಗದುರಹಿತ ಮತ್ತು ವ್ಯಾಪ್ತಿಯನ್ನು ನೀಡುವ ಕವರ್ ಆಯ್ಕೆಮಾಡಿ.
ಕಡಿಮೆ ಪ್ರೀಮಿಯಂ ಆಯ್ಕೆ ಮಾಡಿ
ಇದರ ಜೊತೆಗೆ ನೀವು ಆಯ್ಕೆ ಮಾಡಿದ ಪಾಲಿಸಿಯು ಕಡಿಮೆ-ಪ್ರೀಮಿಯಂನೊಂದಿಗೆ ಉತ್ತಮ ಪ್ರಯೋಜನಗಳನ್ನು ಹೊಂದಿದಿಯೇ ಎಂದು ಖಚಿತಪಡಿಸಿಕೊಳ್ಳಿ. insurance policy
ಉದಾಹರಣೆಗೆ, ವಿಮಾದಾರರ ವೆಬ್‌ಸೈಟ್‌ನಿಂದ ನೇರವಾಗಿ ವಿಮಾ ಪಾಲಿಸಿಯನ್ನು ಖರೀದಿಸುವುದರಿಂದ ಆನ್‌ಲೈನ್‌ನಲ್ಲಿ ರಿಯಾಯಿತಿ ಪಡೆಯಲು ಸಹಾಯ ಮಾಡುತ್ತೆ.
ಆಸ್ಪತ್ರೆ ಮತ್ತು ಇತರ ವ್ಯಾಪ್ತಿ
ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವ ಮೊದಲು ಪಾಲಿಸಿದಾರನು ಯಾವಾಗಲೂ ತನ್ನ ಮತ್ತು ಅವನ ಅವಲಂಬಿತರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಬೇಕು.
ಆಸ್ಪತ್ರೆಯ ಪೂರ್ವ ಮತ್ತು ನಂತರದ ಖರ್ಚುಗಳನ್ನು ಒಳಗೊಂಡಿರುವ ನೀತಿಯನ್ನು ಆಯ್ಕೆ ಮಾಡಿ ಎಂದು ಹೇಳುತ್ತಾರೆ.