
Puneet Rajakumar
ಪುನೀತ್ ರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಮೇಲೆ ಜನರು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ, ಅವರು ನಿಧನ ಹೊಂದಿದ ನಂತರದಲ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಪುನೀತ ರಾಜಕುಮಾರ ಹೆಸರಿನಲ್ಲಿ ಉಪಗ್ರಹ ಹಾರಿಸುವ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಕೊಟ್ಟಿದ್ದಾರೆ.
ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಸಂತೋಷ ಪಟ್ಟಿದ್ದಾರೆ, ಈ ಉಪಗ್ರಹದಿಂದ ಆಗುವ ಉಪಯೋಗಗಳು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ರಸ್ತೆ ಹಾಗೂ ಪಾರ್ಕ್ಗಳಿಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ, ಈಗ ಅಚ್ಚರಿ ಎಂಬಂತೆ ಪುನೀತ್ ಹೆಸರಲ್ಲಿ ಉಪಗ್ರಹ ಉಡಾವಣೆಯನ್ನು ಮಾಡಲಾಗುತ್ತಿದೆ.
ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಮಾಹಿತಿಯನ್ನು ನೀಡಿದ್ದಾರೆ, ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಖುಷಿಪಟ್ಟಿದ್ದಾರೆ.
ಅವರ ಹೆಸರಿನಲ್ಲಿ ಉಡಾವಣೆಯಾಗುವ ಉಪಗ್ರಹದಿಂದ ಆಗುವ ಉಪಯೋಗಗಳು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
‘ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಪಗ್ರಹ ಉಡಾವಣೆಯನ್ನು ಮಾಡಲಾಗುತ್ತಿದೆ, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಇದು ಲಾಂಚ್ ಆಗಬಹುದು ಎಂದು ತಿಳಿದು ಬಂದಿದೆ.Puneet Rajakumar
1.90 ಕೋಟಿ ವೆಚ್ಚದಲ್ಲಿ ಉಪಗ್ರಹವು ಸಿದ್ಧವಾಗುತ್ತಿದೆ, 1.5 ಕೆ.ಜಿ. ತೂಕವಿರುವ ಉಪಗ್ರಹ ಸಿದ್ಧವಾಗುತ್ತಿದೆ’ ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ರಸ್ತೆ
ಪುನೀತ ರಾಜಕುಮಾರ್ ನಿಧನ ಹೊಂದಿ ಬಹಳ ದಿನವಾದರೂ ಜನರಿಗೆ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಅಭಿಮಾನವನ್ನು ವಿವಿಧ ರೀತಿಗಳಲ್ಲಿ ತೋರಿಸುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ಹೆಸರನ್ನು ರಸ್ತೆಯೊಂದಕ್ಕೆ ಇಡಲು ಬಿಬಿಎಂಪಿ ಅನುಮೋದನೆಯನ್ನು ನೀಡಿತ್ತು.
12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ‘ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯವನ್ನು ಕೈಗೊಂಡು ಅನುಮೋದನೆ ನೀಡಲಾಗಿದೆ.
ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಪುನೀತ ರಾಜಕುಮಾರ್ ಹೆಸರನ್ನು ಇಡಲಾಗುತ್ತದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಾಗೂ ಆಡಳಿತಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ಪುನೀತ್ ರಾಜ್‍ಕುಮಾರ್ ರಸ್ತೆ ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರವನ್ನು ಸಂಪರ್ಕಿಸುತ್ತದೆ.Puneet Rajakumar
ಪುನೀತ ರಾಜಕುಮಾರ್ ಸಮಾಧಿಗೆ ಪೂಜೆ
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಸುಮಾರು ನಾಲ್ಕು ತಿಂಗಳು ಮುಗಿದಿದೆ.
‘ಪವರ್ ಸ್ಟಾರ್’ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಇನ್ನು ಸಾಧ್ಯವಾಗುತ್ತಲೇ ಇಲ್ಲ.
ಅ.29ರಂದು ಅಪ್ಪು ಹೃದಯಾಘಾತದಿಂದ ನಿಧನರಾದಾಗ ಅವರ ಕುಟುಂಬಕ್ಕೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ.
ಇಂದಿಗೂ ಕೂಡ ಪುನೀತ ರಾಜಕುಮಾರ ಪತ್ನಿ-ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ, ಇಂದು ಫೆಬ್ರವರಿ ತಿಂಗಳ ಕೊನೇ ದಿನ.
ಹಾಗಾಗಿ 29ನೇ ತಾರೀಕಿನ ಬದಲಿಗೆ ಒಂದು ದಿನ ಮುಂದೆಯೇ ಪುನೀತ್ ರಾಜ್ಕುಮಾರ ಸಮಾಧಿಗೆ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.
ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ಪೂಜೆ ಮಾಡಿದ್ದಾರೆ.
ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser
ದರ್ಶನ ಅವರ ಬಾಕ್ಸ್ ಆಫೀಸ್ ಫ್ಲಾಪ್ ಸಿನಿಮಾಗಳು!